Advertisement

ಫಿಕ್ಸಿಂಗ್‌ ಆರೋಪಿ ಚಾವ್ಲಾ  ಹಸ್ತಾಂತರಕ್ಕೆ ಪ್ರಯತ್ನ

06:00 AM Apr 25, 2018 | Team Udayavani |

ಲಂಡನ್‌: ಇಂಗ್ಲೆಂಡ್‌ ಮೂಲದ ಫಿಕ್ಸಿಂಗ್‌ ಆರೋಪಿ ಸಂಜೀವ್‌ ಕುಮಾರ್‌ ಚಾವ್ಲಾ ಅವರನ್ನು ಹಸ್ತಾಂತರಿಸಲು ಭಾರತ ಮಾಡಿದ ಮನವಿಯನ್ನು ತಿರಸ್ಕರಿಸಿದ್ದ ಕೆಳಗಿನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಇಂಗ್ಲೆಂಡಿನ ಉಚ್ಚ ನ್ಯಾಯಾಲಯ ಮಂಗಳವಾರ ಆರಂಭಿಸಿದೆ. 2000ದ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೋನಿಯೆ ಭಾಗಿಯಾಗಿದ್ದ  ಮ್ಯಾಚ್‌ಫಿಕ್ಸಿಂಗ್‌ ಹಗರಣದಲ್ಲಿ ಚಾವ್ಲಾ ಪ್ರಮುಖ ಆರೋಪಿಯಾಗಿದ್ದಾರೆ.

Advertisement

ಭಾರತ ಸರಕಾರದ ಪರವಾಗಿ ಕ್ರೌನ್‌ ಪ್ರಾಸಿಕ್ಯೂಶನ್‌ ಸರ್ವೀಸ್‌ (ಸಿಪಿಎಸ್‌) ವಾದಿಸುತ್ತಿದ್ದು  ವೆಸ್ಟ್‌ಮಿನ್ಸ್‌ಸ್ಟರ್‌ ಮ್ಯಾಜಿಸ್ಟ್ರೇಟ್ಸ್‌ ಕೋರ್ಟ್‌ನ ತೀರ್ಪನ್ನು ತಳ್ಳಿಹಾಕುವಂತೆ ಮತ್ತು ಚಾವ್ಲಾ ಅವರನ್ನು ಹಸ್ತಾಂತರಿಸುವಂತೆ ಮನವಿ ಮಾಡಿದ್ದಾರೆ. ವೆಸ್ಟ್‌ಮಿನ್ಸ್‌ಸ್ಟರ್‌ ಕೋರ್ಟ್‌ ಈ ಮೊದಲು ಚಾವ್ಲಾ ಅವರನ್ನು ಹಸ್ತಾಂತರ ಮಾಡುವುದನ್ನು ತಿರಸ್ಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next