Advertisement

ಶಿವಾಯ ಫೌಂಡೇಶನ್‌ ಸಾಯಿಧಾಮ್‌ ವೃದ್ಧಾಶ್ರಮದಲ್ಲಿ ಯುಗಾದಿ

03:26 PM Mar 20, 2018 | Team Udayavani |

ಮುಂಬಯಿ: ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅದರ್ಶವಾಗಿಟ್ಟುಕೊಂಡು, ಮಾನ ವೀಯತೆಯ ಸೇವೆಯನ್ನು ಉಸಿರಾಗಿಸಿಕೊಂಡು ಮುಂಬಯಿ ಮಹಾ ನಗರದಲ್ಲಿ ತುಳು ಕನ್ನಡಿಗರ ನೇತೃತ್ವದಲ್ಲಿ ಅಶಕ್ತ ಪರಿವಾರಗಳನ್ನು ಗುರುತಿಸಿ ವೈದ್ಯಕೀಯ ಮತ್ತು ಶೈಕ್ಷಣಿಕ ಸಹಾಯ ಮಾಡುವ ಉದ್ದೇಶದೊಂದಿಗೆ  ಹೊಸದಾಗಿ  ಜನ್ಮತಳೆದ ಶಿವಾಯ ಫೌಂಡೇಶನ್‌ ಎಂಬ ಸೇವಾ ಸಂಸ್ಥೆಯು ಮಾ. 18ರಂದು  ಯುಗಾದಿ ಹಬ್ಬ  ಮತ್ತು ಹಿಂದೂ ಹೊಸ ವರ್ಷವನ್ನು ಮಹಾರಾಷ್ಟ್ರ ದ ಖಡ್ಕಲಿ  ಸಾಯಿದಾಮ್‌ ವೃದ್ಧಾಶ್ರಮದಲ್ಲಿ ವೈಶಿಷ್ಟéಪೂರ್ಣವಾಗಿ ಆಚರಿಸಿತು.

Advertisement

ಕೆಲವು ದಿನಗಳ ಹಿಂದೆ ಸಾಯಿಧಾಮ್‌ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಶಿವಾಯ ಫೌಂಡೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯರು ಆಶ್ರಮದ ಮೂಲಭೂತ ಭೇಡಿಕೆಗಳ  ವಿವರ ಪಡೆದಿದ್ದರು. ಅನಂತರ ಶಿವಾಯ ಫೌಂಡೇಶನ್‌ನ ಸದಸ್ಯರು ದುಬಾೖ ಗ್ರಾಟಿಟ್ಯೂಡ್‌ ಗ್ರೂಪ್‌ನ ಸಹಯೋಗದೊಂದಿಗೆ ಯುಗಾದಿ ಹಬ್ಬದಂದು ಆಶ್ರಮಕ್ಕೆ ಅಗತ್ಯವಿರುವ ಒಂದು ತಿಂಗಳ ರೇಶನ್‌ ಮತ್ತು ಅಗತ್ಯವಾಗಿ ಬೇಕಾಗಿದ್ದ ಎರಡು ಸೀಲಿಂಗ್‌ ಫ್ಯಾನ್‌ಗಳನ್ನು ನೀಡಿದರು.

ಅನಂತರ ಹಬ್ಬದ ಪ್ರಯುಕ್ತ ಹಣ್ಣು ಹಂಪಲು ಸಿಹಿ-ತಿಂಡಿಗಳನ್ನು ವಿತರಿಸಿ ನೊಂದ ಹಿರಿಯ ಜೀವಗಳೊಂದಿಗೆ ಕೆಲವು ಆಟೋಟಗಳನ್ನು ಆಯೋಜಿಸಿ ಹಬ್ಬದ ದಿನವನ್ನು ಸ್ಮರಣಿಯ ವಾಗಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಿವಾಯ ಫೌಂಡೇಶನ್‌ನ ಅಧ್ಯಕ್ಷ ತಾರಾನಾಥ್‌ ರೈ ಪುತ್ತೂರು ವಹಿಸಿದ್ದರು. ಪ್ರಶಾಂತ್‌ ಪಂಜ ಇವರು ನಿರ್ವಹಿಸಿದರು. 

ಫೌಂಡೇಶನ್‌ನ ಸದಸ್ಯರಾದ ಅವರಾಲು ಕಂಕಣಗುತ್ತು  ಶ್ವೇತಾ ಆರ್‌. ಶೆಟ್ಟಿ, ಆರೂರು ಪ್ರಭಾಕರ್‌ ಶೆಟ್ಟಿ, ಡಾ| ಸ್ವರ್ಣಲತಾ ಶೆಟ್ಟಿ, ವರ್ಣಿತ್‌ ಶೆಟ್ಟಿ, ವಿನೋದ್‌ ದೇವಾಡಿಗ, ಕಿರಣ್‌ ಜೈನ್‌, ದಿವಾಕರ ಶೆಟ್ಟಿ, ರûಾ ಶೆಟ್ಟಿ, ನವೀನ್‌ ಪೂಜಾರಿ ಮೂಡಬಿದಿರೆ, ದೀಪಾ ಪೂಜಾರಿ,  ಸಚಿನ್‌ ಶೆಟ್ಟಿ, ಸತೀಶ್‌ ರೈ ಪುತ್ತೂರು, ಸುಷ್ಮಾ ಪೂಜಾರಿ, ಅರ್ಚನಾ ಶೆಟ್ಟಿ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next