Advertisement

Ujire: ಅನುಮಾನಸ್ಪದ ರೀತಿಯಲ್ಲಿ ಸಿಕ್ಕ ಬ್ಯಾಗ್‌

10:23 PM Aug 13, 2023 | Team Udayavani |

ಬೆಳ್ತಂಗಡಿ: ಉಜಿರೆ ಸಮೀಪದ ಮನೆಯೊಂದರ ಹೊರಗಿನ ಜಗಲಿಯಲ್ಲಿ ಅನುಮಾನಸ್ಪದ ಬ್ಯಾಗೊಂದು ಪತ್ತೆಯಾಗಿ ಗೊಂದಲ ಏರ್ಪಟ್ಟ ಘಟನೆ ನಡೆದಿದೆ.

Advertisement

ಉಜಿರೆಯ ಶಿವಾಜಿ ನಗರದ ಮನೆಯೊಂದರ ಹೊರ ಜಗಲಿಯಲ್ಲಿ ಬೆಳಗ್ಗೆ ಮನೆಯವರು ಎದ್ದು ನೋಡುವಾಗ ಬ್ಯಾಗೊಂದು ಕಂಡು ಬಂದಿದೆ. ಮನೆಯವರು ಮನೆಗೆ ಬರುವ ಕೆಲಸದವದ್ದಾಗಿರಬಹುದು ಎಂದು ಸಂಜೆಯವರೆಗೆ ಕಾದರೂ ಯಾರೂ ಬಾರದೇ ಇದ್ದಾಗ ನಂತರ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬ್ಯಾಗ್‌ ಪರಿಶೀಲನೆ ಮಾಡಿದಾಗ ಬಟ್ಟೆ ಸೇರಿದಂತೆ ಮದ್ದಿನ ಚೀಟಿ, ಆಧಾರ್‌ ಕಾರ್ಡ್‌ ಪ್ರತಿ, ಮೊಬೈಲ್‌ ಖಾಲಿ ಬಾಕ್ಸ್‌ ಕಂಡುಬಂದಿದ್ದು ಅದರಲ್ಲಿ ದಾವಣಗೆರೆಯ ವಿಳಾಸ ಇದ್ದು ಪೊಲೀಸರು ಬ್ಯಾಗನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next