ಬ್ಯುಚರೆಸ್ಟ್: ವಿಶ್ವ ಫುಟ್‌ಬಾಲ್ ಚಾಂಪಿಯನ್ ಫ್ರಾನ್ಸ್ ತಂಡವನ್ನು 5-4 ಅಂತರದ ಪೆನಾಲ್ಟಿ ಗೋಲಿನಿಂದ ಮಣಿಸಿದ ಸ್ವಿಟ್ಸರ್ಲೆಂಡ್ ತಂಡ ಯೂರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಮುನ್ನಡೆದಿದೆ.
ಇದನ್ನೂ ಓದಿ:ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು
ಬ್ಯುಚರೆಸ್ಟ್‌ನಲ್ಲಿ ನಡೆದ ಈ ರೋಮಾಂಚಕಾರಿ ಕಾಲ್ಚೆಂಡಿನ ಕಾಳಗದಲ್ಲಿ ಕೈಲಿಯನ್ ಬಾಪ್ಪೆ ನಿರ್ಣಾಯಕ ಸ್ಪಾಟ್ ಕಿಕ್‌ನಲ್ಲಿ ಗೋಲು ಬಾರಿಸಲು ವಿಫಲರಾದ ಕಾರಣ ವಿಶ್ವಚಾಂಪಿಯನ್ ಫ್ರಾನ್ಸ್ ಸೋತು ಕೂಟದಿಂದ ನಿರ್ಗಮಿಸಿದೆ. ಇದಕ್ಕೂ ಮುನ್ನ ನಿಗದಿತ ಸಮಯದಲ್ಲಿ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿತ್ತು.
90ನೇ ನಿಮಿಷದಲ್ಲಿ ಸ್ವಿಟ್ಸರ್ಲೆಂಡ್‌ನ ಮಾರಿಯೊ ಗವ್ರನೊವಿಕ್ ಹೊಡೆದ ಗೋಲಿನಿಂದಾಗಿ ಸಮಬಲ ಸಾಧಿಸಲು ಸಾಧ್ಯವಾಗಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಟ್ಸರ್ಲೆಂಡ್ ಬಲಿಷ್ಠ ಸ್ಪೇನ್ ಜತೆ ಹೋರಾಡಲಿದೆ. ವ್ಲಾದಿಮಿರ್ ಪೆಟ್ಕೊವಿಕ್ ಸಾರಥ್ಯದ ಸ್ವಿಟ್ಸರ್ಲೆಂಡ್ ತಂಡಕ್ಕೆ ಹ್ಯಾರಿಸ್ ಸೆಫೆರೊವಿಕ್ 15ನೇ ನಿಮಿಷದಲ್ಲೇ ಮುನ್ನಡೆ ತಂದುಕೊಟ್ಟರು. ಆದರೆ ಎರಡನೇ ಅವಧಿಯ ಆರಂಭದಲ್ಲಿ ರಿಕಾರ್ಡೊ ರೋಡ್ರಿಗಸ್ ಅವರ ಪೆನಾಲ್ಟಿಯನ್ನು ಅದ್ಭುತವಾಗಿ ತಡೆಯುವ ಮೂಲಕ ಹ್ಯುಗೊ ಲಾರಿಸ್ ಗಮನ ಸೆಳೆದರು.
ಸ್ವಿಟ್ಸರ್ಲೆಂಡ್ ತನ್ನ ಐದು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿಕೊಂಡರೆ, ಫ್ರಾನ್ಸ್ ಬಾಪ್ಪೆ ಹೊಡೆದ ಚೆಂಡನ್ನು ಗೋಲಿ ಸೊರ್ಮೆ ಬಲಕ್ಕೆ ಹಾರಿ ಅದ್ಭುತವಾಗಿ ಹಿಡಿಯುವ ಮೂಲಕ ಚಾಂಪಿಯನ್ನರಿಗೆ ನಿರ್ಗಮನ ಬಾಗಿಲು ತೆರೆದರು. ಇದು 83 ವರ್ಷಗಳಲ್ಲೇ ಮೊದಲ ಬಾರಿಗೆ ಸ್ವಿಟ್ಸರ್ಲೆಂಡ್ ತಂಡ ಪ್ರಮುಖ ಟೂರ್ನಿಯ ನಾಕೌಟ್‌ನಲ್ಲಿ ಗೆಲುವು ಸಾಧಿಸಿತು.