Advertisement

Udupi: ಪಾರ್ಟ್‌ ಟೈಮ್ ಜಾಬ್‌ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

06:37 PM Nov 13, 2024 | Team Udayavani |

ಉಡುಪಿ: ಪಾರ್ಟ್‌ ಟೈಮ್‌ ಉದ್ಯೋಗ ಬಗ್ಗೆ ಆನ್‌ಲೈನ್‌ ಲಿಂಕ್‌ ಕ್ಲಿಕ್ಕಿಸಿ ಮಹಿಳೆಯೊಬ್ಬರು ಹಣ ಕಳೆದುಕೊಂಡ ಘಟನೆ ನಡೆದಿದೆ.

Advertisement

ಅರ್ಚನಾ (25) ಅವರು ಪಾರ್ಟ್‌ಟೈಮ್‌ ಜಾಬ್‌ ಹುಡುಕಾಟದಲ್ಲಿದ್ದರು. ಈ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಸಿಕ್ಕಿದ ಇನ್‌ಸ್ಟ್ರಾಗ್ರಾಮ್‌ನಲ್ಲಿ ಪಾರ್ಟ್‌ಟೈಮ್‌ ಜಾಬ್‌ ಬಗ್ಗೆ ಲಿಂಕ್‌ ಒಂದನ್ನು ಕ್ಲಿಕ್‌ ಮಾಡಿದರು. ಆಗ ಅವರಿಗೆ ಪಾರ್ಟ್‌ಟೈಮ್‌ ಜಾಬ್‌ ಬಗ್ಗೆ ವಾಟ್ಸಾಪ್‌ ಸಂದೇಶ ಬಂದಿದೆ.

ಅಮೆಜಾನ್‌ ಪ್ರಶರ್ ಜಾಬ್‌ ಇನ್‌ ಇಂಡಿಯಾನಲ್ಲಿ ಟಾಸ್ಕ್ ನಡೆಸಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಲಾಗಿತ್ತು.

ಅಪರಿಚಿತ ವ್ಯಕ್ತಿ ಯುಪಿಐ ಐಡಿಗೆ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದು, ಇದನ್ನು ನಂಬಿದ ಮಹಿಳೆ ಅಪರಿಚಿತರು ಸೂಚಿಸಿದ ವಿವಿಧ ಯುಪಿಐ ಐಡಿಗೆ ಹಂತಹಂತವಾಗಿ ಒಟ್ಟು 1,94,529 ರೂ. ವರ್ಗಾಯಿಸಿ ಮೋಸ ಹೋಗಿದ್ದಾರೆ ಎಂದು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next