Advertisement

ಉದ್ಯೋಗ ಖಾತ್ರಿ: ಉಡುಪಿ ಜಿಲ್ಲೆ ಕನಿಷ್ಠ ಸಾಧನೆ

10:29 AM Dec 13, 2018 | |

ಕುಂದಾಪುರ: ಕುಡಿಯುವ ನೀರು ಮತ್ತು ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಕನಿಷ್ಠ ಸ್ಥಾನದಲ್ಲಿದೆ. ಗುರಿ ಸಾಧನೆ ಮೂಲಕ ಸಾಧನೆಯ ಗತಿ ಏರಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ರೂಪೇಶ್‌ ಹೇಳಿದ್ದಾರೆ.

Advertisement

ಅವರು ಬುಧವಾರ ಇಲ್ಲಿನ ತಾ.ಪಂ.ನಲ್ಲಿ 65 ಗ್ರಾ.ಪಂ.ಗಳ ಪಿಡಿಒಗಳ ಸಭೆ ನಡೆಸಿದರು. ಕೋಟೇಶ್ವರ, ಮರವಂತೆ, ತ್ರಾಸಿ, ತೆಕ್ಕಟ್ಟೆ ಮೊದಲಾದ ಪಂಚಾಯತ್‌ಗಳು ತೀರಾ ಕಡಿಮೆ ಸಾಧನೆ ಮಾಡಿರುವುದಕ್ಕೆ ವಿವರಣೆ ಪಡೆದರು. 
ಬಹುತೇಕ ಪಂಚಾಯತ್‌ನವರು ಮರಳು ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಕಾಮಗಾರಿ ನಡೆಯದೇ ಖಾತ್ರಿ ಕೂಲಿ ನೀಡಲು ಸಾಧ್ಯವಾಗಿಲ್ಲ ಎಂಬ ಕಾರಣ ನೀಡಿದರು. ಈಗ ಲೋಕೋಪಯೋಗಿ ಇಲಾಖೆ ಮೂಲಕ ಮರಳು ದೊರೆಯುತ್ತದೆ. ಈ ಮೂಲಕ ಬಡವರಿಗೆ ಮರಳು ಕೊಡಿಸಿ ಕಾಮಗಾರಿ ಗುರಿ ತಲುಪಿಸಿ ಎಂದು ಸಿಂಧೂ ರೂಪೇಶ್‌ ಸೂಚಿಸಿದರು.

ಕುಂದಾಪುರದಲ್ಲಿ 1.43 ಲಕ್ಷ ಗುರಿ ನೀಡಲಾಗಿದ್ದು, 1.23 ಲಕ್ಷ ಮಾನವ ದಿನಗಳ ಕೆಲಸ ಆಗಿದೆ. 43 ಕೋ.ರೂ.ಗಳ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಡಿ.31ರ ಒಳಗೆ ಗುರಿ ಪೂರೈಸದಿದ್ದರೆ ಕಳಪೆ ಸಾಧನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಡಿಒಗಳಿಗೆ ತರಾಟೆ
40 ಲಕ್ಷ ರೂ.ಗಳ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನೂತನವಾಗಿ ರಚನೆಯಾದ 9 ಪಂಚಾಯತ್‌ಗಳಿಗೆ ಮಂಜೂರಾಗಿದ್ದು, 3 ಮಾತ್ರ ಆರಂಭವಾಗಿವೆ. 30 ಶಾಲೆಗಳಿಗೆ ಆಟದ ಮೈದಾನ, 99 ಶಾಲೆಗಳಿಗೆ ಆವರಣಗೋಡೆ ಮಂಜೂರಾಗಿದ್ದರೂ 3 ಮಾತ್ರ ಕಾಮಗಾರಿ ನಡೆದಿದೆ. ಈ ಕುರಿತು ಪಿಡಿಒಗಳನ್ನು ಜಿಪಂ ಸಿಇಒ ತರಾಟೆಗೆತ್ತಿಕೊಂಡರು. 

ತೆರಿಗೆ ಸಂಗ್ರಹ: ಕಳಪೆ ಸಾಧನೆ 
ತೆರಿಗೆ ಸಂಗ್ರಹಣೆಯಲ್ಲಿ ಕಳಪೆ ಸಾಧನೆ ಮಾಡಿದ ಪಂಚಾಯತ್‌ಗಳನ್ನು ಸಿಇಒ ಅವರು ತರಾಟೆಗೆ ತೆಗೆದುಕೊಂಡು, ನಿಮ್ಮ ಮೂಲ ಕೆಲಸವನ್ನೇ ನಿರ್ವಹಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಯೋಜನಾಧಿಕಾರಿ ನಯನಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪೆಡೆ°àಕರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next