Advertisement

ಪದವಿ ಪರೀಕ್ಷೆ ರದ್ದು ಯುಜಿಸಿ ಆಕ್ಷೇಪ

11:31 PM Aug 10, 2020 | mahesh |

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ನೆಪವೊಡ್ಡಿ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸಿದ ಮಹಾರಾಷ್ಟ್ರ, ದಿಲ್ಲಿ ಸರಕಾರದ ನಿಲುವನ್ನು ಯುಜಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಪ್ರಶ್ನಿಸಿದೆ. ನ್ಯಾ| ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠದ ಮುಂದೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ದಿಲ್ಲಿ ಮತ್ತು ಮಹಾರಾಷ್ಟ್ರ ಸರಕಾರಗಳ ನಿರ್ಧಾರಗಳು ಯುಜಿಸಿ ನಿಯಮಗಳನ್ನು ಉಲ್ಲಂಘಿಸಿವೆ. ಪದವಿ ಪರೀಕ್ಷೆ ಸಂಬಂಧ ನಿರ್ಧಾರ ಕೈಗೊಳ್ಳಲು ಯುಜಿಸಿಗೆ ಮಾತ್ರವೇ ಅಧಿಕಾರವಿದೆ’ ಎಂದು ವಾದಿಸಿದ್ದಾರೆ.

Advertisement

“ಪರೀಕ್ಷೆ ರದ್ದುಪಡಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ರಾಜ್ಯ ಸರಕಾರಗಳು ಏಕಪಕ್ಷೀಯವಾಗಿ ವರ್ತಿಸಿದರೆ ಪದವಿಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ದೇಶದ 800ಕ್ಕೂ ಹೆಚ್ಚು ವಿವಿಗಳ ಪೈಕಿ 209 ವಿವಿಗಳು ಈಗಾಗಲೇ ಪರೀಕ್ಷೆ ಪೂರ್ಣಗೊಳಿಸಿವೆ. ಸುಮಾರು 390 ವಿವಿಗಳು ಪರೀಕ್ಷೆಗೆ ತಯಾರಿ ಮಾಡಿಕೊಂಡಿವೆ’ ಎಂದು ಮೆಹ್ತಾ ತಿಳಿಸಿದ್ದಾರೆ. ಈ ವಿವಾದ ಕುರಿತ ವಿಚಾರಣೆಯನ್ನು ಸುಪ್ರೀಂ ಆ.14ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next