Advertisement

London ಆತ್ಮಹತ್ಯೆ: ಪ್ಯಾರಾಸೆಟಮಾಲ್‌ಗೆ ನಿರ್ಬಂಧ

07:40 PM Sep 11, 2023 | Team Udayavani |

ಲಂಡನ್‌:ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಪ್ಯಾರಾಸೆಟಮಾಲ್‌ ಮಾತ್ರೆಗಳ ಮಾರಾಟದ ಮೇಲೆ ನಿಯಂತ್ರಣ ಹೇರಿದೆ.

Advertisement

2018ರಲ್ಲಿ ಕೇಂಬ್ರಿಡ್ಜ್ ವಿವಿ ಪ್ರಸ್‌ ಪ್ರಕಟಿಸಿದ ಅಧ್ಯಯನ ವರದಿ ಪ್ರಕಾರ, ಯು.ಕೆ.ಯಲ್ಲಿ ಆತ್ಮಹತ್ಯೆಗೆ ಅನುಸರಿಸುತ್ತಿರುವ ಸಾಮಾನ್ಯ ಮಾರ್ಗವೆಂದರೆ ಪ್ಯಾರಾಸೆಟಮಾಲ್‌ ಮಾತ್ರೆಗಳ ಸೇವನೆ. ಸರಾಸರಿ 80 ರೋಗಿಗಳನ್ನು ಅಧ್ಯಯನ ನಡೆಸಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಇದೇ ಮಾತ್ರೆ ಬಳಸಿರುವುದು ತಿಳಿದುಬಂದಿದೆ.

ಅಲ್ಲದೇ, ಅಲ್ಲಿನ ಸರ್ಕಾರ ಕೂಡ ಎರಡೂವರೆ ವರ್ಷಗಳಲ್ಲಿ ಆತ್ಮಹತ್ಯೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಗುರಿ ಹಾಕಿಕೊಂಡಿದೆ. ಹೊಸ ನಿಯಮದ ಪ್ರಕಾರ, ಯು.ಕೆ. ಪ್ರಜೆಗಳು ಒಂದು ಬಾರಿಗೆ 500 ಎಂಜಿಯ 16 ಮಾತ್ರೆಗಳನ್ನು ಮಾತ್ರ ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next