Advertisement

‘ಯುಐ’ಸಿನಿಮಾ ಶೂಟಿಂಗ್ ; ಹಂಪಿಗೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

09:27 PM Oct 10, 2022 | Team Udayavani |

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ರಿಯಲ್ ಸ್ಟಾರ್ ಉಪೇಂದ್ರ, ಸೋಮವಾರ ಭೇಟಿ ನೀಡಿ, ಪ್ರಮುಖ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.

Advertisement

ಮೊದಲು ವಿರೂಪಾಕ್ಷೇಶ್ವರ ದೇವಾಲಕ್ಕೆ ಭೇಟಿ ನೀಡಿ ವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿ ‌ದರ್ಶನ ಪಡೆದರು. ಅ.11ರಿಂದ 13ರವರೆಗೆ ಹೊಸಪೇಟೆ ಸುತ್ತಮುತ್ತಿಲಿನ ಪ್ರದೇಶದಲ್ಲಿ ನಟ ಉಪೇಂದ್ರ ರವರೇ ನಿರ್ದೇಶಿಸಿ, ನಟಿಸುತ್ತಿರುವ ಯುಐ ಸಿನಿಮಾ ಶೂಟಿಂಗ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಂಪಿಗೆ ಭೇಟಿ ನೀಡಿದ ಅವರು ವಿಜಯವಿಠಲ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿ‌ ಕಣ್ತುಂಬಿಕೊಂಡರು.

ನಗರದ ಸರಸ್ವತಿ ಹಾಗೂ ಲಕ್ಷ್ಮಿ ಚಿತ್ರಮಂದಿರಗಳಲ್ಲಿ ಕೂಡ ಮೂರು ದಿನಗಳ ಕಾಲ ‘ಯುಐ’ ಸಿನಿಮಾ ಶೂಟಿಂಗ್ ನಡೆಯಲಿದೆ. ಚಿತ್ರೀಕರಣದಲ್ಲಿ ಸ್ಥಳೀಯ ಕಲಾವಿದರು ಹಾಗೂ ಸಾರ್ವಜನಿಕರೂ ಭಾಗವಹಿಸಿ, ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುಲು ಚಿತ್ರ ತಂಡ ಅವಕಾಶ ನೀಡಿದೆ.

ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ ಟೈನರ್ಸ್ ಜಂಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಲಹರಿ ಫಿಲಂಸ್ ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರದ ನಿರ್ಮಿಸುತ್ತಿದ್ದಾರೆ. ರಾ ರಾ ರಕ್ಕಮ್ಮ ಖ್ಯಾತಿಯ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next