ಉಡುಪಿ: ಶ್ರೀ ಕೃಷ್ಣಮಠ, ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆಯ ಅಕ್ಷತೆ ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ರವಿವಾರ ಸ್ವಾಗತಿಸಿದರು.
ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆಯನ್ನು ಪ್ರತಿ ಗ್ರಾಮದ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪವಿತ್ರ ಮಂತ್ರಾಕ್ಷತೆಯ ಕಲಶವನ್ನು ಶ್ರೀಕೃಷ್ಣಮಠದ ರಥಬೀದಿ ಮೂಲಕ ತಂದು, ಮಠದ ಪ್ರವೇಶ ದ್ವಾರದಲ್ಲಿ ಒಳಗೆ ಕೊಂಡೊಯ್ದು, ಶ್ರೀಕೃಷ್ಣ ದೇವರ ಎದುರು ಇಟ್ಟು ಶ್ರೀಪಾದರು ಸ್ವಾಗತಿಸಿದರು.
ಆರೆಸ್ಸೆಸ್‌ನ ಹಿರಿಯರಾದ ಶಂಭು ಶೆಟ್ಟಿ, ವಿಹಿಂಪ ಪ್ರಾಂತ ಅರ್ಚಕ ಪುರೋಹಿತ ಪ್ರಮುಖ್ ಪ್ರೇಮಾನಂದ ಶೆಟ್ಟಿ, ಬಜರಂಗದಳದ ಸುನಿಲ್ ಕೆ.ಆರ್., ಚೇತನ್ ಪೆರಾಲ್ಕೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಸೇವಾ ಪ್ರಮುಖ್ ವಿಖ್ಯಾತ್ ಭಟ್, ಪ್ರಾಣ ಪ್ರತಿಷ್ಠಾ ಅಭಿಯಾನದ ಜಿಲ್ಲಾ ಸಂಯೋಜಕ ಸುರೇಂದ್ರ ಮಾರ್ಕೊಡ್, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಪ್ರಮುಖರಾದ ವರದರಾಜ್ ಭಟ್, ವಿಷ್ಣು ಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.