ಉಡುಪಿ: ಲೋಕಸಭಾ ಚುನಾವಣೆ ನಿಮಿತ್ತ ಉದ್ಯಾವರದ ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ ನಗದು ಸಾಗಾಟ ಮಾಡುತ್ತಿದ್ದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತ್ಯೇಕ ಕಾರುಗಳಲ್ಲಿ ತಲಾ 3.5 ಲ.ರೂ.ಗಳಂತೆ ಒಟ್ಟು 7 ಲ.ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಕಾರು ಧರ್ಮಸ್ಥಳ ಮಾರ್ಗವಾಗಿ ಉಡುಪಿಯತ್ತ ಬರುತ್ತಿತ್ತು. ಮತ್ತೂಂದು ಕಾರು ಮಂಗಳೂರಿನಿಂದ ಉಡುಪಿಯತ್ತ ಬರುತ್ತಿತ್ತು. ಸೂಕ್ತ ದಾಖಲಾತಿ ಇಲ್ಲದ ಕಾರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗದು, ಮದ್ಯ ವಶ
ಮಂಗಳೂರು: ಜಿಲ್ಲೆಯಲ್ಲಿ ಮಾ.17ರಿಂದೀಚೆಗೆ ಫ್ಲೈಯಿಂಗ್ ಸ್ಕ್ವಾಡ್‌ಗಳು 4,16,000 ರೂ. ಹಾಗೂ ಸ್ಟಾಟಿಕ್ ಸರ್ವೇಲೆನ್ಸ್ ಟೀಂಗಳು 84,400 ರೂ. ನಗದು ಮೊತ್ತವನ್ನು ವಶಪಡಿಸಿಕೊಂಡಿವೆ.
ಜಿಲ್ಲಾ ಚುನಾವಣಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಅಬಕಾರಿ ಇಲಾಖೆಯವರು 4,79,590 ರೂ. ಮೌಲ್ಯದ 877.31 ಲೀಟರ್ ಮದ್ಯ, ಪೊಲೀಸರು 11,401 ರೂ. ಮೌಲ್ಯದ 23.94 ಲೀಟರ್ ಮದ್ಯ ಸೇರಿದಂತೆ ಒಟ್ಟು 4,90,991 ರೂ.ಮೌಲ್ಯದ 901.25 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.