Advertisement

ಉಜ್ವಲಾ ಯೋಜನೆ ಹಗರಣ; ಪ್ರಧಾನಿ ಕಚೇರಿಗೆ ದೂರು

10:24 AM Jul 06, 2018 | |

ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಉಜ್ವಲಾ ಯೋಜನೆ ಹಗರಣ ರಾಜ್ಯವ್ಯಾಪಿ ನಡೆದ ಬಗ್ಗೆ ಶಂಕೆ ಇದ್ದು ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಕೆಯಾಗಿದೆ. ಕೇಂದ್ರ ಸಚಿವಾಲಯಕ್ಕೆ ಈ ಬಗ್ಗೆ ಹಿಮ್ಮಾಹಿತಿ ನೀಡಿದ ವಿಚಾರದಲ್ಲಿ ಸಂದೇಶವೂ ಬಂದಿದೆ.  ಹಗರಣ ವಿಚಾರ ಬಿಗಿಯಾಗುತ್ತಿರುವಂತೆ ತೈಲ ಕಂಪೆನಿ ಅಧಿಕಾರಿ ಗಳು ಎಚ್ಚೆತ್ತಿದ್ದು ವಿತರಕರಿಂದ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂಬಂಧ ಬೈಂದೂರು ತಾಲೂಕಿನ ಕೆಲ ವಿತರಕರ ಬಳಿ ವಿವರಣೆ ಕೇಳಿದ್ದಾರೆ. ಜಿಲ್ಲಾಡಳಿತ, ನೋಡಲ್‌ ಅಧಿಕಾರಿಗಳಿಂದಲೂ ಸಮಗ್ರ ವಿವರ ಕೇಳಲಾಗಿದೆ. ಇದೇ ಸಂದರ್ಭದಲ್ಲಿ ತಾಲೂಕು ಕಚೇರಿ ಅಧಿಕಾರಿಗಳೂ ಹಗರಣ ಸಂಬಂಧ ಮಾಹಿತಿ ಕೇಳಿದ್ದಾರೆ.

Advertisement

ಉಜ್ವಲಾ ಯೋಜನೆ ಕುರಿತು ಉದಯವಾಣಿ ವರದಿಯನ್ನು ಗಮನಿಸಿದ್ದೇನೆ. ಈ ಕುರಿತು ಕೇಂದ್ರ ಪೆಟ್ರೋಲಿಯಂ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿರುವ ವಿತರಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ತಿಳಿಸುತ್ತೇನೆ.
– ಶೋಭಾ ಕರಂದ್ಲಾಜಿ
ಉಡುಪಿ- ಚಿಕ್ಕಮಗಳೂರು ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next