Advertisement
2020ರಲ್ಲಿ ಈ ರಸ್ತೆಯೂ 15.30 ಕಿ. ಮೀ. ಅಂತರದ ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿತ್ತು. ಉದ್ಯಾವರ ಎನ್‌ಎಚ್66ನಿಂದ ಕೆಮೂ¤ರು ಮಾರ್ಗವಾಗಿ ಅಲೆವೂರು ಗುಡ್ಡೆಯಂಗಡಿ ಮೂಲಕ ಮರ್ಣೆ-ಗುಂಡುಪಾದೆ, ಬೆಳ್ಳೆ ರಸ್ತೆ ಕೆಲವು ಕಡೆ ಕಿರಿದಾಗಿದ್ದು, ಕೆಲವು ಕಡೆಗಳಲ್ಲಿ ಹೊಂಡಗುಂಡಿಗಳಿಂದ ಕೂಡಿದೆ. ನಡುವೆ ಅಲ್ಲಲ್ಲಿ ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಗ್ರಾಮೀಣ ಸಂಪರ್ಕ ಸಾರಿಗೆ ಸುಧಾರಣೆ ವ್ಯವಸ್ಥಿತ ರಸ್ತೆ ನಿರ್ಮಾಣ ಮಾಡಲು ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭಗೊಳ್ಳಬೇಕು ಎಂದು ಸ್ಥಳೀಯರ ಅಭಿಪ್ರಾಯ.
ಅಲೆವೂರಿನಿಂದ ಮರ್ಣೆ-ಪೆರ್ಣಂಕಿಲ ಸಂಪರ್ಕಿಸುವ ಕಿರಿದಾದ ಕಾಂಕ್ರೀಟ್-ಡಾಮರು ರಸ್ತೆ ತೀರಾ ಹದಗೆಟ್ಟಿದ್ದು, ಇತ್ತೀಚೆಗೆ ನಡೆಸಿರುವ ಪ್ಯಾಚ್‌ವರ್ಕ್ ಕಾಮಗಾರಿ ಮಳೆಗಾಲದಲ್ಲಿ ಹಾಳಾಗುವ ಸಾಧ್ಯತೆ ಇದೆ. ಈ ಕಿರಿದಾದ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುವಾಗ ಇತರೆ ಸಣ್ಣ ವಾಹನಗಳು ರಸ್ತೆಯಿಂದ ಕೆಳಗಿಳಿದು ಗುಂಡಿಗಳಲ್ಲಿ ಸಂಚರಿಸಬೇಕಾಗುತ್ತದೆ. ಈ ವೇಳೆ ಅಪಾಯ ಕಟ್ಟಿಟ್ಟ ಬುತ್ತಿ. ಈ ವೇಳೆ ಸವಾರರು ತೀರ ಸಂಕಷ್ಟದಿಂದ ವಾಹನ ಚಾಲನೆ ಮಾಡಬೇಕಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾರಣಿಗರ ಗುಂಡುಪಾದೆ ಹಾಗೂ ಇತಿಹಾಸ ಪ್ರಸಿದ್ಧ ಪೆರ್ಣಂಕಿಲ ದೇವಸ್ಥಾನವನ್ನು ಸಂಪರ್ಕಿಸುವ ಅತೀ ಸಮೀಪದ ಪ್ರಮುಖ ದಾರಿ ಇದಾಗಿದೆ. ಈ ರಸ್ತೆಯ ಹಲವು ಕಡೆಗಳಲ್ಲಿ ರಾತ್ರಿ ಸಂಚಾರ ತೀರ ಕಷ್ಟವಾಗಿದ್ದು, ಸಾಕಷ್ಟು ಮಂದಿ ವಿದ್ಯಾರ್ಥಿ, ಉದ್ಯೋಗಿಗಳು ಈ ಮಾರ್ಗದಲ್ಲಿ ಓಡಾಡುತ್ತಾರೆ. ಹಲವಾರು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿವೆ. ರಸ್ತೆ ಅಭಿವೃದ್ಧಿಗೊಂಡು ಚರಂಡಿ, ವಿದ್ಯುತ್ ದೀಪ ಎಲ್ಲವು ವ್ಯವಸ್ಥಿತವಾಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
Related Articles
ಎನ್‌ಎಚ್ 66ರ ಉದ್ಯಾವರ- ಕೆಮೂ¤ರು – ಅಲೆವೂರು – ಮರ್ಣೆ-ಗುಂಡುಪಾದೆ-ಮೂಡುಬೆಳ್ಳೆ 15 ಕಿ. ಮೀ. ರಸ್ತೆಯನ್ನು 25 ಕೋ. ರೂ. ವೆಚ್ಚದಲ್ಲಿ ಪ್ರಸ್ತುತ ಇರುವ 3.5 ಮೀ. ಅಗಲದಿಂದ 5.5 ಮೀ. ವಿಸ್ತರಣೆಗೊಳಿಸಲಾಗುತ್ತದೆ. ಏರುಪೇರು ಕಾಂಕ್ರೀಟ್ ರಸ್ತೆಯನ್ನು ತಾಂತ್ರಿಕವಾಗಿ ಸರಿಹೊಂದಿಸಲು ಪ್ರಯತ್ನಿಸಿ ಎರಡೂ ಬದಿಗಳಲ್ಲಿ ತಲಾ 1 ಮೀ. ಅಗಲದಂತೆ ಕಾಂಕ್ರೀಟ್ ರಸ್ತೆ ಬರಲಿದ್ದು, ಉಳಿದಂತೆ ಪೂರ್ತಿ ಡಾಮರು ರಸ್ತೆ 5.5 ಮೀ. ಗೆ ವಿಸ್ತರಣೆಗೊಳ್ಳಲಿದ್ದು ಜತೆಗೆ ಈ ಮಾರ್ಗದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
Advertisement
ವರದಿಗೆ ಸ್ಪಂದನೆ ಕಳೆದ ಹಲವಾರು ವರ್ಷಗಳಿಂದ ಉತ್ತಮ ರಸ್ತೆ ಇಲ್ಲದೇ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದೀಗ ಲೋಕೋ ಪಯೋಗಿ ಇಲಾಖೆ ವತಿಯಿಂದ 25 ಕೋ. ರೂ. ವೆಚ್ಚದಲ್ಲಿ 15 ಕಿ. ಮೀ. ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸಂಪೂರ್ಣ ಗುಣಮಟ್ಟದ ವ್ಯವಸ್ಥಿತ ರಸ್ತೆ ನಿರ್ಮಾಣಗೊಳ್ಳಬೇಕು. ಉದ್ಯಾವರ-ಅಲೆವೂರು- ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿಗೊಳಿಸುವ ಬಗ್ಗೆ ಉದಯವಾಣಿ ಸುದಿನ ನಿರಂತರ ವರದಿಗೆ ಸ್ಪಂದನೆ ದೊರೆತಿದೆ.
– ಪವನ್ ಆಚಾರ್ಯ, ಮರ್ಣೆ ನಿವಾಸಿ