Advertisement

ರಾಜ್ಯದ ಒಂದು ಸೇರಿ 20 ವಿವಿಗಳನ್ನು ‘ನಕಲಿ’ ಎಂದು ಘೋಷಿಸಿದ ಯುಜಿಸಿ

07:44 PM Aug 02, 2023 | Team Udayavani |

ಹೊಸದಿಲ್ಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಬುಧವಾರ ಕರ್ನಾಟಕದ ಒಂದು ಸಂಸ್ಥೆ ದೇಶದ 20 ವಿಶ್ವವಿದ್ಯಾನಿಲಯಗಳನ್ನು “ನಕಲಿ” ಎಂದು ಘೋಷಿಸಿದ್ದು, ಅವುಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರವನ್ನು ಹೊಂದಿಲ್ಲ ಎಂದಿದೆ.

Advertisement

”ಯುಜಿಸಿ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಹಲವಾರು ಸಂಸ್ಥೆಗಳು ಪದವಿಗಳನ್ನು ನೀಡುತ್ತಿರುವುದು ಯುಜಿಸಿ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಂಡಿದೆ. ಅಂತಹ ವಿವಿಗಳು ನೀಡುವ ಉನ್ನತ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ನೀಡುವ ಪದವಿಗಳು ಮಾನ್ಯತೆ ಹೊಂದಿರುವುದಿಲ್ಲ. ಈ ವಿಶ್ವವಿದ್ಯಾನಿಲಯಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.

ಕರ್ನಾಟಕದ ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ ಮಾನ್ಯತೆ ಹೊಂದಿರದ ನಕಲಿ ವಿವಿಯಾಗಿದೆ.

ನಕಲಿ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ದೆಹಲಿಯಲ್ಲೆ ಎಂಟು( All India Institute of Public and Physical Health Sciences; Commercial University Ltd, Daryaganj; United Nations University; Vocational University; ADR-Centric Juridical University; Indian Institution of Science and Engineering; Viswakarma Open University for Self-Employment; and Adhyatmik Vishwavidyalaya (Spiritual University) ನಕಲಿ ಎಂದು ವಿವರ ನೀಡಿದರು.

ಉತ್ತರ ಪ್ರದೇಶ ನಾಲ್ಕು ವಿವಿ – ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ವಿವಿ (ಮುಕ್ತ ವಿಶ್ವವಿದ್ಯಾಲಯ) ಮತ್ತು ಭಾರತೀಯ ಶಿಕ್ಷಾ ಪರಿಷತ್.

Advertisement

ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ವಿವಿಗಳಿದ್ದು, ಅವುಗಳೆಂದರೆ ಆಂಧ್ರ ಪ್ರದೇಶದ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ ಮತ್ತು ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ, ಪಶ್ಚಿಮ ಬಂಗಾಳದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ ನಕಲಿ ಆಗಿದೆ.

ಕೇರಳದ ಸೇಂಟ್ ಜಾನ್ಸ್ ವಿವ , ಮಹಾರಾಷ್ಟ್ರದ ರಾಜಾ ಅರೇಬಿಕ್ ವಿಶ್ವವಿದ್ಯಾಲಯ ಮತ್ತು ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಪುದುಚೇರಿ) ಕೂಡ ಪಟ್ಟಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next