Advertisement
ಯುಜಿಡಿ ಕಾಮಗಾರಿ ಕುರಿತು “ಉದಯವಾಣಿ’ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫ್ ರೆನ್ಸ್ ನಡೆಸಿದ್ದು, ಆ ಸಭೆಯಲ್ಲಿ ಹುಮನಾಬಾದ ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ ಕುರಿತು ಮಾಹಿತಿ ಕೇಳಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಕುರಿತು ತಹಶೀಲ್ದಾರ್ ನಾಗಯ್ನಾ ಹಿರೇಮಠ ಅವರು ಖುದ್ದು ವಿವಿಧೆಡೆ ಭೇಟಿ ನೀಡಿ ಮಾಹಿತಿ ಸಲ್ಲಿಸುವಂತೆ ತಿಳಿಸಿದ್ದಾರೆ.
Related Articles
Advertisement
ಹಸ್ತಾಂತರಗೊಂಡಿಲ್ಲ: ಗುತ್ತಿಗೆದಾರರ ಪ್ರಕಾರ 2019ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ವರ್ಷದ ದುರಸ್ತಿ ಅವಧಿ ಕೂಡ ಮುಗಿದಿದೆ ಎಂದು ದಾಖಲೆಗಳ ಪ್ರಕಾರ ತಿಳಿದು ಬಂದಿದೆ. ಈವರೆಗೂ ಪೂರ್ಣಗೊಂಡ ಕಾಮಗಾರಿ ಬಗ್ಗೆ ಯಾವುದೇ ದಾಖಲೆಗಳು ಗುತ್ತಿಗೆ ಪಡೆದ ಕಂಪನಿಯವರು ಪುರಸಭೆಗೆ ಸಲ್ಲಿಸಿಲ್ಲ. ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ಹಸ್ತಾಂತರಿಸಿಕೊಂಡಿಲ್ಲ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಸದ್ಯ ಯುಜಿಡಿ ಕಾಮಗಾರಿ ವಿಷಯ ಪುರಸಭೆ ಅಧಿಕಾರಿಗಳಿಗೆ ತಲೆನೋವುಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಎಂಬುಂದು ಕಾಯ್ದು ನೋಡಬೇಕಿದೆ.
ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ ಪುರಸಭೆಗೆ ಹಸ್ತಾಂತರಗೊಂಡಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಯುಜಿಡಿ ಕಾಮಗಾರಿ ಕುರಿತು ಗಮನ ಸೆಳೆದಿದ್ದು, ಕಾಮಗಾರಿ ಕುರಿತು ಖುದ್ದು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸುವಂತೆ ಸಭೆಯಲ್ಲಿ ಒತ್ತಾಯಿಸಿದ್ದೇನೆ. ಬೆಂಗಳೂರಿನ ನುರಿತ ತಜ್ಞರಿಂದ ಯೋಜನೆಯ ತನಿಖೆ ನಡೆಸುವಂತೆ ಸರ್ಕಾರದ ಗಮನಸೆಳೆಯಲಾಗುವುದು.
ರಾಜಶೇಖರ ಪಾಟೀಲ,
ಶಾಸಕ ಹುಮನಾಬಾದ್ ದುರ್ಯೋಧನ ಹೂಗಾರ