Advertisement

“ವೈದ್ಯಕೀಯ ಉದ್ದೇಶಕ್ಕಷ್ಟೇ ಹಿಪ್ನಾಟಿಸಂ ಬಳಕೆಯಾಗಲಿ’

11:03 PM Apr 14, 2019 | Team Udayavani |

ಬೆಳ್ತಂಗಡಿ: ಭಾರತದಲ್ಲಿ ಸಮ್ಮೋಹನದ (ಹಿಪ್ನಾಟಿಸಂ) ವೈಜ್ಞಾನಿಕ ಚಿಕಿತ್ಸೆ ಮಾದರಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಬೆಂಗಳೂರಿನ ಮೈಂಡ್‌ ಮ್ಯಾಟರ್‌ ಕ್ಲಿನಿಕ್‌ನ ನಿರ್ದೇಶಕ, ಮನಃಶಾಸ್ತ್ರಜ್ಞ ಜಿನಿ ಕೆ. ಗೋಪಿನಾಥನ್‌ ತಿಳಿಸಿದರು.

Advertisement

ಎಸ್‌.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನಃಶಾಸ್ತ್ರ ವಿಭಾಗ ಸಮ್ಮೋಹನ ಕ್ರಿಯೆಯ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ತಿಳಿವಳಿಕೆ ಆವಶ್ಯಕತೆ
ವಿದೇಶಗಳಲ್ಲಿ ಸಮ್ಮೋಹನವೆಂದರೆ ವೈದ್ಯಕೀಯ ವಿಧಾನ. ಆದರೆ ಭಾರತದಲ್ಲಿ ಸಮ್ಮೊàಹನವು ಮೌಡ್ಯ ವಿಚಾರ ಗಳಿಗೂ ಬಳಕೆಯಾಗುತ್ತಿದೆ. ಸಮೂಹ ಮಾಧ್ಯಮಗಳ ಕಾರಣದಿಂದಾಗಿ ಹಾಗಾಗಿ ರಬಹುದು. ಈ ಕುರಿತು ತಿಳಿವಳಿಕೆ ನೀಡ ಬೇಕಾದ ಆವಶ್ಯಕತೆ ಇದೆ ಎಂದರು.

ಸಮ್ಮೋಹನದ ವಿವಿಧ ಹಂತಗಳನ್ನು, ಸವಾಲುಗಳನ್ನು ವಿವರಿಸಿದ ಅವರು, ನಿರ್ದೇಶಿಸುವವನ (ಮನಃಶಾಸ್ತ್ರಜ್ಞ) ವಿರುದ್ಧವಾಗಿ ಕಕ್ಷಿದಾರನಲ್ಲಿ ಭಾವಗಳು ಹುಟ್ಟಿದರೆ ಆಗ ಸಮ್ಮೋಹನವು ಯಶಸ್ವಿ ಯಾಗದು. ಸಮ್ಮೋಹನದ ಮೊದಲ ಮೆಟ್ಟಿಲೇ ಶರಣಾಗತಿ. ವ್ಯಕ್ತಿಯಲ್ಲಿ ಅಂತ ರ್ಗತವಾಗಿರುವ ಶಕ್ತಿಯನ್ನು ಸಮ್ಮೋಹನದ ಮುಖಾಂತರ ತಿಳಿಯಬಹುದು ಎಂದರು. ಆ ಮೂಲಕ ಮನಸ್ಸು ಮತ್ತು ದೇಹದ ನಡುವಿನ ಸಂಬಂಧವನ್ನು ಪ್ರಾಯೋಗಿಕ ವಾಗಿ ವಿವರಿಸಿದರು.

ಎಲ್ಲ ಸಮಸ್ಯೆಗಳಿಗೂ ಸಮ್ಮೋಹನದಿಂದ ಪರಿಹಾರ ಸಾಧ್ಯವಿಲ್ಲ. ಸಮ್ಮೋಹನ ಕ್ರಿಯೆಯು ಮನಃಶಾಸ್ತ್ರದ 450 ವಿಧದ ಚಿಕಿತ್ಸಕ ವಿಧಾನಗಳಲ್ಲಿ ಒಂದು ಮಾತ್ರ ಎಂದು ಅವರು ತಿಳಿಸಿದರು.

Advertisement

ವಿಭಾಗದ ಮುಖ್ಯಸ್ಥರಾದ ಡಾ| ವಂದನಾ ಜೈನ್‌, ಸಹಾಯಕ ಪ್ರಾಧ್ಯಾಪಕ ಡಾ| ಮಹೇಶ್‌ಬಾಬು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಂತ್‌ ಪ್ರಸ್ತಾವಿಸಿ ದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next