Advertisement

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

06:09 PM Nov 15, 2024 | Team Udayavani |

ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಉಡುಪಿ ಘಟಕದ ಮಹಿಳಾ ವಿಭಾಗದ ಆರಂಭ, ಹಾಗೂ ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಶತಚಂಡಿಕಯಾಗ, ಬ್ರಹ್ಮ ಮಂಡಲ ಸೇವೆಯ ಆಮಂತ್ರಣ ಪತ್ರಿಕೆಯನ್ನು ಬೈಲೂರು ಮಹಿಷ ಮರ್ದಿನಿ ದೇವಾಲಯದ ಸನ್ನಿಧಿಯಲ್ಲಿ ಹಾಕಲ್ಪಟ್ಟ ಶ್ರೀ ಪಾವಂಜೆ ಮೇಳದ ಪಂಚಮ ವರ್ಷದ ಯಾನದ ರಂಗಸ್ಥಳದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.

Advertisement

ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿ , ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಘಟಕದ ಗೌರವ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ತೋಟದಮನೆ ದಿವಾಕರ್ ಶೆಟ್ಟಿ, ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಮಹಿಳಾ ವಿಭಾಗದ ನೂತನ ಅಧ್ಯಕ್ಷೆ ನಿರೂಪಮ ಪ್ರಸಾದ್ ಶೆಟ್ಟಿ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಮುದ್ದಣ್ಣ ಶೆಟ್ಟಿ, ನಾರಾಯಣ ದಾಸ್, ಉಡುಪ, ರಮೇಶ್ ಶೆಟ್ಟಿ ಕಳತ್ತೂರು, ಸುದರ್ಶನ ಸೇರಿಗಾರ್, ಪವಿತ್ರ ವಾಣಿ ಶ್ರೀನಿವಾಸ ಆಚಾರ್ಯ, ಜಯರಾಮ ಆಚಾರ್ಯ, ರಾಜಶೇಖರ ಭಟ್, ಸುಭಾಷ್ ಭಂಡಾರಿ, ಸುರೇಶ್ ಶೆಟ್ಟಿ, ಮೋಹನ್ ಆಚಾರ್ಯ, ಅರುಣ ಶೆಟ್ಟಿಗಾರ್, ಜಿ.ಪ್ರೇಮನಾಥ, ಪ್ರವೀಣ್ ಕುಮಾರ್, ದುರ್ಗಾ ಪ್ರಸಾದ್,ಭಾರತಿ ಜಯರಾಮ್ ಆಚಾರ್ಯ, ಹರೀಶ್ ಸುವರ್ಣ, ಶಾಂತಾ ಸೇರಿಗಾರ್, ಪವನ್ ಕಿರಣ್ ಕೆರೆ, ಎಂ.ಎಲ್ ಸಾಮಗ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತೆಂಕು ಬೆಡಗಿನ ಹವ್ಯಾಸಿ ಯಕ್ಷಗಾನ ಕಲಾವಿದೆ ವಿಂಧ್ಯಾ ಆಚಾರ್ಯ, ಯುವ ಭಾಗವತೆ ಸಿಂಚನ ಮೂಡು ಕೋಡಿ ಯವರಿಗೆ ಯಕ್ಷಧ್ರುವ ‘ಯಕ್ಷ ಪ್ರತಿಭಾ ಚೇತನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿಂತಕ ದಾಮೋದರ ಶರ್ಮ ನಿರೂಪಿಸಿ ಕಾರ್ಯದರ್ಶಿ ಡಾ.ವಿಟ್ಲ ಹರೀಶ್ ಜೋಶಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next