Advertisement
ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಿದ ಬಳಿಕ ಇಚ್ಛೆ/ಆಯ್ಕೆಗಳನ್ನು ಆವಶ್ಯವಿದ್ದಲ್ಲಿ ಬದಲಾಯಿಸಬಹುದು, ಸೇರ್ಪಡೆ ಮಾಡಬಹುದು ಅಥವಾ ಅಳಿಸಬಹುದು. ಎಲ್ಲ ಅಭ್ಯರ್ಥಿಗಳು ಆದ್ಯತೆ ಮೇರೆಗೆ ಆಯ್ಕೆಗಳನ್ನು ಫೆ. 7ರ ಬೆಳಗ್ಗೆ 8 ಗಂಟೆಯವರೆಗೆ ದಾಖಲಿಸಬಹುದು. ನಿಗದಿತ ಸಮಯದ ಅನಂತರ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ಕೆಇಎ ತಿಳಿಸಿದೆ.
ಫೆ. 4ರ ಸಂಜೆ 7 ಗಂಟೆ – ಅಣಕು ಸೀಟು ಹಂಚಿಕೆ ಫಲಿತಾಂಶ
ಫೆ. 4ರ ರಾತ್ರಿ 7 ಗಂಟೆಯಿಂದ ಫೆ. 7 – ಆಯ್ಕೆಗಳನ್ನು ಬದಲಾಯಿಸಲು ಅವಕಾಶ
ಫೆ. 7ರ ಬೆಳಗ್ಗೆ 8 ಗಂಟೆ – ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟ
ಫೆ. 7ರ ಬೆಳಗ್ಗೆ 8 ಗಂಟೆಯಿಂದ ಫೆ. 9ರ ರಾತ್ರಿ 8 – ಪೋಷಕರ ಜತೆ ಚರ್ಚಿಸಿ ಸೂಕ್ತ ವಾದ ಆಯ್ಕೆ ಮಾಡಿಕೊಳ್ಳಲು ಅವಕಾಶ
ಫೆ. 8ರ ಬೆಳಗ್ಗೆ 11ರಿಂದ ಫೆ. 10ರ ಸಂಜೆ 4 – ಚಾಯ್ಸ 1 ಮತ್ತು 2 ಅನ್ನು ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿಗೆ ಅವಕಾಶ
ಫೆ. 10ರ ಸಂಜೆ 4 – ಚಾಯ್ಸ 1 ಅನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿನಲ್ಲಿ ಪ್ರವೇಶ ಪಡೆಯುವುದು
ಫೆ. 11ರ ಸಂಜೆ 5.30 – ಎಲ್ಲ ದಾಖಲೆಗಳ ದೃಢೀಕರಣ ಮಾಡುವುದು .