Advertisement

ಯುಜಿಡಿ ಕಾಮಗಾರಿ: ಇನ್ನೂ ಸ್ಥಳ ಕೊಡದ ಪುರಸಭೆ

09:00 PM Jul 26, 2021 | Team Udayavani |

ಕುಂದಾಪುರ:  ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷ ಗಳಿಂದ ನಡೆಯುತ್ತಿರುವ ಬಹುಕೋಟಿ ರೂ.ಗಳ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಗ್ರಹಣ ಬಿಟ್ಟಂತಿಲ್ಲ.

Advertisement

ವರ್ಷಗಳು ಉರುಳಿದವು:

ಒಳಚರಂಡಿ ಕಾಮಗಾರಿ   ಕಾಮಗಾರಿಗಾಗಿ 2010ರಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿತ್ತು. ಅನಂತರ ಬದಲಾದ ಯೋಜನೆಯಂತೆ ಕೇಂದ್ರದ ಅನುದಾನದ ಮೊರೆ ಹೋದಾಗ ಭೂಸ್ವಾಧೀನಕ್ಕೆ ರಾಜ್ಯ ಸರಕಾರದ ಅನುದಾನ ಬೇಕಾಯಿತು. 2014ರಲ್ಲಿ ಪುರಸಭೆ ಆಡಳಿತ ಇನ್ನು 6 ತಿಂಗಳುಗಳ ಒಳಗೆ ಎಸ್‌ಟಿಪಿ ಹಾಗೂ ವೆಟ್‌ವೆಲ್‌ಗ‌ಳ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಡುವುದಾಗಿ ಲಿಖೀತ ಭರವಸೆ ನೀಡಿತ್ತು. ಅದರಂತೆ ಟೆಂಡರ್‌ ಪ್ರಕ್ರಿಯೆ ನಡೆದು 2015ರ ನವೆಂಬರ್‌ನಲ್ಲಿ ಕಾಮಗಾರಿಗೆ ಆದೇಶ ಪತ್ರ ನೀಡಲಾಗಿತ್ತು. 2016ರ ಮೇಯಲ್ಲಿ ಕಾಮಗಾರಿ ಆರಂಭವಾಗಿದ್ದು 2021 ಆದರೂ ಪುರಸಭೆ ಆಡಳಿತ ವೆಟ್‌ವೆಲ್‌ ಹಾಗೂ ಎಸ್‌ಟಿಪಿಗೆ ಜಾಗದ ಹಸ್ತಾಂತರ ಮಾಡಿಲ್ಲ! ವರ್ಷಗಳು ಉರುಳುತ್ತಿದ್ದರೂ ಮೀಸಲಿಟ್ಟ ಹಣ ಖಜಾನೆಯಲ್ಲಿದ್ದರೂ, ಒಂದಷ್ಟು ಕೋಟಿ ರೂ. ಖರ್ಚಾಗಿ ನಡೆದ ಕಾಮಗಾರಿಯ ಉಪಯೋಗವೇ ಆಗದಿದ್ದರೂ ಹಾಗೋ ಹೀಗೋ ನಡೆಯುತ್ತಿತ್ತು.

ಮನ ಮಾಡಿದ ಆಡಳಿತ :

ಮಂಡಳಿ ಕಾಮಗಾರಿಯನ್ನು ಅರ್ಧದಲ್ಲಿ ನಿಲ್ಲಿಸಿದ ಕಾರಣ ಇಲಾಖೆ ಎರಡು ಬಾರಿ ಗುತ್ತಿಗೆದಾರ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದೆ. ಆದರೆ ಕಾಮಗಾರಿಗೆ ಸ್ಥಳವನ್ನೇ ನೀಡದೆ ಹೇಗೆ ಮುಂದುವರಿಸುವುದು ಎಂದು ಬಾಕಿ ಇಟ್ಟಿದೆ. ಒಳಚರಂಡಿ ಕಾಮಗಾರಿಯನ್ನು ಮಂಡಳಿಯೇ ಮಾಡಬೇಕಿದ್ದರೂ ಜಾಗ ನೀಡಬೇಕಾದ್ದು ಪುರಸಭೆಯೇ ತಾನೇ? ಈಗಿನ ಪುರಸಭೆ ಆಡಳಿತ ಈ ನಿಟ್ಟಿನಲ್ಲಿ ಜನಪರವಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ.

Advertisement

ಕಾಮಗಾರಿಯನ್ನು ಆದಷ್ಟು ಶೀಘ್ರ ನಡೆಸಿ ಜನರಿಗೆ ಉಪಯೋಗಕ್ಕೆ ದೊರೆಯುವಂತಾಗಬೇಕೆಂಬ ನಿಟ್ಟಿನಲ್ಲಿ  ಕಾರ್ಯನಿರ್ವಹಿಸಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಿದೆ. ಒಳಚರಂಡಿ ಮಂಡಳಿ, ಎಂಜಿನಿಯರ್‌ ಅವರಿಗೂ ಮನವಿ ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಜಾಗದ ಹಸ್ತಾಂತರ ಕಾರ್ಯ ನಡೆಸುತ್ತಿದೆ. ಹಾಗಿದ್ದರೂ ಪೂರ್ಣಪ್ರಮಾಣದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಒಳಚರಂಡಿ ಮಂಡಳಿಗೆ ಜಾಗ ಹಸ್ತಾಂತರ ನಡೆದಿಲ್ಲ. ವಿಟಲವಾಡಿ ತ್ಯಾಜ್ಯ ಜಲ ಘಟಕದ ಜಾಗವಷ್ಟೇ ಹಸ್ತಾಂತರವಾಗಿದೆ. ಉಳಿದ ಜಾಗಗಳು ಹಸ್ತಾಂತರವಾಗದ ಹೊರತು ಅಥವಾ ಕನಿಷ್ಠ ಮೂರು ತ್ಯಾಜ್ಯ ಜಲ ಘಟಕದ ಜಾಗ ಹಸ್ತಾಂತರವಾಗದ ಹೊರತು ಮಂಡಳಿ ಕಾಮಗಾರಿ ಪುನರಾರಂಭಿಸಲು ಮುಂದಾಗುತ್ತಿಲ್ಲ. ಹಾಗಾಗಿ ಪುರಸಭೆ ಆಡಳಿತ ಕೊಟ್ಟ ಮಾತನ್ನು ಇನ್ನಾದರೂ ಉಳಿಸಿಕೊಳ್ಳಬೇಕಿದೆ.

ಲಾಕ್‌ಡೌನ್‌ ಮತ್ತೂಂದು ಮಗದೊಂದು ಏನೇ ಕಾರಣಗಳನ್ನು ನೀಡಿದರೂ ಸರಕಾರಿ ಯಂತ್ರ ಸ್ಥಗಿತಗೊಂಡಿರಲಿಲ್ಲ. ಅದೆಲ್ಲ ಕಾರಣಗಳು ಮುಗಿದು ಆಡಳಿತ ಯಂತ್ರ ಚುರುಕುಗೊಂಡಿದ್ದು ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಪುನರಾರಂಭಿಸಲು ಪುರಸಭೆ ಪೂರ್ಣ ಸಹಕಾರ ನೀಡಬೇಕಿದೆ.

ಸುದಿನ ವರದಿ :

ಒಳಚರಂಡಿ ವ್ಯವಸ್ಥೆಯ ಅವಾಂತರಗಳ ಕುರಿತು “ಉದಯವಾಣಿ’ “ಸುದಿನ’  ಸರಣಿ ವರದಿ ಮಾಡಿತ್ತು. ಬಾಕಿ ಉಳಿದ ಕಾಮಗಾರಿಯ  ಪರಿಶೀಲನೆಗೆ  ಮಂಗಳೂರಿನಿಂದ ತಂಡ ಆಗಮಿಸಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್‌ಗಳು ಆಗಮಿಸಿ ಸಮಸ್ಯೆ ಪರಿಶೀಲಿಸಿದ್ದರು. ಎಸ್‌ಟಿಪಿ ಹಾಗೂ ವೆಟ್‌ವೆಲ್‌ಗ‌ಳಿಗೆ ನಿಗದಿಪಡಿಸಿದ ಸ್ಥಳಗಳಿಗೆ ಭೇಟಿ ನೀಡಿದ್ದರು. ಒಳಚರಂಡಿ ಮಂಡಳಿ ಸಮಿತಿ ಸದಸ್ಯೆ ಸುಲೋಚನಾ ಭಟ್‌ ಆಗಮಿಸಿ ಸಭೆ ನಡೆಸಿದ್ದರು. ಪುರಸಭೆಯಲ್ಲಿ ಚರ್ಚೆಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next