Advertisement

UGC: ಘಟಿಕೋತ್ಸವಗಳಿಗೆ ಕೈಮಗ್ಗದ ನಿಲುವಂಗಿ ಬಳಸುವಂತೆ ಯುಜಿಸಿ ಸಲಹೆ

09:26 PM Jan 18, 2024 | Team Udayavani |

ನವದೆಹಲಿ: ಘಟಿಕೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗದಿಂದ ಮಾಡಿದ ನಿಲುವಂಗಿಗಳನ್ನು ಬಳಸುವಂತೆ ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಮತ್ತೂಮ್ಮೆ ಸಲಹೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ 2015 ಮತ್ತು 2019ರಲ್ಲಿ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಪ್ರಕಟಣೆ ಹೊರಡಿಸಿತ್ತು.

Advertisement

ಕೈಮಗ್ಗದಿಂದ ಮಾಡಿದ ಉಡುಪುಗಳು ಭಾರತದ ಹವಾಮಾನದಲ್ಲಿ ಹೆಚ್ಚು ಆರಾಮದಾಯಕ ಮತ್ತು ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ ಎಂದು ಯುಜಿಸಿ ಅಭಿಪ್ರಾಯಪಟ್ಟಿದೆ. “ಯುಜಿಸಿ ಸಲಹೆಯನ್ನು ಪರಿಗಣಿಸಿ ಈಗಾಗಲೇ ಹಲವು ವಿಶ್ವವಿದ್ಯಾಲಯಗಳು ಕೈಮಗ್ಗದ ನಿಲುವಂಗಿಗಳನ್ನು ಘಟಿಕೋತ್ಸವಗಳಲ್ಲಿ ಬಳಸುತ್ತಿವೆ. ಆದರೆ ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಹಳೆಯ ಉಡುಗೆಯನ್ನೇ ಮುಂದುವರಿಸಿವೆ’ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್‌ ಆರ್‌. ಜೋಶಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next