Advertisement
ಈಗ ಜಿಲ್ಲೆಯಲ್ಲಿ ಒಟ್ಟು 26 ಜಿ.ಪಂ. ಕ್ಷೇತ್ರಗಳು, 95 ತಾ.ಪಂ. ಕ್ಷೇತ್ರಗಳಿವೆ. ಇನ್ನು ಮುಂದೆ 30 ಜಿ.ಪಂ. ಕ್ಷೇತ್ರಗಳು ಮತ್ತು 86 ತಾ.ಪಂ. ಕ್ಷೇತ್ರಗಳಾಗಲಿವೆ.
ಈಗ ವಿವಿಧ ತಾಲೂಕುಗಳಲ್ಲಿ ಇರುವ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳು: ಉಡುಪಿ ತಾಲೂಕು 3- 13, ಬ್ರಹ್ಮಾವರ ತಾಲೂಕು 4-16, ಕಾಪು ತಾಲೂಕು 4-12, ಕುಂದಾಪುರ ತಾಲೂಕು 7- 23, ಬೈಂದೂರು ತಾಲೂಕು 3- 10, ಕಾರ್ಕಳ ತಾಲೂಕು 4-15, ಹೆಬ್ರಿ ತಾಲೂಕು 1- 6.
Related Articles
Advertisement
ಜನಸಂಖ್ಯೆಗೆ ಅನ್ವಯ ಕ್ಷೇತ್ರಗಳುಈಗಾಗಲೇ ನಡೆದ ಗ್ರಾ.ಪಂ. ಚುನಾವಣೆಯಲ್ಲಿ 400 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರಚಿಸಲಾಗಿತ್ತು. ಈಗ ಜಿ.ಪಂ. ಕ್ಷೇತ್ರವನ್ನು ಪ್ರತಿ 35,000 ಜನಸಂಖ್ಯೆಗೆ ಅನುಗುಣವಾಗಿ ರಚಿಸಲು ಆಯೋಗ ಸೂಚನೆ ನೀಡಿದೆ. ತಾ.ಪಂ. ಕ್ಷೇತ್ರ ರಚನೆಯಲ್ಲಿ ಮಾತ್ರ ಎರಡು ರೀತಿಯ ಸೂತ್ರಗಳಿವೆ. ಒಂದು ತಾಲೂಕಿನಲ್ಲಿ (ತಾ.ಪಂ.) 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ ಅಂತಹ ತಾಲೂಕಿನಲ್ಲಿ 11 ಕ್ಷೇತ್ರಗಳನ್ನು ರಚಿಸಬೇಕು, 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ಅಂತಹ ಕಡೆ 12,500 ಜನಸಂಖ್ಯೆಗೆ ಅನುಗುಣವಾಗಿ ಒಂದು ಕ್ಷೇತ್ರವನ್ನು ರೂಪಿಸಬೇಕು. ಉಡುಪಿ ತಾಲೂಕಿನಲ್ಲಿ 1.28 ಲಕ್ಷ, ಬೈಂದೂರಿನಲ್ಲಿ 1 ಲಕ್ಷ, ಕಾಪುವಿನಲ್ಲಿ 1.13 ಲಕ್ಷ, ಬ್ರಹ್ಮಾವರದಲ್ಲಿ 1.5 ಲಕ್ಷ, ಕುಂದಾಪುರದಲ್ಲಿ 2.3 ಲಕ್ಷ, ಕಾರ್ಕಳದಲ್ಲಿ 1.5 ಲಕ್ಷ, ಹೆಬ್ರಿಯಲ್ಲಿ 46,000 ಜನಸಂಖ್ಯೆ ಇದೆ. ಹೀಗಾಗಿ ಹೆಬ್ರಿ ತಾಲೂಕಿನಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಾರಣ 11 ತಾ.ಪಂ. ಕ್ಷೇತ್ರಗಳು ರಚನೆಯಾಗಲಿವೆ. ಉಳಿದ ಕಡೆ 12,500 ಜನಸಂಖ್ಯೆಗೆ ಒಂದು ಕ್ಷೇತ್ರ ರಚನೆಯಾಗಲಿದೆ. ಹೆಬ್ರಿಯಲ್ಲಿ 35,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಕಾರಣ ಎರಡು ಜಿ.ಪಂ. ಕ್ಷೇತ್ರಗಳು ಸಿಗಲಿವೆ. ಇಲ್ಲಿ ತಾಲೂಕುವಾರು ಜನಸಂಖ್ಯೆ ನಗರ ಪ್ರದೇಶವನ್ನು ಹೊರತುಪಡಿಸಿ ಗ್ರಾಮಾಂತರದ ಜನಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿ ಅತಿ ದೊಡ್ಡ ತಾಲೂಕಾಗಿ ಕುಂದಾಪುರ ಇರಲಿದೆ. ಕುಂದಾಪುರ, ಬೈಂದೂರು ತಾಲೂಕುಗಳಿಗೆ ಹಿಂದೆ ಇದ್ದಷ್ಟೇ ಜಿ.ಪಂ. ಕ್ಷೇತ್ರಗಳು ಸಿಗಲಿವೆ, ಆದರೆ ತಾ.ಪಂ. ಕ್ಷೇತ್ರಗಳು ಕಡಿಮೆಯಾಗಲಿವೆ. ಹೆಬ್ರಿಯಲ್ಲಿ ಮಾತ್ರ ಜಿ.ಪಂ. ಮತ್ತು ತಾ.ಪಂ. ಎರಡರ ಸಂಖ್ಯೆಯೂ ಹೆಚ್ಚಳವಾಗಿದೆ. ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದಲ್ಲಿ ತಲಾ ಒಂದು ಜಿ.ಪಂ. ಕ್ಷೇತ್ರ ಹೆಚ್ಚಿಗೆಯಾಗಲಿದ್ದು ತಾ.ಪಂ. ಕ್ಷೇತ್ರ ಕಡಿಮೆಯಾಗಲಿವೆ. ಕ್ಷೇತ್ರ ಪುನರ್ವಿಂಗಡಣೆೆ
ತಾಲೂಕುಗಳು ಹೊಸದಾಗಿ ರಚನೆ ಯಾದಲ್ಲಿ ಹಿಂದಿದ್ದ ಜಿ.ಪಂ. ಕ್ಷೇತ್ರಗಳ ಗ್ರಾಮಗಳು ಎರಡು ತಾಲೂಕುಗಳಲ್ಲಿ ಹಂಚಿಹೋಗಿವೆ. ಹೀಗಾಗಿ ಆಯಾ ತಾಲೂಕುಗಳ ಗ್ರಾಮಗಳನ್ನು ಮಾತ್ರ ಆಯಾ ತಾಲೂಕುಗಳ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಲ್ಲಿ ಹಂಚಿಹಾಕಲಿದ್ದಾರೆ. ಬೈಂದೂರಿನಲ್ಲಿ ಪ.ಪಂ. ರಚನೆಯಾದ ಕಾರಣ ಅಲ್ಲಿಯೂ ಕ್ಷೇತ್ರ ರಚನೆಯಲ್ಲಿ ಗ್ರಾಮಗಳು ವ್ಯತ್ಯಾಸವಾಗಲಿವೆೆ.