Advertisement

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

09:43 PM Jul 26, 2021 | Team Udayavani |

ಲಂಡನ್​ : ಉದ್ಯಮಿ ವಿಜಯ್ ಮಲ್ಯ ಅವರು ದಿವಾಳಿಯಾಗಿದ್ದಾರೆ ಎಂದು ಲಂಡನ್ ಹೈಕೋರ್ಟ್​​ ಸೋಮವಾರ ಘೋಷಣೆ ಮಾಡಿದೆ.

Advertisement

ಭಾರತೀಯ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿ ಹೊರ ದೇಶಕ್ಕೆ ಪರಾರಿಯಾಗಿ ಲಂಡನ್ ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರಿಗೆ ಇದೀಗ ಭಾರೀ ಹಿನ್ನೆಡೆಯಾಗಿದೆ. ವಿಜಯ್ ಮಲ್ಯ ‘ದಿವಾಳಿ’ ಎಂದು ಘೋಷಣೆ ಮಾಡಿರುವುದರಿಂದ ಭಾರತೀಯ ಬ್ಯಾಂಕ್​ಗಳಿಗೆ ದೊಡ್ಡಮಟ್ಟದ ಗೆಲುವು ಸಿಕ್ಕಂತಾಗಿದೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸಹಭಾಗಿತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟವು ಇದೀಗ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ನೀಡಿದ ಸಾಲದಿಂದ ಹಣ ವಸೂಲು ಮಾಡಲು ಸಹಕಾರಿಯಾಗಲಿದೆ.

ಇನ್ನು ವಿಜಯ್ ಮಲ್ಯ ಅವರು ಲಂಡನ್​ ಹೈಕೋರ್ಟ್​ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆದರೆ ಅದಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next