ಕಾಪು: ವಿಜ್ಞಾನ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇಂದು ಪ್ರಪಂಚದಲ್ಲಿ ಆಗುವ ಅಭಿವೃದ್ಧಿಗೆ ವಿಜ್ಞಾನ ಪೂರಕವಾಗಿದೆ. ಎಳೆಯ ಪ್ರಾಯದಲ್ಲಿಯೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಹೆಚ್ಚು ಆಗಬೇಕಾಗಿದ್ದು, ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹಾಗೂ ಸಂಶೋಧಿಸುವ ಸಾಮರ್ಥ್ಯ ಬೆಳೆಯುತ್ತದೆ ಎಂದು ಎಂ.ಇ.ಟಿ. ಆಂಗ್ಲ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಹೇಳಿದರು.
ಉದ್ಯಾವರ ಎಂ.ಇ.ಟಿ. ಆಂಗ್ಲ ಮಾಧ್ಯಮ ಶಾಲೆಯ ವಿಜ್ಞಾನ ಮತ್ತು ಕಲಾ ಸಂಘದ ವತಿಯಿಂದ ವಿಜ್ಞಾನ ಮತ್ತು ಕಲಾ ವಸ್ತುಗಳ ಬೃಹತ್ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ದಿನೇಶ್ ಕಿಣಿ, ಶಾಲಾ ಟ್ರಸ್ಟಿ ಕಲಿಮುಲ್ಲಾ ತೋನ್ಸೆ, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಸುಹೇಲ್, ಆಡಳಿತಾಧಿಕಾರಿ ಖಲೀಲ್ ಅಹಮ್ಮದ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸಬೀನಾ ಸ್ವಾಗತಿಸಿ ದರು. ರೀನಾ ವಂದಿಸಿದರು. ಪ್ರವಲ್ಲಿಕಾ ನಿರೂಪಿಸಿದರು.