Advertisement
ನಡೆದದ್ದೇನು ?ಬಾಲ್ಯದಿಂದಲೂ ಸ್ಟೀವರ್ಟ್ ರುಬಮ್ಗ-ಕ್ವೂ ಗುಲ್ಮ ಕಾಯಿಲೆಯಿಂದ ಬಳಲುತ್ತಿದ್ದು, ಪ್ರತಿ ತಿಂಗಳು ರಕ್ತ ವರ್ಗಾವಣೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ. ಆದರೆ ಮಾರ್ಚ್ 31ರ ಬೆಳಗ್ಗೆ, ಅವನ ಆರೋಗ್ಯ ದಲ್ಲಿ ಕೊಂಚ ಏರುಪೇರಾಯಿತು. ತತ್‌ಕ್ಷಣವೇ ಎಚ್ಚೆತ್ತ ಹೆತ್ತವರು ಗ್ರಾಮದಿಂದ 2ಕಿ.ಮೀ ದೂರ ದಲ್ಲಿರುವ ಚಿಕಿತ್ಸಾಲಯಕ್ಕೆ ಸ್ಟೀವರ್ಟ್‌ನನ್ನು ದಾಖಲಿ ಸಿದರು. ಆದರೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಆದರೆ ಚಿಕಿತ್ಸಾಲಯಲ್ಲಿದ್ದ ಬೆರಳಣಿಕೆಯ ಎಲ್ಲ ಆಂಬ್ಯುಲೆನ್ಸ್ ಗಳು ಕಾರ್ಯ ನಿರತವಾಗಿದ್ದವು. ಕೂಡಲೇ ಜಾಗೃತಗೊಂಡ ಆಸ್ಪತ್ರೆಯ ದಾದಿ ಸ್ಥಳೀಯ ಇತರೆ ಖಾಸಗಿ ವಾಹನ ಮಾಲಕರ ಬಳಿ ಆಸ್ಪತ್ರೆಗೆ ತಲುಪಿಸುವಂತೆ ಮನವಿ ಮಾಡಿದರು. ಆದರೆ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್‌ಡೌನ್ ನಿಯಮಕ್ಕೆ ಹೆದರಿ ವಾಹನ ಚಾಲಕರು ಬಾಲಕನನ್ನು ಕರೆದೊಯ್ಯಲು ಹಿಂಜರಿದರು.
ಇದು ಸ್ಟೀವರ್ಟ್ ಒಬ್ಬನ ಕಥೆ ಇಲ್ಲ. ಸಾರಿಗೆ ನಿರ್ಬಂಧ ಜಾರಿಯಾದ ದಿನದಿಂದ ಕನಿಷ್ಠ 11 ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎಂದು ರಾಜಧಾನಿ ಕಂಪಾಲಾ ಮೂಲದ ಹಕ್ಕುಗಳ ಸಮೂಹವಾದ ಮಹಿಳಾ ಪ್ರೋಬೊನೊ ಇನಿಶಿಯೇಟಿವ್ ಸಂಸ್ಥೆ ದೂರಿದೆ. ಜತೆಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಈಗಾಗಲೇ ಸಂಚಾರ ವ್ಯವಸ್ಥೆ ನಿಬಂಧನೆಯಿಂದ ಹಲವು ಮಕ್ಕಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದು, ಸಂಪೂರ್ಣ ಸಾವಿನ ಅಂಕಿ-ಅಂಶ ಇನ್ನು ತಿಳಿಯಬೇಕಷ್ಟೇ ಎಂದು ಹೇಳಿದೆ. ಘಟನೆ ಕುರಿತು ಸಂಬಂಧಿತ ಅಧಿಕಾರಿಗಳನ್ನು ಅಲ್ಲಿನ ಮಾಧ್ಯಮಗಳು ಸಂಪರ್ಕಿಸಿದ್ದು, ಆರೋಗ್ಯ ಸಚಿವಾಲಯ ಮೊದಲು ನಿರ್ಬಂಧಗಳಿಂದ ಸಾವನ್ನಪ್ಪಿರುವವರ ಸಂಖ್ಯೆ ಮತ್ತು ಪುರಾವೆಗಳನ್ನು ಕೇಳಿದೆ. ಆದರೆ ಸಾಕ್ಷಾÂಧಾರ ಒದಗಿಸಿ ಅನಂತರ ಇಲಾಖೆಯನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು, ಅಧಿಕಾರಿಗಳು ಮಾಧ್ಯಮಗಳಿಂದ ಬಂದ ಕರೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.
Related Articles
Advertisement