Advertisement

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

03:22 AM May 18, 2021 | Team Udayavani |

ಕುಂದಾಪುರ: ಕೊರೊನಾ, ಲಾಕ್‌ಡೌನ್‌ ಸಂಕಷ್ಟ ಕಾಲದಲ್ಲೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಭಾಗದ ಜನರ ಕೈ ಹಿಡಿಯುತ್ತಿದೆ. ಕುಂದಾಪುರ ತಾಲೂಕಿನ ಗ್ರಾಮಾಂತರ ಭಾಗದ ಹಲವು ಗ್ರಾ.ಪಂ.ಗಳಲ್ಲಿ ಬಾವಿ ನಿರ್ಮಾಣ, ಕೆರೆ ಅಭಿವೃದ್ಧಿ ಸಹಿತ ಅನೇಕ ಕೆಲಸಗಳಿಗೆ ಉದ್ಯೋಗ ಖಾತರಿ ಯೋಜನೆ ವರದಾನವಾಗುತ್ತಿದೆ.

Advertisement

ಹೊಸಾಡು ಪಂಚಾಯತ್‌ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಗಾಗಿ 3 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇಲ್ಲಿನ ಗ್ರಾಮಸ್ಥರಿಗೆ ಲಾಕ್‌ಡೌನ್‌ ಸಮಯದಲ್ಲಿ ಉದ್ಯೋಗ ನೀಡಿದಂತಾಗಿದೆ.

03 ಕೆರೆ ಅಭಿವೃದ್ಧಿ
ಹೊಸಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ 7 ಎಕರೆ ವಿಸ್ತೀರ್ಣದ ಕಡುಬಿನ ಕೆರೆಯನ್ನು ಈಗಾಗಲೇ 2 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ 979 ಮಾನವ ಸಂಪನ್ಮೂಲ ದಿನಗಳನ್ನು ವಿನಿಯೋಗಿಸಲಾಗಿದೆ. ಎಪ್ರಿಲ್‌ನಲ್ಲೇ ಈ ಕಾರ್ಯ ನಡೆದಿದ್ದು, ಇದಕ್ಕಾಗಿ 36 ಮಂದಿ ತೊಡಗಿಸಿದ್ದರು. ಪ್ರಸ್ತುತ ಇನ್ನು ಮಡಿವಾಳ ಕೆರೆ ಹಾಗೂ ಗುಮ್ಮನ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 3 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಈವರೆಗೆ ತಲಾ 40 ಮಾನವ ಸಂಪನ್ಮೂಲ ದಿನಗಳ ಕೆಲಸವಾಗಿದೆ. ಇದಕ್ಕಾಗಿ 15 ಮಂದಿ ಹಾಗೂ 10 ಮಂದಿ ಕೆಲಸ ಮಾಡುತ್ತಿದ್ದಾರೆ.

60 ಹೊಸ ಬಾವಿ
ಹೆಮ್ಮಾಡಿಯಲ್ಲಿ ನೀರಿನ ಸಮಸ್ಯೆ ಗಂಭೀರ ವಾಗಿದ್ದು, ಇದರಿಂದಾಗಿ ಜನರೇ ಮನೆ- ಮನೆಗಳಲ್ಲಿ ಸ್ವಂತ ಬಾವಿ ತೋಡಲು ಮುಂದಾಗಿದ್ದಾರೆ. ಈ ವರ್ಷದಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹೆಮ್ಮಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಬರೋಬ್ಬರಿ 60 ಬಾವಿಗಳನ್ನು ತೋಡಿರುವುದು ವಿಶೇಷ.

ಉತ್ತಮ ಸ್ಪಂದನೆ
ನಮ್ಮಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 3 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 7 ಎಕರೆ ವಿಸ್ತೀರ್ಣದ ಕಡುಬಿನ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಗುಮ್ಮನಕೆರೆ ಹಾಗೂ ಮಡಿವಾಳ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
– ಪಾರ್ವತಿ, ಪಿಡಿಒ ಹೊಸಾಡು ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next