Advertisement

UGC: ವಿವಿಗಳಲ್ಲಿ ಚುನಾವಣೆ ಜಾಗೃತಿಯ ಪಠ್ಯ ಸೇರಿಸಲು ಯುಜಿಸಿ ಆದೇಶ

12:46 AM Dec 21, 2023 | Team Udayavani |

ಹೊಸದಿಲ್ಲಿ: ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಚುನಾವಣೆಗಳ ಬಗ್ಗೆ ಅರಿವು ಮೂಡಿಸುವ ಪಠ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಯುಜಿಸಿ (ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ) ಸೂಚಿಸಿದೆ. ಅರ್ಹ ವಿದ್ಯಾರ್ಥಿಗಳಿಗೆ ಮತದಾರರ ಗುರುತುಪತ್ರ ನೀಡಲು, ಅಣಕು ಮತದಾನ ನಡೆಸಲು, ಮತದಾನಗೈಯುವ ಪ್ರತಿಜ್ಞೆ ಸ್ವೀಕರಿಸುವಂತಹ ಬಲಿಷ್ಠ ವ್ಯವಸ್ಥೆ ರೂಪಿಸಲು ಚುನಾವಣ ಆಯೋಗ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ನಡುವೆ ನ.2ರಂದು ಒಪ್ಪಂದವಾಗಿದೆ. ಈ ಬಗ್ಗೆ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಯುಜಿಸಿ ಪತ್ರ ಬರೆದು ಮಾಹಿತಿ ನೀಡಿದೆ.

Advertisement

ಸ್ವೀಪ್‌ (ಸಿಸ್ಟಮ್ಯಾಟಿಕ್‌ ವೋಟರ್ಸ್‌ ಎಜುಕೇಶನ್‌ ಆ್ಯಂಡ್‌ ಎಲೆಕ್ಟೋರಲ್‌ ಪಾರ್ಟಿಸಿಪೇಶನ್‌) ಎಂದು ಯೋಜನೆಗೆ ಹೆಸರಿಡಲಾಗಿದೆ. ಮತದಾನದ ಬಗ್ಗೆ, ಮತದಾರರ ಬಗ್ಗೆ ಅರಿವು ಮೂಡಿಸುವುದು, ಚುನಾವಣೆ ಬಗ್ಗೆ ಜ್ಞಾನ ಮೂಡಿಸುವುದು ಇಲ್ಲಿನ ಆದ್ಯತೆಯಾಗಿದೆ. ಭವಿಷ್ಯದ ದೃಷ್ಟಿಯಿಂದ ನವ ಮತದಾರರನ್ನು ಸೃಷ್ಟಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಉದ್ದೇಶ. 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next