Advertisement
ಕೃತಯುಗದ ಪ್ರಥಮ ದಿನವೇ ಚೈತ್ರಮಾಸದ ಮೊದಲ ದಿನ. ಬ್ರಹ್ಮದೇವ ಲಯವಾದ ಹಳೆಯ ಕಲ್ಪವನ್ನು ನೋಡಿ, ಹೊಸ ಕಲ್ಪವನ್ನುಸೃಷ್ಠಿ ಮಾಡಿದ ಪ್ರಥಮ ದಿನವೇ ಯುಗಾದಿ. ಯುಗಗಳು ಕಳೆದರು ಯುಗಾದಿ ಮರಳಿ ಬರುತ್ತಿದೆ ಎಂಬ ಕವಿವಾಣಿಯು ಸಹ ಈ ವರ್ಷಾಂರಂಭವೆಂದರೆ ಚೈತ್ರ ಮಾಸದ ಶುದ್ಧ ಪಾಡ್ಯವನ್ನು ಯುಗಾದಿ ಹಬ್ಬ ಬರುತ್ತದೆ. ಆ ದಿನವೇ ದೇವರ ಹಾಗೂ ಎಲ್ಲಾ ಜೀವಿ, ಪಕ್ಷಿ, ಪ್ರಾಣಿಸಂಕುಲ, ಪ್ರಕೃತಿ ಹಾಗೂ ಮಾನವನ ಗೃಹಗತಿಗಳ ಚಲನವಲನಗಳು ಪ್ರಾರಂಭದ ದಿನ. ಈ ಹೊಸತನದ ಸ್ವಾಗತಕ್ಕೆ ಚಿತ್ರಿಸುವ ತೆರನದಿ, ಮಂದ ಮಾರುತ ಬೀಸುತಾ ತಂಪ ನೀಡಿ ನವ ವಸಂತನ ಋತುವಿನ ಅಗಮನ, ಗಿಡ ಮರಗಳ ಹಣ್ಣೆಲೆ ಉದುರಿ, ಹೊಸ ಚಿಗುರೆಲೆಯು ಚಿಗುರಿದ ಆ ಮರಗಳ ಜೀವನ, ಆ ಚಿಗುರೆಲೆ ತಿಂದು ಚಿಕ್ಕಿ-ಹಕ್ಕಿ ಪಿಕಗಳ ಗಾಯನ, ನವ ಚೈತ್ರ ಋತುವಿನ ಅಗಮನ ಇದುವೇ ಯುಗಾದಿ ಸಂಬ್ರಮ. ಈ ಯುಗಾದಿಯ ಹೊಸತನದಲ್ಲಿ ಮನೆಯಲ್ಲಿ ಹಬ್ಬದ ವಾತಾವರಣ. ತಂದೆ- ತಾಯಿಯರು ತಮ್ಮ ಮಕ್ಕಳಿಗೆ ಹಾಗೂ ಮನೆಯವರಿಗೆಲ್ಲಾ ಹೊಸ ಹೊಸ ಉಡುಪಿನಿಂದ ಕಂಗೋಳಿಸುವ ಸಡಗರದ ಹಬ್ಬ, ನವದಂಪತಿಗಳಿಗೆ ತವರುಮನೆ ಹಾಗೂ ಮಾವನ ಮನೆ ಊಡುಗೊರೆಯ ತೋರಣ, ಹಳ್ಳಿ ಹಳ್ಳಿಯಲ್ಲಿ ಜನರು ಆರೋಡ್ ಹಬ್ಬ ಎಂದು ಆಚರಿಸುತ್ತಾರೆ. ಮನೆ ಮನೆಯನ್ನು ಸ್ವಚ್ಚಗೈದು, ಮನೆಯೆದರು ರಂಗವಲ್ಲಿ ಹಾಕಿ, ಮಾವಿನ ಅಥವಾ ವಸಂತ ಮರದ ಎಲೆಯ ತಳಿರು ತೋರಣ, ಶೃಂಗಾರದಿಂದ ತುಳಸಿಕಟ್ಟೆಯಲ್ಲಿ ವಸಂತನ ಅಹ್ವಾನಿಸಿ ಪೂಜಿಸಿ, ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಯುಗಾದಿ ಅಂದರೆ ಭಾರತೀಯ ಸನಾತನ ಅಧಾರ ಮೇಲೆ ಹೊಸ ವರ್ಷ ಅಚರಣೆ ಇದರಿಂದ ಚೈತ್ರ ಮಾಸ ಶುಕ್ಲ ಪಕ್ಷದ ಶುದ್ದ ಪಾಡ್ಯದಂದು ಹೊಸ ವರುಷ ಅಚರಣೆ ನಮ್ಮ ಸಂಸ್ಕೃತಿಯ ಪ್ರತೀಕ.
Related Articles
Advertisement
ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 1 ಎಂದರೆ ಹೊಸವರ್ಷ ಎಂದು ಸಂಭ್ರಮಿಸುತ್ತಿದ್ದ ಬಹುಪಾಲು ಮಂದಿಗೆ ಇದು ಇಂಗ್ಲೀಷ್ ಕ್ಯಾಲೆಂಡರ್ ಆಚರಣೆಯನ್ನು ಮರೆಯಬೇಕು. ವ್ಯಾವಹಾರಿಕವಾಗಿ ನಾವು ಇಂಗ್ಲೀಷ್ ಕ್ಯಾಲೆಂಡರ್ ಬಳಕೆಗೆ ಒಗ್ಗಿಕೊಂಡಿರಬಹುದು. ಆದರೆ ನಮ್ಮ ಹಬ್ಬ ಹರಿದಿನಗಳಿಗೂ ಈ ಕ್ಯಾಲೆಂಡರಿಗೂ ಸಂಬಂಧವೇನಿಲ್ಲ. ಅವುಗಳೇನಿದ್ದರೂ ತಿಥಿ ಆಧಾರಿತ. ನಮ್ಮ ನಿತ್ಯ ಬದುಕಿನ ಶುಭ ಕಾರ್ಯ, ಸಮಾರಂಭ, ಮುಹೂರ್ತಗಳಿಗೂ ತಿಥಿ, ವಾರ, ನಕ್ಷತ್ರಗಳೇ ಪ್ರಧಾನ. ಜನನ ಮರಣದಲ್ಲೂ ಶ್ರಾದ್ಧ, ಪುಣ್ಯತಿಥಿ ಹೀಗೆ ಆಚರಿಸುವಾಗಲೂ ಪಂಚಾಂಗ ಆಧಾರಿತ ತಿಥಿಗಳು ಮುಖ್ಯವಾಗುತ್ತವೆಯೇ ವಿನಃ ಕ್ಯಾಲೆಂಡರ್ ದಿನಾಂಕಗಳು ಆಂಗ್ಲ ಸಂಸ್ಕೃತಿಯ ಆನಿವರ್ಸರಿ ಆಚರಣೆಗಷ್ಟೇ ಸೀಮಿತವಾಗುತ್ತವೆ. ಹೀಗೆ ಎಲ್ಲವೂ ಪಂಚಾಂಗ ತಿಥಿ ಆಧರಿಸಿರುವಾಗ ಅದೇ ಹಿನ್ನೆಲೆಯಲ್ಲಿ ಸೌರಮಾನದ ಸಂಕ್ರಾಂತಿ, ಚಾಂದ್ರ ಮಾನದ ಯುಗಾದಿಯೇ ನಮಗೆ ಹೊಸವರ್ಷದ ಆರಂಭ ಎನ್ನುವುದು ಖಚಿತವಿರುವಾಗ ಈಗಿನ ಗ್ರೆಗೋರಿಯನ್ ಕ್ಯಾಲೆಂಡರ್ ಬದಲಾಗಿ ದೇಶೀ ದಿನದರ್ಶಿಕೆಯನ್ನು ನಾವೇಕೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಾರದು? ಎನ್ನುವ ಕಲ್ಪನೆಗೆ ಪೂರಕವಾಗಿ ಅರಳಿದ್ದೇ ಈ ದೇಶೀ ದಿನದರ್ಶಿಕೆ.
ಪಂಚಾಂಗ ಓದುವುದು ಕಷ್ಟ ಎನ್ನುವವರಿಗೆ ದೇಶೀ ದಿನದರ್ಶಿಕೆ ಇಷ್ಟವಾಗುವ ರೀತಿಯಲ್ಲಿ ಮೂರು ಭಾಷೆಯಲ್ಲಿ ತಯಾರು ಮಾಡಿರುವುದು, ವಿನಾಯಕ ಭಟ್ಟರ ವಿಶೇಷತೆ. ತಾರೀಖು ವಾರಗಳೇ ಪ್ರಧಾನವಾಗಿದ್ದ ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ಪಂಚಾಂಗದ ನಕ್ಷತ್ರ, ತಿಥಿ, ವಾರವನ್ನು ದೊಡ್ಡದಾಗಿ ಬರೆದು ಜತೆಗೆ ಇಂಗ್ಲೀಷ್ ದಿನಾಂಕವನ್ನೂ ಚಿಕ್ಕದಾಗಿ ನೀಡಿರುವುದು, ಜತೆಗೆ ಹಬ್ಬ ಹರಿದಿನಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ಈ ದಿನದರ್ಶೀಕೆಯ ವಿಶೇಷತೆ. ಪ್ರಸ್ತುತ ಕಲಿಯುಗದ 5124ನೇ ವರ್ಷ ಚಾಲ್ತಿಯಲ್ಲಿದೆ. ಅದಕ್ಕೆ ಪೂರಕವಾಗಿ ದಿನಾಂಕವನ್ನು ಬರೆಯುವ ಬಗ್ಗೆಯೂ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣದಲ್ಲೂ ನಿತ್ಯವೂ ಸುಮಾರು 5 ಸಾವಿರ ಮಂದಿಗೆ ಗಾಳಿಮನೆಯವರ ನಿತ್ಯ ಪುಟ ಕನ್ನಡ(ಮಾತೃ), ಹಿಂದಿ(ರಾಷ್ಟ್ರ), ಸಂಸ್ಕೃತ(ದೇವ) ಹೀಗೆ ಮೂರು ಭಾಷೆಗಳಲ್ಲಿ ಕಳಿಸಿಕೊಡುತ್ತಾರೆ. ಕಳೆದ ಎರಡು ಯುಗಾದಿಗೆ ದಿನದರ್ಶಿಕೆಯನ್ನೂ ಮುದ್ರಿಸಿರುವುದಕ್ಕೆ ಉತ್ತಮ ಸ್ಪಂದನೆಯೂ ದೊರೆತಿದ್ದು ಈ ಬಾರಿ ಯುಗಾದಿಗೆ ಮತ್ತೆ ಈ ವರ್ಷದ 3 ಜನ ಯೋಗಿ ಸುಧಾಕರ್ ತಂತ್ರಿ ಮತ್ತು ಟಿ.ಎಸ್. ಸಿರಸಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಸುಬ್ರಮಣ್ಯ ನಟ್ಟೋಜಿ ಹಾಗೂ ಜಿ.ಎಲ್.ಅಚಾರ್ಯರ ಸಹಯೋಗದೊಂದಿಗೆ ಈ ವರ್ಷ ಶುಭಕೃತ್ ಯುಗಾದಿಗೆ ದಿನದರ್ಶಿಕೆಯು ಎರಡನೆಯ ವರ್ಷ ಪ್ರಯೋಜಿಕತ್ವ ವಹಿಸಿದ್ದಾರೆ. ಇಲ್ಲಿ ಪಂಚಾಂಗದ ಯೋಗ, ಕರಣವನ್ನೂ ಸೇರಿಸಿ ದಿನದರ್ಶಿಕೆಯ ಉಪಯುಕ್ತತೆಯನ್ನು ಇನ್ನಷ್ಟು ಹೆಚ್ಚಿಸುವ ಚಿಂತನೆ ಗಾಳಿಮನೆಯವರದ್ದು. ಹೀಗೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗಾಳಿಮನೆಯವರು. ತನ್ನ 18 ವರ್ಷದ ಬಾಲಕನಿರುವಾಗಲೇ ಭಗವದ್ಗೀತೆಯನ್ನು ಅರ್ಥಸಹಿತ ಕಂಠಪಾಠ ಒಪ್ಪಿಸಿದವರು.
ನಮ್ಮ ಸನಾತನ ಸಂಸ್ಕೃತ, ಹಾಗೂ ಸಂಸ್ಕೃತಿಯ ಬಗ್ಗೆ ತನ್ನ ಆಸಕ್ತಿಯಿಂದ ಆಳವಾದ ಅಧ್ಯಯನ ನಡೆಸಿ 2020-21ರ ಲಾಕ್ ಡೌನ್ ವೇಳೆಗೆ ಆನ್ಲೈನ್ ಮೂಲಕ ವೇದ ಸಂಸ್ಕೃತ ಪಾಠ ಮಾಡಿದ್ದ ಅವರು ಪ್ರಸ್ತುತ ಪುತ್ತೂರಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು. ಹೆತ್ತವರ ಜತೆಗೆ ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯವರ, ಸಮಾನ ಮನಸ್ಕರ ಪ್ರೋತ್ಸಾಹದಿಂದ ದೇಶೀ ಕಾಲಗಣನೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಡಾ.ಗಾಳಿಮನೆ ವಿನಾಯಕ ಭಟ್ಟ (9449163561) ಈ ದಿನದರ್ಶಿಕೆಯನ್ನು ಇನ್ನಷ್ಟು ಜನಪರಗೊಳಿಸುವಲ್ಲಿ ಜನತೆಯ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಮುಂದೆ ಯಾವುದಾದರು ಸಂಘ ಸಂಸ್ಥೆಗಳು ಹಾಗೂ ಪ್ರಾಯೋಜಿಕತ್ವ ವಹಿಸುವ ಆಸಕ್ತರಿಗಾಗಿ ದೇಶೀ ಕಾಲಗಣನೆಯನ್ನು ಸರಳವಾಗಿ ಪರಿಚಯಿಸುವ ಉತ್ಸಾಹವೂ ಗಾಳಿಮನೆಯವರಿಗಿದೆ. ಇವರ ಪ್ರಯತ್ನವು ಇಡಿ ಜಗತ್ತು ಮೆಚ್ಚುವಂತಾಗಲಿ ಎಂದು ಹಾಗೂ ಶುಭಕೃತ್ ಸಂವತ್ಸರ ನಾಡಿಗೆ ಒಳಿತಾಗಲಿ ಎಂದು ನಾಡಿನ ಸಮಸ್ತ ಜನತೆಗೂ ಯುಗಾದಿ ಹಬ್ಬದ ಶುಭಾಶಯಗಳು.
-ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್