Advertisement

ಸದ್ಯದಲ್ಲೇ ನಾಗರಿಕರ ಬಳಕೆಗೆ ಯುಜಿಡಿ

09:14 PM Aug 02, 2019 | Team Udayavani |

ಗುಂಡ್ಲುಪೇಟೆ: ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ಒಳಚರಂಡಿ ಯೋಜನೆ ಸದ್ಯದಲ್ಲೇ ಸಾರ್ವಜನಿಕರ ಬಳಕೆಗೆ ಸಿಗಲಿದೆ. ಪಟ್ಟಣದ ಹೊರವಲಯದ ಹೊಸೂರು ಮತ್ತು ಕಲ್ಯಾಣಿಕೊಳದ ಬಳಿ ನಿರ್ಮಿಸಿರುವ ಮಲೀನ ನೀರು ಶುದ್ಧೀಕರಣ ಘಟಕ ಕಾಮಗಾರಿಯು ಅಂತಿಮಘಟ್ಟಕ್ಕೆ ತಲುಪಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

Advertisement

ಪಟ್ಟಣದಲ್ಲಿ 2010ರಲ್ಲಿ ಒಳಚರಂಡಿ ಮಂಡಲಿ ವತಿಯಿಂದ ಯುಜಿಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕುಂಟುತ್ತಾ ತೆವಳುತ್ತಾ ಸುಮಾರು ಒಂಬತ್ತು ವರ್ಷಗಳ ಕಾಲ ನಡೆದ ಕಾಮಗಾರಿಯಲ್ಲಿ ಪಟ್ಟಣದ 23 ವಾರ್ಡುಗಳ ವ್ಯಾಪ್ತಿಯಲ್ಲಿಯೂ ಯುಜಿಡಿ ಚೇಂಬರ್‌ ಹಾಗೂ ಪೈಪ್‌ ಲೈನ್‌ ಕಾಮಗಾರಿ ಮುಕ್ತಾಯವಾಗಿದೆ.

6.4 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸೂರು ಹಾಗೂ ಕಲ್ಯಾಣಿಕೊಳದ ಸಮೀಪದಲ್ಲಿ 2 ಮಲೀನ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕಾರ್ಯ ಪಗ್ರತಿಯಲ್ಲಿದೆ. ಈಗಾಗಲೇ ಹೊಸೂರು ಘಟಕವು ಕಾರ್ಯಾರಂಭ ಮಾಡಿದೆ. ಇದರಿಂದಾಗಿ ಸದ್ಯದಲ್ಲೇ ಯುಜಿಡಿ ನಾಗರಿಕರ ಬಳಕೆಗೆ ದೊರೆಯಲಿದೆ.

ಈಗಾಗಲೇ ಸಿದ್ಧವಿರುವ ಹೊಸೂರು ಮತ್ತು ಪ್ರಗತಿಯಲ್ಲಿರುವ ಕಲ್ಯಾಣಿಕೊಳದ ಸಮೀಪದ ನಿರ್ಮಿಸಿರುವ ಮಲೀನ ನೀರು ಶುದ್ಧೀಕರಣ ಘಟಕವನ್ನು ಹಸ್ತಾತರಿಸಿಕೊಳ್ಳುವಂತೆ ಒಳಚರಂಡಿ ಮಂಡಲಿ ಹೇಳುತ್ತಿದೆ. ಹಲವು ಬಡಾವಣೆಗಳಲ್ಲಿ ಈಗಾಗಲೇ ಸಂಪರ್ಕ ನೀಡಲಾಗಿದೆ. ತಗ್ಗುಪ್ರದೇಶದ ಚೇಂಬರ್‌ಗಳಿಂದ ಮಲೀನ ನೀರು ರಸ್ತೆಗೆ ಹೊರಬರುತ್ತಿದೆ.

ಹೀಗೆ ಹದಗೆಟ್ಟಿರುವ ಒಳಚರಂಡಿ ಪೈಪ್‌ಲೈನ್‌ ಹಾಗೂ ದುರಸ್ತಿಗೊಳಗಾಗಿರುವ ಯುಜಿಡಿ ಚೇಂಬರ್‌ಗಳನ್ನು ಸರಿಪಡಿಸಿಕೊಡುವಂತೆ ಒಳಚರಂಡಿ ಮಂಡಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಪಟ್ಟಣದ ಮೂಲಸೌಕರ್ಯ ಒದಗಿಸಲು ಶ್ರಮಿಸುತ್ತಿರುವ ಪುರಸಭೆಯು ಹೆಚ್ಚುವರಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಮುಂದಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಕಾರ್ಯನಿರ್ವಹಣೆ ಹೇಗೆ: ಎಲ್ಲಾ ವಾರ್ಡುಗಳಿಂದಲೂ ಘಟಕಕ್ಕೆ ಹರಿದುಬರುವ ನೀರು ನಾಲ್ಕು ಬೃಹತ್‌ ತೊಟ್ಟಿಗಳಲ್ಲಿ ಹಾದುಬರುತ್ತದೆ. ಮೊದಲ ಹಂತದ ಸ್ಕಿÅàನಿಂಗ್‌ ತೊಟ್ಟಿಯಲ್ಲಿ ಪ್ಲಾಸ್ಟಿಕ್‌, ಕಸಕಡ್ಡಿ ಹಾದೂ ಘನತ್ಯಾಜ್ಯವನ್ನು ಬೇರ್ಪಡಿಸಿ ಉಳಿದ ಪ್ರತಿ ತೊಟ್ಟಿಗಳಲ್ಲಿ ಮರಳು ಮಣ್ಣು ಮಿಶ್ರಿತವಾಗಿ ಹರಿಯುವುದರಿಂದ ತ್ಯಾಜ್ಯ ನೀರಿನ ತೀವ್ರತೆಯನ್ನು ದುರ್ಬಲಗೊಳಿಸಿ ನಂತರ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನಂತರ ಕೃಷಿ ಚಟುವಟಿಕೆಗೆ ಉಪಯೋಗಿಸಲಾಗುವುದು.

ಈಗಾಗಲೇ ಹೊಸೂರು ಬಡಾವಣೆಯ ಘಟಕ ಕಾರ್ಯಾರಂಭ ಮಾಡಿದೆ. ಆದರೆ ಕಲ್ಯಾಣಿಕೊಳದ ಸಮೀಪದಲ್ಲಿರುವ ಘಟಕದ ಕೆಲಸ ಪ್ರಗತಿಯಲ್ಲಿದೆ. ಬೆಳೆಯುತ್ತಿರುವ ಪಟ್ಟಣದ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಹೊಣೆ ಹೊತ್ತ ಪುರಸಭೆಯು ಈಗಾಗಲೇ ಯುಜಿಡಿ ಬಳಕೆಗೆ ಅವಕಾಶ ಮಾಡಿದೆ. ಆದರೂ ಸಹ ಸಮರ್ಪಕವಾಗಿ ಮಲೀನ ನೀರು ಹರಿದು ಹೋಗುತ್ತಿಲ್ಲ. ಪೈಪ್‌ಲೈನ್‌ಗಳ ದುರಸ್ತಿ ನಡೆಯಬೇಕು ಮತ್ತು ಘಟಕ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಅದಾದ ನಂತರ ಯುಜಿಡಿ ಸೌಲಭ್ಯ ಸಂಪೂರ್ಣವಾಗಿ ಸಿಗಲಿದೆ.
-ಎ.ರಮೇಶ್‌, ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next