Advertisement

ಲಾಕ್ ಡೌನ್ ಎಫೆಕ್ಟ್ : ಸಂಕಷ್ಟದಲ್ಲಿದ್ದ ತಾಯಿ-ಮಗುವಿಗೆ ನೆರವಾದ ಉಜಿರೆ ಪಂಚಾಯಿತಿ

08:54 PM Apr 28, 2021 | Team Udayavani |

ಉಜಿರೆ: ಲಾಕ್ ಡೌನ್‍ನಿಂದಾಗಿ ಬಸ್ ವ್ಯವಸ್ಥೆ ಇಲ್ಲದೆ ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಉಳಿದುಕೊಂಡಿದ್ದ ತಾಯಿ ಮತ್ತು ಮಗುವಿಗೆ ಉಜಿರೆ ಪಂಚಾಯಿತಿ ವತಿಯಿಂದ ಸಹಾಯದ ಹಸ್ತ ಚಾಚಿದೆ.

Advertisement

ತಾಲೂಕಿನ ಅಲ್ಲಲ್ಲಿ ಬೀದಿ ವ್ಯಾಪಾರ ನಡೆಸಿ ಅಲ್ಲೇ ರಾತ್ರಿ ಕಳೆಯುತ್ತಿದ್ದ ಬೆಂಗಳೂರು ಮೂಲದ ದಿವ್ಯಾ (22)ಹಾಗೂ ಒಂದೂವರೆ ವರ್ಷದ ಮಗು ಅಂಜಲಿ ಮಂಗಳವಾರ ಲಾಕ್ ಡೌನ್ ಕಾರಣ ವ್ಯಾಪಾರಕ್ಕೆ ಎಲ್ಲೂ ಜಾಗ ಸಿಗದೆ ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಉಳಿದುಕೊಂಡಿದ್ದರು. ಚಿಂತಾಮಣಿ ಮೂಲದ ಪತಿ ಊರಿಗೆ ಹೋಗಿದ್ದು ಕರ್ಫ್ಯೂ ಕಾರಣ ವಾಪಸ್ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಪುಟ್ಟ ಮಗುವಿನ ಜೊತೆ ಬಸ್ ಸ್ಟಾಪ್‍ನಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಇನ್ನು ಅಸಹಾಯಕಳಾಗಿದ್ದ ದಿವ್ಯಾಳಿಗೆ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಸಾಮಾಜಿಕ ಕಾರ್ಯಕರ್ತ ರವಿ ಚಕಗಕಿತ್ತಾಯ ನೆರವಾದರು. ಗುರುವಾರ ಅವರನ್ನು ರೈಲ್ವೆ ಮೂಲಕ ಬೆಂಗಳೂರು ಕಳಿಸುವ ವ್ಯವಸ್ಥೆ ಕುರಿತು ಚಿಂತಿಸಲಾಗಿದೆ. ಸದ್ಯ ಉಜಿರೆ ಪಂಚಾಯತ್ ಸಮೀಪವಿರುವ ಖಾಲಿ ಕೊಠಡಿಯಲ್ಲಿ ಉಳಿಸುಕೊಳ್ಳುಲು ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next