Advertisement

ನಾಳೆಯಿಂದ ಯುಗಾದಿ ಮಹೋತ್ಸವ

03:42 PM Mar 22, 2017 | |

ಹುಬ್ಬಳ್ಳಿ: ಸ್ಥಳೀಯ ಉಣಕಲ್ಲ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಕಾರ್ಯಕ್ರಮಗಳು ಮಾ. 23ರಿಂದ 28ರ ವರೆಗೆ ಹಾಗೂ ರಥೋತ್ಸವ ಮಾ. 29ರಂದು ಸಂಜೆ 5:30 ಗಂಟೆಗೆ ನೆರವೇರಲಿದೆ.

Advertisement

ಯುಗಾದಿ ಮಹೋತ್ಸವದ ಅಂಗವಾಗಿ ಮಾ. 22ರಂದು ರಾತ್ರಿ 10:00 ಗಂಟೆಗೆ ಉಣಕಲ್ಲ ಚಲವಾದಿ ಓಣಿಯ ಸದ್ಗುರು ಸಿದ್ದೇಶ್ವರ ಭಜನಾ ಮಂಡಳಿಯಿಂದ ಮಹಾಜಾಗರಣೆಯೊಂದಿಗೆ ಭಜನೆ, 23ರಂದು ಬೆಳಗ್ಗೆ ಬ್ರಾಹ್ಮಿà ಮುಹೂರ್ತದಲ್ಲಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ಮೂರ್ತಿಯ ಮಹಾರುದ್ರಾಭಿಷೇಕದೊಂದಿಗೆ ಶಿವನಾಮ ಸಪ್ತಾಹ ಆರಂಭ.

28ರ ವರೆಗೆ ಪ್ರತಿದಿನ ಸಂಜೆ 7:00 ಗಂಟೆಗೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮಹನೀಯರಿಂದ ಪ್ರವಚನ ಹಾಗೂ ರಾತ್ರಿ 10:00 ಗಂಟೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದೆ. 29ರಂದು ಬೆಳಗ್ಗೆ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ಗದ್ಗುಗೆಯ ರುದ್ರಾಭಿಷೇಕ, ಮಹಾಪೂಜೆ.

10:05 ಗಂಟೆಗೆ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ಹಾಗೂ ಡಾ| ಸಿದ್ದಯ್ಯನವರು ಹಿರೇಮಠ, ಮಹಾಂತಯ್ಯಸ್ವಾಮಿ ಹಿರೇಮಠ ಪೌರೋಹಿತ್ಯದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 12:30 ಗಂಟೆಗೆ ಮಹಾಪ್ರಸಾದ ಹಾಗೂ ಸಂಜೆ 5:30 ಗಂಟೆಗೆ ರಥೋತ್ಸವ ಜರುಗಲಿದೆ.

ದುರ್ಗದ ಓಣಿ ಬಯಲಿನಲ್ಲಿ ಐರಾವಣ ಮೈರಾವಣ ಬಯಲಾಟ ನಡೆಯಲಿದೆ. 30ರಿಂದ ಎ. 2ರ ವರೆಗೆ ಪ್ರತಿದಿನ ಸಂಜೆ 4:30 ಗಂಟೆಗೆ ಬಯಲಾಂಗಣ ಕುಸ್ತಿಗಳು ಹಾಗೂ ಮಂದಿರದ ಆವರಣದಲ್ಲಿ ಪ್ರತಿದಿನ ಸಂಜೆ 7:00 ಗಂಟೆಗೆ ಡಾ| ಗಂಗೂಬಾಯಿ ಹಾನಗಲ್ಲ ಮ್ಯೂಸಿಕ್‌ ಫೌಂಡೇಶನ್‌ ತಂಡದವರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. 

Advertisement

ಎ. 2ರಂದು ಸಂಜೆ 7:00 ಗಂಟೆಗೆ ಎರಡೆತ್ತಿನ ಮಠದ ಸಿದ್ಧಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ತೇರಿನ ಕಳಸ  ಇಳಿಸುವ ಪೂಜಾ ಕಾರ್ಯಕ್ರಮ ಹಾಗೂ ಗ್ರಾಮದ ವಯೋವೃದ್ಧರಿಗೆ ಸತ್ಕಾರ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next