Advertisement

ಪತ್ನಿಯನ್ನು ಕೊಂದು ವಾರಗಳ ಕಾಲ ಮನೆಯಲ್ಲಿಟ್ಟು ದೇಹವನ್ನು 200 ತುಂಡು ಮಾಡಿ ನದಿಗೆಸೆದ ಪತಿ

01:00 PM Apr 07, 2024 | Team Udayavani |

ಲಂಡನ್: ಪತಿಯೊರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದು ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ಮನೆಯಲ್ಲೇ ಒಂದು ವಾರಗಳ ಕಾಲ ಇರಿಸಿ ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನದಿಗೆಸೆದಿರುವ ಭಯಾನಕ ಘಟನೆಯೊಂದು ಯುಕೆ ಯಲ್ಲಿ ನಡೆದಿದೆ.

Advertisement

ಏನಿದು ಘಟನೆ:
ಕಳೆದ ಮಾರ್ಚ್ 25 ರಂದು ಲಂಡನ್ ನ ಲಿಂಕನ್‌ಶೈರ್‌ನ ಬಾಸಿಂಗ್‌ಹ್ಯಾಮ್‌ನಲ್ಲಿರುವ ವಿಥಮ್ ನದಿಯಲ್ಲಿ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರು ಇದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ದೂರಿನ ಸಂಬಂಧ ನದಿ ಬಳಿಗೆ ಬಂದ ಪೊಲೀಸರು ಪ್ಲಾಸ್ಟಿಕ್ ಚೀಲವನ್ನು ನದಿಯಿಂದ ಮೇಲಕ್ಕೆತ್ತಿ ನೋಡಿದಾಗ ಅದರಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದೆ, ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ. ಘಟನೆ ಸಂಬಂಧ ಕೊಲೆಯಾದ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದ ವೇಳೆ ಮೊದಲು ತನಗೆ ಏನೂ ಗೊತ್ತಿಲ್ಲ ತನ್ನ ಪತ್ನಿ ನಾಪತ್ತೆಯಾಗಿ ವಾರಗಳು ಕಳೆದಿದೆ ಎಂದು ಹೇಳಿದ್ದ ಇದರಿಂದ ಅನುಮಾನಗೊಂಡ ಪೊಲೀಸರು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಕುರಿತು ಹೇಳಿಕೆ ನೀಡಿದ ಪತಿ, ತನ್ನ ಪತ್ನಿ ನನಗೆ ನಿರಂತರ ಕಿರುಕುಳ ನೀಡುತ್ತಿದ್ದಳು ಇದರಿಂದ ಬೇಸತ್ತ ನಾನು ಆಕೆಯ ಹತ್ಯೆ ಮಾಡಲು ನಿರ್ಧರಿಸಿ ಮನೆಯ ಬೆಡ್ ರೂಮ್ ನಲ್ಲಿ ಆಕೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ ದೇಹವನ್ನು ಬಾತ್ ರೂಮ್ ಗೆ ತಂದು ಅಲ್ಲಿ ತುಂಡರಿಸಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಅಡುಗೆ ಕೊನೆಯಲ್ಲಿ ಒಂದು ವಾರಗಳ ಕಾಲ ಇರಿಸಿದ್ದೆ ಇದಾದ ಬಳಿಕ ಓರ್ವ ವ್ಯಕ್ತಿಗೆ ಸ್ವಲ್ಪ ದುಡ್ಡು ನೀಡಿ ಪ್ಲಾಸ್ಟಿಕ್ ಚೀಲವನ್ನು ನದಿಗೆ ಎಸೆಯಲು ಹೇಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ತನ್ನ ಪತ್ನಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಹೇಳಿ ತನ್ನ ಮೈಮೇಲೆ ಇದ್ದ ಗಾಯದ ಗುರುತುಗಳನ್ನು ಪೊಲೀಸರ ಬಳಿ ತೋರಿಸಿಕೊಂಡಿದ್ದಾನೆ.

ಘಟನೆ ಸಂಬಂಧ ಪೊಲೀಸರು ಮೃತ ಮಹಿಳೆಯ ಪೋಷಕರನ್ನು ಸಂಪರ್ಕಿಸಿದ್ದು ಈ ವೇಳೆ ಪೋಷಕರು ಅಳಿಯನ ವಿರುದ್ಧ ದೂರಿನ ಸುರಿಮಳೆಯನ್ನೇ ಹರಿಸಿದ್ದಾರೆ ಜೊತೆಗೆ ತನ್ನ ಮಗಳಿಗೆ ಮದುವೆಯಾದ ಬಳಿಕ ಮಗಳನ್ನು ಒಂದು ದಿನವೂ ಹೆತ್ತವರ ಮನೆಗೆ ಕಳುಹಿಸಿಕೊಟ್ಟಿಲ್ಲ ಅಲ್ಲದೆ ನಮ್ಮನ್ನೂ ಆಕೆಯ ಮನೆಗೆ ಹೋಗಲು ಬಿಡಲಿಲ್ಲ ಎಂದು ದೂರಿದ್ದಾರೆ.

ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Chikkamagaluru: ಪ್ರಜ್ವಲ್ ರೇವಣ್ಣ ಮಣಿಸಲು ಕಡೂರಿನಲ್ಲಿ ಕಾಂಗ್ರೆಸ್ ಪೋಸ್ಟರ್ ವಾರ್…

Advertisement

Udayavani is now on Telegram. Click here to join our channel and stay updated with the latest news.

Next