Advertisement

ಯುಐಡಿ ಪೋರ್ಟೆಬಿಲಿಟಿ ಅವಕಾಶ ಶೀಘ್ರ ಲಭ್ಯ? 

01:46 AM Sep 01, 2021 | Team Udayavani |

ಹೊಸದಿಲ್ಲಿ: ಉದ್ಯೋಗದ ಬದಲಾವಣೆಯ ಸಾಧ್ಯತೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೇಂದ್ರ ಸರಕಾರವು ವಿವಿಧ ಸಾಮಾಜಿಕ ಭದ್ರತೆಯ ಗುರುತು ಸಂಖ್ಯೆ (ಯುಐಡಿ) ಗಳ ಪೋರ್ಟೆಬಿಲಿಟಿ ಅವಕಾಶವನ್ನು ಒದಗಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.

Advertisement

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಚಂದಾದಾರರು ವಿಶಿಷ್ಟ ಸಂಖ್ಯೆ ಹೊಂದಿರುತ್ತಾರೆ. ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ತನ್ನ ಚಂದಾದಾರರಿಗೆ ಪ್ರತ್ಯೇಕ ಗುರುತು ಸಂಖ್ಯೆ ನೀಡುತ್ತದೆ. ಈಗ ಕೇಂದ್ರ ಸರಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಗುರುತು ಸಂಖ್ಯೆ ನೀಡಲಾರಂಭಿಸಿದೆ.

ಈ ಆಧಾರ್‌ ಸಂಯೋಜಿತ ಸಂಖ್ಯೆಗಳನ್ನು ಏಕೀಕರಣಗೊಳಿಸಬೇಕಿದೆ. ಜತೆಗೆ ಜನರ ಉದ್ಯೋಗ ವಲಯದಿಂದ ವಲಯಕ್ಕೆ ಬದಲಾಗುವ ಸಾಧ್ಯತೆಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಪೋರ್ಟೆಬಿಲಿಟಿಗೆ ಅವಕಾಶ ಮಾಡಿ ಕೊಡುವುದು ಉತ್ತಮ. ಸರಕಾರ ಈ ಬಗ್ಗೆ ಚಿಂತನೆ ಹೊಂದಿದೆ ಎಂದು ಈ ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next