***
Employees Provident Fund Act,1952 ಕಾನೂನಿನ ಪ್ರಕಾರ ಸರಕಾರ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (EPF) ಎಂಬ ನಿಧಿಯನ್ನು ನೌಕರವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರು – ಈರ್ವರಿಗೂ ಸಮಾನವಾಗಿ ಅನ್ವಯಿಸುವ ಸೌಲಭ್ಯ. ನೌಕರರು ಸಾಮಾನ್ಯವಾಗಿ ತಮ್ಮ ಪಿಎಫ್ ಎನ್ನುವುದು ಇದನ್ನೇ.
Advertisement
ಇದು ನೀವು ಕೆಲಸ ಮಾಡುವ ಸಂಸ್ಥೆಯೊಳಗೆ ಸಂಬಳದಿಂದ ಕಡಿತಗೊಂಡು ಜಮೆಯಾಗುವ ಫಂಡು. ಹೊರಗೆ ಸ್ಟೇಟ್ ಬ್ಯಾಂಕ್/ಪೋಸ್ಟಾಫೀಸಿನಲ್ಲಿ ಸಾರ್ವಜನಿಕರಿಗಾಗಿ ಮಾಡಿಕೊಳ್ಳುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)ಗಿಂತ ಭಿನ್ನ. EPF ಮತ್ತು PPFಬೇರೆ ಬೇರೆಯಾಗಿದ್ದು ಅವುಗಳಿಗೆ ಅನ್ವಯಿಸುವ ವಿವರಗಳು, ಕಾನೂನುಗಳು, ಬಡ್ಡಿ ದರಗಳು – ಎಲ್ಲವೂ ಬೇರೆ ಬೇರೆಯಾಗಿವೆ. ಇವೆರಡರ ನಡುವೆ ಕನೂ#$Âಸ್ ಮಾಡಿಕೊಂಡು ವಿತ್ತೀಯ ಆರೋಗ್ಯ ಹಾಳುಮಾಡಿಕೊಂಡು ಚಿಕಿತ್ಸೆಗಾಗಿ ನನಗೆ ಫೋನ್ ಮಾಡುವವರಿ¨ªಾರೆ.
20ಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಒಂದು ಸಂಸ್ಥೆಯಲ್ಲಿ ಈ ರೀತಿ ಇಪಿಎಫ್ ಕಡಿತ ಮಾಡುವುದು ಕಡ್ಡಾಯ. ಅದರಿಂದ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇಪಿಎಫ್ ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ ಮಾಸಿಕ ಸಂಬಳ ರೂ. 15,000 (ಬೇಸಿಕ್+ಡಿ.ಎ)ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡಾ ಈ ಸ್ಕೀಮು ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮು ಕಡ್ಡಾಯ. ಸರಕಾರದ ಕಾನೂನುಗಳು ದುರ್ಬಲ ವರ್ಗದವರನ್ನು ರಕ್ಷಿಸುವ ದೃಷ್ಟಿಯಿಂದ ಮಾಡಿ¨ªಾಗಿರುತ್ತದೆ. ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎÇÉಾ ಉದ್ಯೋಗಿಗಳಿಗೂ (ಅಂದರೆ, ರೂ. 15000 ಮೀರಿದ ವರ್ಗಕ್ಕೂ ಸಹಿತ) ಪಿಎಫ್ ಕಡಿತವನ್ನು ಐಚ್ಚಿಕವಾಗಿಯಾದರೂ ಉದ್ಯೋಗಿಗಳ ಹಿತದೃಷ್ಟಿಯಿಂದ ಮಾಡುತ್ತಿವೆ. ಏಕೆಂದರೆ ಪ್ರಾವಿಡೆಂಟ್ ಫಂಡ್ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಇಪಿಎಫ್ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ.
Related Articles
Advertisement
ದೇಣಿಗೆ ವೇತನದ (ಬೇಸಿಕ್ ಮತ್ತು ಡಿಎ) ಶೇ. 12 ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ “ಎಕೌಂಟ್ ಎ’ ಅಡಿಯಲ್ಲಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಕೂಡಾ ಪ್ರತ್ಯೇಕವಾಗಿ ಇನ್ನೊಂದು ಶೇ.12 ಕಡಿತಗೊಳಿಸಿ “ಎಕೌಂಟ್ ಬಿ’ ಅಡಿಯಲ್ಲಿ ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲಾಗುತ್ತದೆ. ಹಾಗಾಗಿ ಒಟ್ಟು ಜಮೆ ಶೇ.24. ಸ್ಥೂಲವಾಗಿ ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಈ ಶೇ.24 ಸಂಪೂರ್ಣವಾಗಿ ಜಮೆ ಯಾಗುವುದಿಲ್ಲ. ಉದ್ಯೋಗದಾತರ ಶೇ.12ರಲ್ಲಿ ಎರಡು ಭಾಗಗಳಿವೆ. ಮೊದಲನೆಯದಾಗಿ ಸಂಬಳದ ಶೇ.8.33 (ಗರಿಷ್ಠ ಸಂಬಳ ಮಿತಿ ರೂ. 15000, ಅಂದರೆ ರೂ 1250) ಪಿಎಫ್ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್ ಉಪಖಾತೆಗೆ ಹೋಗುತ್ತದೆ. “ಎಂಪ್ಲಾಯಿ ಪೆನ್ಶನ್ ಸ್ಕೀಮ್ ಅಥವಾ ಇಪಿಎಸ್’ ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನ್ಶನ್‌ಗಾಗಿ ಮೀಸಲಾಗಿದೆ. ಎಷ್ಟೋ ಉದ್ಯೋಗಿಗಳ ಪೆನ್ಶನ್ ಫಂಡಿಗೆ ಬರುವ ದೇಣಿಗೆ ಮಾಸಿಕ ರೂ. 1250 ಮಾತ್ರ. ಇದಲದೆ ಸರಕಾರದ ವತಿಯಿಂದ ಸಂಬಳದ ಶೇ.1.16 (ಗರಿಷ್ಠ ಸಂಬಳ ಮಿತಿ ರೂ. 15000 ಅಂದರೆ ರೂ. 174) ಸಬ್ಸಿಡಿ ರೂಪದಲ್ಲಿ ಜಮೆ ಯಾಗುತ್ತದೆ. ಹೀಗೆ ನಿಮ್ಮ ಪೆನÒನ್ ಫಂಡಿಗೆ ಜಮೆಯಾಗುವ ಒಟ್ಟು ದೇಣಿಗೆ ಸಂಬಳದ ಶೇ.9.49 (ಗರಿಷ್ಟ ರೂ. 1424). ಹಾಗಾಗಿ ಈ ಪೆನ್ಶನ್ ದೇಣಿಗೆಯಾದ ಶೇ. 8.33 ಕಳೆದು ಅಥವ ಗರಿಷ್ಠ ರೂ. 1250 ಕಳೆದು ಉಳಿದ ಮೊತ್ತ ಮಾತ್ರವೇ ಇಪಿಎಫ್ನಲ್ಲಿ ಜಮೆಯಾಗುತ್ತದೆ. VPF ಎಂದರೇನು?
ಮೇಲೆ ಹೇಳಿದಂತೆ ಶೇ. 12 ನೌಕರನ ವತಿಯಿಂದ (ಎಕೌಂಟ್ ಎ) ಹಾಗೂ ಎಂಪ್ಲಾಯರ್ ವತಿಯಿಂದ ಶೇ. 12(ಎಕೌಂಟ್ ಬಿ) ಇಪಿಎಫ್ ಖಾತೆಯಲ್ಲಿ ಕಟ್ಟಲ್ಪಡುತ್ತದಷ್ಟೆ? ಒಬ್ಬ ನೌಕರನಿಗೆ ಸ್ವ-ಇಚ್ಚೆಯಿಂದ ತನ್ನ ಸಂಬಳದ (ಬೇಸಿಕ್+ಡಿ.ಎ) ಶೇ.100ರಷ್ಟನ್ನು ತನ್ನ ಪಿಎಫ್ ಖಾತೆಯ ಇನ್ನೊಂದು “ಎಕೌಂಟ್ ಸಿ’ ಯಲ್ಲಿ ಐಚ್ಚಿಕ ಅಥವಾ ವಾಲೆಂಟರಿಯಾಗಿ ಹಾಕುವ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಪ್ರಾವಿಡೆಂಟ್ ಫಂಡಿನ ಈ ಭಾಗವನ್ನು Voluntary Provident Fund ಎಂದು ಕರೆಯುತ್ತಾರೆ. ಇದು ಒಬ್ಬನ ಪ್ರಾವಿಡೆಂಟ್ ಫಂಡ್ ಖಾತೆಯದೇ ಒಂದು ಅಂಗವಾಗಿದೆ ಹಾಗೂ ಇದಕ್ಕೆ ಎ ಮತ್ತು ಬಿ ಎಕೌಂಟಿನಷ್ಟೇ ಬಡ್ಡಿದರ, ಕರವಿನಾಯತಿ ಇತ್ಯಾದಿಗಳು ಅನ್ವಯ ಆಗುತ್ತದೆ. ಆದರೆ, ವಾಲಂಟರಿ ಜಮೆಯ ಮೇಲೆ ಎಂಪ್ಲಾಯರುಗಳ ಸರಿಸಮ ಜಮೆ ಇರುವುದಿಲ್ಲ. ನಿಮಗೆ ಈ ರೀತಿ ಸ್ವ-ಇಚ್ಚೆಯಿಂದ “ಎಕೌಂಟ್ ಸಿ’ ಯಲ್ಲಿ ವಿಪಿಎಫ್ ಜಮೆ ಮಾಡುವುದು ಉತ್ತಮ. ಹಾಗೆ ಮಾಡ ಬೇಕೆಂದಿದ್ದರೆ ಪ್ರತಿ ವಿತ್ತ ವರ್ಷದ (ಎಪ್ರಿಲ…-ಮಾರ್ಚ್)ಆರಂಭದಲ್ಲಿ ನಿಮ್ಮ ಕಂಪೆನಿಗೆ ತಿಳಿಸತಕ್ಕದ್ದು. ನಿಮ್ಮ ನಿರ್ಧಾರವನ್ನು ವರ್ಷದ ನಡುವೆ ಬದಲಿಸುವಂತಿಲ್ಲ. ಹೊಸ ವರ್ಷಕ್ಕೆ ಪುನಃ ಬದಲಾಯಿಸಬಹುದು. ಉಸ್ತುವಾರಿ ಹೇಗೆ?
ಈ ಇಪಿಎಫ್ನ ಉಸ್ತುವಾರಿ ಎರಡು ವಿಧದಲ್ಲಿ ನಡೆಯಬಹುದು:
1 ಸರಕಾರದ ಆಧೀನದ EPO ಸಂಸ್ಥೆಯಲ್ಲಿ ಪ್ರಾವಿಡೆಂಟ್ ಫಂಡ್ ಕಮಿಶನರರ ಉಸ್ತುವಾರಿಯಲ್ಲಿ ಜಮಾ ಮಾಡುವುದು. ಹೆಚ್ಚಿನ ಚಿಕ್ಕ ಪುಟ್ಟ ಕಂಪೆನಿಗಳು ಮತ್ತು ಸರಕಾರಿ ಸಂಸ್ಥೆಗಳು ಈ ರೀತಿ ಸರಕಾರದ ಕೈಯಲ್ಲಿ ತಮ್ಮ ಪಿಎಫ್ ದುಡ್ಡನ್ನು ಠೇವಣಿ ಇಡುತ್ತಾರೆ. ಅ ದುಡ್ಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಲಪತ್ರಗಳು, ಸರಕಾರಿ ಮತ್ತು ಖಾಸಗಿ ಕಂಪೆನಿಗಳ ಬಾಂಡು ಡಿಬೆಂಚರ್‌ಗಳಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಶೇರು ಮಾರುಕಟ್ಟೆಯಲ್ಲಿಯೂ ಹೂಡಲ್ಪಡುತ್ತವೆ. 2 ಕೆಲವೊಮ್ಮೆ ದೊಡ್ಡ ದೊಡ್ಡ ಲಾಭದಾಯಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ದುಡ್ಡನ್ನು ತಾವೇ ಒಂದು ಟ್ರಸ್ಟ್ ರಚಿಸಿ ಅದನ್ನು ಹೂಡುವ ಅನುಮತಿಯನ್ನು ಸರಕಾರದಿಂದ ಪಡೆದಿರುತ್ತಾರೆ. ಇದು EPO ದಂತೆಯೇ, ಅದರ ಮಾರ್ಗಸೂಚಿಯಂತೆ ನಡೆಯುತ್ತದೆ. ಫಂಡ್ ಮ್ಯಾನೇ ಜೆ¾ಂಟ್ ಒಂದು ಬಿಟ್ಟು ಉದ್ಯೋಗಿಗಳ ಮಟ್ಟಿಗೆ ಬೇರಾವುದೇ ವ್ಯತ್ಯಾಸವಿರುವುದಿಲ್ಲ. ಹೆಚ್ಚಿನ ಪ್ರತಿಷ್ಟಿತ ಕಂಪೆನಿಗಳು ಈ ರೀತಿ ತಮ್ಮದೇ ಆದ ಸ್ವಂತ ಟ್ರಸ್ಟ್ ಅಡಿ EPF ಚಲಾಯಿಸುತ್ತವೆ. ಅವುಗಳು ಹೆಚ್ಚಾಗಿ ಈ ದುಡ್ಡನ್ನು ತಮ್ಮದೇ ಉದ್ಯಮದಲ್ಲಿ ತೊಡಗಿಸುತ್ತವೆ. ಅವುಗಳೂ ಕೂಡಾ ಸರಕಾರ ಘೋಷಿಸಿದ ಬಡ್ಡಿದರ ಮತ್ತು ನಿಯಮಾವಳಿಗೆ ಬದ್ಧವಾಗಿರುತ್ತವೆ. ಪ್ರತಿಫಲ ಇಪಿಎಫ್ ಸ್ಕೀಮಿನಲ್ಲಿ ಎರಡು ವಿಭಾಗಗಳಿವೆ ಎಂದು ಈ ಮೊದಲೇ ಹೇಳಲಾಗಿದೆ. ಪ್ರಾವಿಡೆಂಟ್ ಫಂಡ್ ನೀಡುವ ಇಪಿಎಫ್ ಹಾಗೂ ಪೆನ್ಶನ್ ನೀಡುವ ಇಪಿಎಸ್. 1 ಇಪಿಎಫ್ ಬಗ್ಗೆ ಹೇಳುವುದಾದರೆ ಅದರಲ್ಲಿ ಬಹಳ ಉತ್ತಮ ಬಡ್ಡಿದರವನ್ನು ಸರಕಾರ ಯಾವತ್ತೂ ಕಾಯುತ್ತಿದೆ. ಇದೊಂದು ಉತ್ತಮ ಹೂಡಿಕೆ ಎನ್ನುವುದರಲ್ಲಿ ಸಂಶಯವಿಲ್ಲ. ಸದ್ಯಕ್ಕೆ ಇಪಿಎಫ್ ಬಡ್ಡಿ ದರ ಶೇ.8.55, ಸಾಲದ್ದಕ್ಕೆ ಅದು ಕರಮುಕ್ತವೂ ಹೌದು. ಹೊರಗಿನ ಸಾರ್ವಜನಿಕ ಪಿಪಿಎಫ್ ಸದ್ಯ ನೀಡುವುದು ಕೇವಲ ಶೇ.7.6. ಬ್ಯಾಂಕಿನಲ್ಲಿ ಗರಿಷ್ಠ ನಿಮಗೆ ಸಿಗುವುದು ಶೇ.7 ಮತ್ತದು ಕರಾರ್ಹ. 2 ಇಪಿಎಸ್ ಬಗ್ಗೆ ಹೇಳುವುದಾದರೆ – ಉದ್ಯೋಗದಾತರ ಶೇ.12 ದೇಣಿಗೆಯ ಶೇ. 8.33 ಭಾಗ, ಆದರೆ ಮಾಸಿಕ ಗರಿಷ್ಟ ರೂ. 1250 ಜಮೆಯಾಗುವ ಈ ಯೋಜನೆಯಲ್ಲಿ ಪ್ರತಿಫಲ ಚೆನ್ನಾಗಿಲ್ಲ. ಪ್ರತಿ ತಿಂಗಳು ರೂ. 1250 ಕಟ್ಟುವ ಉದ್ಯೋಗಿಗಳಿಗೆ ನಮ್ಮ ಸರಕಾರ ಮಕ್ಮಲ್ ಟೋಪಿ ಹೇಗೆ ಹೊಲಿಯುತ್ತಿದೆ ಎಂದು ಗೊತ್ತಾಗಬೇಕಾದರೆ ಅದೇ ರೂ. 1250 ಅನ್ನು ಅದೇ ಸರಕಾರ ಸ್ಟೇಟ್ ಬ್ಯಾಂಕು/ಪೋಸ್ಟಾಫೀಸುಗಳ ಮೂಲಕ ನಡೆಸುವ ಪಬ್ಲಿಕ್ ಪ್ರಾವಿಡೆಂಡ್ ಫಂಡಿನಲ್ಲಿ ಅಥವಾ ಆರ್ಡಿಯಲ್ಲಿ ಹಾಕಬೇಕು. ಪ್ರತಿ ತಿಂಗಳು ರೂ. 1250 ಅನ್ನು 35 ವರ್ಷಗಳ ಕಾಲ ಒಂದು ಪಿಪಿಎಫ್/ಆರ್ಡಿಯಲ್ಲಿ ಹಾಕಿದರೆ ಮತ್ತು ಅದಕ್ಕೆ ವಾರ್ಷಿಕ ಸರಾಸರಿ ಶೇ. 8.5 ಬಡ್ಡಿ ಸಿಕ್ಕಿದರೆ ಅವಧಿಯ ಅಂತ್ಯಕ್ಕೆ ನಿಮ್ಮ ಕೈಯಲ್ಲಿ ರೂ. 30,31,501 ಇರುತ್ತದೆ. ಅದೇ ದುಡ್ಡನ್ನು ಒಂದು ಶೇ.7 ಬಡ್ಡಿ ಬರುವ ಎಫ್ಡಿಯಲ್ಲಿ ಇಟ್ಟರೆ ತಿಂಗಳೂ ರೂ. 17,683 ಬಡ್ಡಿ ಬರುತ್ತದೆ. ಅಸಲು ಸದಾ ನಿಮ್ಮದಾಗಿಯೇ ಇರುತ್ತದೆ. ಅದರ ಬದಲು ಇಪಿಸ್ ಎಂಬ ಟೊಪ್ಪಿ ಸ್ಕೀಮಿಗೆ ದೇಣಿಗೆ ಕಟ್ಟುತ್ತಾ ಹೋದರೆ ಅಸಲು ಮೊತ್ತವನ್ನು ಸಂಪೂರ್ಣವಾಗಿ ನುಂಗಿಹಾಕುವುದಲ್ಲದೆ, ಪಿಂಚಣಿ ಎಂದು ಸಿಗುವ ಮಾಸಿಕ ಮೊತ್ತ ರೂ. 7500 ಮಾತ್ರ. ನಿಮ್ಮ ಅಸಲು ಮೊತ್ತ ಹಿಂತಿರುಗಿ ಬಾರದಲ್ಲಿಗೆ ಹೋದದ್ದಲ್ಲದೆ ನಿಮ್ಮ ಕಿಸೆಗೆ ಬರುವ ಪಿಂಚಣಿ ಜುಜುಬಿ! ಉಳಿದ ಮೊತ್ತ ಅದೆಲ್ಲಿಗೆ ಹೋಗುತ್ತದೋ ಆ ದೇವನೇ ಬಲ್ಲ. ಅಲ್ಲದೆ, ಪೆನ್ಶನ್ ಮೂಲಕ ಬರುವ ದುಡ್ಡು ಸಂಪೂರ್ಣವಾಗಿ ಕರಾರ್ಹ ಆದಾಯವಾಗಿರುತ್ತದೆ. ಹಾಗಾಗಿ ಇಪಿಎಫ್ ಸಿಹಿಯಾದರೆ ಇಪಿಎಸ್ ಕಹಿ. ಇಪಿಎಸ್ ಬೇವಾದರೆ ಇಪಿಎಫ್ ಬೆಲ್ಲ. ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುತ್ತಿದೆಯೇ ಸರಕಾರ?
(ಮುಂದುವರಿಯುವುದು) – ಜಯದೇವ ಪ್ರಸಾದ ಮೊಳೆಯಾರ