Advertisement
ಬ್ರಹ್ಮ ಸೃಷ್ಟಿಯನ್ನು ನಿರ್ಮಿಸಿದ ದಿನ, ಶ್ರೀರಾಮಚಂದ್ರ ವಾಲಿಯನ್ನು ಸಂಹರಿಸಿದದಿನ, ದುರುಳ ರಾವಣನನ್ನು ಕೊಂದುರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವಾಗಿದೆ. ಯುಗಾದಿಯು ಭಾರತೀಯರದೃಷ್ಟಿಯಲ್ಲಿ ನೂತನ ವರ್ಷದ ಹೊಸದಿನ.ಈ ಹೊಸತನಕ್ಕೆ ಕಾಲವೇ ಸ್ಪಂದಿಸುತ್ತದೆ.ಹೊಸ ವರುಷಕ್ಕೆಸ್ವಾಗತ ಕೋರುವಂತೆ ಬೇವಿನಮರ ಚಿಗುರುತ್ತದೆ.
Related Articles
Advertisement
ಯುಗಾದಿ ಹಬ್ಬಕ್ಕೆ ಕರ್ನಾಟಕದಲ್ಲಿ ವಿಶೇಷ ಭಕ್ಷ್ಯವಾಗಿ ಒಬ್ಬಟ್ಟು ಅಥವಾಹೋಳಿಗೆಯನ್ನು ಮಾಡಲಾಗುತ್ತದೆ. ಅದರಲ್ಲಿಯೂ ವಿವಿಧ ರುಚಿಯ ಒಬ್ಬಟ್ಟು ಇಲ್ಲಿನ ಮತ್ತೂಂದು ವಿಶೇಷ. ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಸಕ್ಕರೆ ಹೋಳಿಗೆ, ಮಂಡಿಗೆ ಇತ್ಯಾದಿಗಳನ್ನುತಯಾರಿಸಿ ಸವಿದರೆ, ಆಂಧ್ರಪ್ರದೇಶದವರುಭಕ್ಷ್ಯಾಲು ಅಥವಾ ಬೊಬ್ಬಟ್ಲು (ಪೊಲೆಲು)”ಪಚ್ಚಡಿ’ಯನ್ನು ತಯಾರಿಸಿ ಸವಿಯುವ ಸಂಪ್ರದಾಯವಿದೆ.
ಆಚರಣಾ ಕ್ರಮ :
ಯುಗಾದಿ ಹಬ್ಬದ ಆಚರಣೆ ಚಾಂದ್ರಮಾನ ಮತ್ತು ಸೌರಮಾನಎಂಬ ಎರಡು ಪದ್ಧತಿಗಳನ್ವಯರೂಢಿಯಲ್ಲಿದೆ. ಈ ದಿನ ಉಷಃಕಾಲದಲ್ಲಿ ಪರಮಾತ್ಮನ ಸ್ಮರಣೆ ಮಾಡುತ್ತ, ದೇವರಮನೆ, ಮನೆಯ ಮುಖ್ಯ ದ್ವಾರಗಳನ್ನುರಂಗೋಲಿ ತೋರಣಗಳಿಂದ ಸಿಂಗರಿಸಿ,ಅಭ್ಯಂಜನ ಸ್ನಾನ ಮಾಡಿ, ಹೊಸಉಡುಗೆ-ತೊಡುಗೆಗಳನ್ನು ತೊಟ್ಟು,ಹೊಸ ವರ್ಷದ ಪಂಚಾಂಗವನ್ನು ದೇವರಸಮೀಪವಿಟ್ಟು ಪೂಜಿಸಿ, ಅನಂತರ ಬೇವು-ಬೆಲ್ಲ ಸೇವಿಸಿ, ಸನ್ಮಿತ್ರರು ಸೇರಿದಸಭೆಯಲ್ಲಿ ಪುರೋಹಿತರು ಪಠಣಮಾಡುವ ಪಂಚಾಂಗ ಶ್ರವಣವನ್ನುಆಲಿಸುವುದು ರೂಢಿಯಲ್ಲಿದೆ.
ಅಂದರೆನೂರು ವರ್ಷಗಳ ಆಯುಷ್ಯ, ದೃಢಆರೋಗ್ಯ ಸಕಲ ಸಂಪತ್ತಿನ ಪ್ರಾಪ್ತಿಗಾಗಿ, ಸಕಲಾರಿಷ್ಟ ನಿವಾರಣೆಗಾಗಿ ಬೇವು-ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಸೇವಿಸಬೇಕು ಎಂಬುದು ನಡೆದು ಬಂದ ಪದ್ಧತಿ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಯುಗಾದಿ ಆಚರಣೆ ಬಲು ಜೋರಾಗಿ ನಡೆಯುತ್ತಿತ್ತು. ಇಂದಿಗೂ ಕರ್ನಾಟಕದಕೆಲವೆಡೆ ಅತ್ಯಂತ ವಿಜೃಂಭಣೆಯಿಂದಆಚರಿಸಲಾಗುತ್ತದೆ. ಪ್ರಸ್ತುತ ಪೇಟೆಪಟ್ಟಣಗಳಲ್ಲಿ ಹಬ್ಬದ ವಾತಾವರಣಮಾಸಿ ಹೋಗಿದೆ. ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ಮನುಷ್ಯದಿನದಿನಕ್ಕೆ ಯಾವುದಕ್ಕೂ ಸಮಯ,ವ್ಯವಧಾನಗಳಿಲ್ಲದೆ ಹಬ್ಬದ ಸಂಭ್ರಮದಸವಿಯಿಂದ ವಂಚಿತನಾಗುತ್ತಿದ್ದಾನೆ. ಮುಂದೆ ಹಾಗಾಗದಿರುವಂತೆ ಮುಂದಿನಪೀಳಿಗೆಗೆ ಯುಗಾದಿಯಂತಹಹಬ್ಬಗಳ ಕುರಿತು ತಿಳಿಸಿ ಸಂಭ್ರಮದಿಂದಹಬ್ಬವನ್ನು ಆಚರಿಸುವ ಇರಾದೆಯನ್ನುಕಲಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ.
ಯುಗಾದಿ ಮಹತ್ವ : ಚೈತ್ರ-ವೈಶಾಖ ಮಾಸ ಕೇವಲ ಪ್ರಾಕೃತಿಕವಾಗಿ ಮಹತ್ವವುಳ್ಳಕಾಲವಲ್ಲದೆ ಐತಿಹಾಸಿಕ, ಸಾಂಸ್ಕೃತಿಕವಾಗಿಯೂ ಮಹತ್ವಹೊಂದಿದೆ. ಶ್ರೀರಾಮನ ಜನನಚೈತ್ರ ಶುದ್ಧ ನವಮಿಯಂದು,24ನೇ ತೀರ್ಥಂಕರ ಮಹಾವೀರ ಸ್ವಾಮಿಯ ಜನನ ಚೈತ್ರಶುದ್ಧ ತ್ರಯೋದಶಿಯಂದು,ಬುದ್ಧ ಜಯಂತಿ ವೈಶಾಖಪೂರ್ಣಿಮೆಯಂದು ಹೀಗೆಮಹಾನುಭಾವರು ಜನಿಸಿದ ಪುಣ್ಯ ಕಾಲವಾದ ಈ ಮಾಸವು ವೈಶಿಷ್ಟ್ಯದಿಂದ ಕೂಡಿದೆ.
ಚಾಂದ್ರಮಾನ ಯುಗಾದಿಕಳೆದ ನಂತರವೇ ಸೌರಮಾನಯುಗಾದಿ ಬರುತ್ತದೆ. ಇದುಸೌರಮಾನದ ಪ್ರಕಾರ ವರ್ಷದಆರಂಭ, ಸೌರಮಾನದಮೇಷ ಮಾಸಾರಂಭ,ರವಿಯು ಮೇಷ ರಾಶಿಯನ್ನುಪ್ರವೇಶಿಸುವುದರಿಂದ “ಮೇಷ ಸಂಕ್ರಮಣ’ ಎಂದು ಕರೆಯಲ್ಪಡುತ್ತದೆ. ಅಂದಿನಿಂದಸೌರ ವರ್ಷದ ಗಣನೆ ಆರಂಭ.ಆ ದಿನವನ್ನು “ವಿಷು’ವೆಂದು ಕರೆಯುತ್ತಾರೆ