Advertisement

“4ಡೇ ವೀಕ್‌’ಪ್ರಯೋಗ ಯಶಸ್ವಿ; ಬ್ರಿಟನ್‌ನಲ್ಲಿ ನಡೆದಿದೆ ಹೊಸ ಪ್ರಯೋಗ

07:30 PM Feb 21, 2023 | Team Udayavani |

ಲಂಡನ್‌: ಬ್ರಿಟನ್‌ ಉದ್ಯೋಗಿಗಳ ವೃತ್ತಿ ಮಾದರಿ ಬದಲಿಸುವ ನಿಟ್ಟಿನಲ್ಲಿ ರೂಪಿಸಿದ್ದ ” 4ಡೇ ವೀಕ್‌ ‘ ಪ್ರಯೋಗವು ಯಶಸ್ವಿಯಾಗಿದ್ದು, ಬ್ರಿಟನ್‌ ಬಹುಪಾಲು ಸಂಸ್ಥೆಗಳು ಪ್ರಯೋಗಾವಧಿ ವಿಸ್ತರಿಸಲು ಬಯಸಿವೆ. ಇದರಿಂದಾಗಿ ಆರ್ಥಿಕತೆಯಲ್ಲಿ ಚೇತರಿಕೆಯ ಜತೆಗೆ ಉತ್ಪಾದಕತೆಯಲ್ಲಿ ಹೆಚ್ಚಳ ವರದಿಯಾಗಿದೆ. “4ಡೇ ವೀಕ್‌’ ಪ್ರಯೋಗದ ಫ‌ಲಿತಾಂಶ ವರದಿಯನ್ನು ಪ್ರಕಟಿಸಲಾಗಿದೆ.

Advertisement

ಆ ಪ್ರಕಾರ, 61 ಸಂಸ್ಥೆಗಳು ಇದೇ ಪ್ರಯೋಗದ ಮಾದರಿಯನ್ನು ಇನ್ನೂ 6 ತಿಂಗಳು ವಿಸ್ತರಿಸಲು ಬಯಸಿದ್ದು, 18 ಸಂಸ್ಥೆಗಳು ಇದೇ ಮಾದರಿಯನ್ನೇ ಕಡ್ಡಾಯಗೊಳಿಸಿವೆ.

56 ಸಂಸ್ಥೆಗಳು ಈಗಾಗಲೇ ಪ್ರಯೋಗ ಅವಧಿ ವಿಸ್ತರಿಸಿವೆ. 2,900 ಉದ್ಯೋಗಿಗಳು ಈ ಪ್ರಯೋಗಕ್ಕೆ ಒಳಪಟ್ಟಿದ್ದು, ಆ ಪೈಕಿ ಶೇ.39 ಮಂದಿ ತಮಗೆ ಈಗ ಒತ್ತಡ ಕಡಿಮೆಯಾಗಿದೆ ಎಂದು ಅಭಿಪ್ರಾಯ ಪಟ್ಟರೆ, ಶೇ.40 ಮಂದಿ ತಾವು ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿದೆ, ಶೇ.54 ಮಂದಿ ಮನೆ ಮತ್ತು ವೃತ್ತಿ ಎರಡನ್ನೂ ನಿಭಾಯಿಸುವುದು ಸುಲಭ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next