Advertisement
ಗ್ರಾಮಸ್ಥರು ಗೋತಗಿ ಗ್ರಾಮಕ್ಕೆ ನಡೆದುಕೊಂಡು ಹೋಗಿ ಪಡಿತರ ಧಾನ್ಯ ತರುವಂತಹ ಪರಿಸ್ಥಿತಿ ಹಲವು ವರ್ಷಗಳಿಂದ ಇದೆ. ಇವರಿಗೆ ಗೋತಗಿ ಗ್ರಾಮಕ್ಕೆ ಹೋಗಿ ಬರಲು ಸರಿಯಾದ ಸಾರಿಗೆ ಸೌಲಭ್ಯ ಇಲ್ಲ.
Related Articles
Advertisement
ಹಿನ್ನೆಲೆ: ಎರಡು ಗ್ರಾಮಗಳಲ್ಲಿ ಬಡ ಕೃಷಿ, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಬದುಕಿಗೆ ಕೂಲಿಯನ್ನೇ ಅವಲಂಬಿಸಿದವರು. ಇವರ ಪ್ರತಿ ತಿಂಗಳು ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ದಿನವೆಲ್ಲ ಕಾಯಬೇಕಾಗಿತ್ತು.
ಪಡಿತರ ರೇಷನ್ ತರಲು ಹೋಗಬೇಕಾದರೆ ಮನೆಯಲ್ಲಿ ವೃದ್ಧರು, ಮಹಿಳೆಯರು, ಮಕ್ಕಳನ್ನು ಬಿಟ್ಟು ದೂರದ ಊರಿಗೆ ಹೋಗಿ ಪಡಿತರ ರೇಷನ್ ತರುವ ಪರಿಸ್ಥಿತಿ ಇವರದಾಗಿತ್ತು.
ಅದರೊಂದಿಗೆ ಗೋತಗಿ ಗ್ರಾಮಕ್ಕೆ ಹೋಗಿ ಬರಲು ಸರಿಯಾದ ವಾಹನದ ವ್ಯವಸ್ಥೆಯೂ ಇಲ್ಲ. ಕೆಲವರು ಬೈಕ್‌ಗಳಲ್ಲಿ ಪಡಿತರ ಧಾನ್ಯಗಳನ್ನು ತಂದರೆ, ಇನ್ನೂ ಕೆಲವರು ನಡೆದುಕೊಂಡು ಹೋಗಿ ಧಾನ್ಯವನ್ನು ತರಬೇಕಾದ ಪರಿಸ್ಥಿತಿ.
ಈ ತೋನಸಿಹಾಳ ತಾಂಡ ಮತ್ತು ಗ್ರಾಮದ ಪಡಿತರ ಕಾರ್ಡ್ ಗಳನ್ನು ಗೋತಗಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜೋಡಿಸಲಾದ ಕಾರಣ ಇಲ್ಲಿನ ಗ್ರಾಮಸ್ಥರು ಗೋತಗಿ ಗ್ರಾಮಕ್ಕೆ ಹೋಗಿ ಬರುವ ಸ್ಥಿತಿ ಇತ್ತು. ಸದ್ಯ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಆರಂಭವಾಗಿರುವುದು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ.
ತೋನಸಿಹಾಳ ತಾಂಡ ಮಹಿಳೆ ಲಕ್ಷ್ಮೀ ರಾಠೋಡ ಮಾತನಾಡಿ, ಪ್ರತಿ ತಿಂಗಳ ಪಡಿತರ ಧಾನ್ಯ ತರಲು ನಾವು ಕೂಲಿ ಕೆಲಸ ಬಿಟ್ಟು ಹೋಗಬೇಕಿತ್ತು. ಆದರೆ ಇದೀಗ ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಆರಂಭವಾಗಿರುವುದು ನಮಗೆ ಅನುಕೂಲವಾಗಿದೆ ಎಂದರು.
ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯ ಉಪಕೇಂದ್ರ ಆರಂಭವಾಗಲು ಗ್ರಾಪಂ ಅದ್ಯಕ್ಷ ಶೇಖಪ್ಪ ಸಾಂತಪ್ಪ ಪೂಜಾರಿಯವರ ಪರಿಶ್ರಮ ಮತ್ತು ಉದಯವಾಣಿ ಪತ್ರಿಕೆಯ ಕಳಕಳಿಯಿಂದ ಇದು ಸಾಧ್ಯವಾಗಿದೆ. ನಮ್ಮ ಗ್ರಾಮದಲ್ಲಿ ಇಂದು ನ್ಯಾಯಬೆಲೆ ಅಂಗಡಿ ಆರಂಭವಾಗಿದೆ ಎಂದು ಕೆಲ ಗ್ರಾಮಸ್ಥರು ಹೇಳಿದರು.