Advertisement

ಉಡುಪಿ: ಸಮರೋಪಾದಿ ನೀರು ಪೂರೈಕೆ ಕಾರ್ಯಾಚರಣೆ

07:58 AM May 11, 2019 | Team Udayavani |

ಉಡುಪಿ: ನಗರದಲ್ಲಿ ನೀರು ಪೂರೈಕೆ ಚುರುಕುಗೊಂಡಿದೆ. ಅಧಿಕಾರಿಗಳು- ಜನ ಪ್ರತಿನಿಧಿಗಳ ಸಭೆ; ಡ್ರೆಜ್ಜಿಂಗ್‌, ಹಳ್ಳಗಳಿಂದ ಬಜೆ ಡ್ಯಾಂಗೆ ನೀರು ಹಾಯಿಸುವಿಕೆ, ಶ್ರಮದಾನದಿಂದ ಹರಿವಿನ ತಡೆ ತೆರವು, ಟ್ಯಾಂಕರ್‌ ನೀರು ಪೂರೈಕೆ ಮುಂದುವರಿದಿದೆ.

Advertisement

ಬಜೆಯಿಂದ ಶುಕ್ರವಾರ ಸುಮಾರು 10 ಎಂಎಲ್ಡಿ ಎತ್ತಲಾಗಿದೆ. ಮಂಗಳವಾರವೇ ಹಳ್ಳಗಳ ನೀರು ಹಾಯಿಸುವಿಕೆ ಆರಂಭಗೊಂಡಿದ್ದು, ರಾತ್ರಿ ಡ್ಯಾಂಗೆ ನೀರು ತುಂಬಿಸಿ ಹಗಲು ಪಂಪ್‌ ಮಾಡಲಾಗುತ್ತಿದೆ. ಸ್ವರ್ಣಾ ನದಿ ಪಾತ್ರದ ಹೂಳು, ಕಲ್ಲುಗಳನ್ನು ಹಿಟಾಚಿ ಬ್ರೇಕರ್‌ನ್ನು ತರಿಸಿ ತೆಗೆಯ ಲಾಯಿತು. ಶನಿವಾರದಿಂದ ಬಂಡೆಗಳನ್ನು ಒಡೆಯಲಾಗುತ್ತದೆ.

ಟ್ಯಾಂಕರ್‌ ನೀರು ಆರಂಭ
ಡಿಸಿ ಸೂಚನೆಯಂತೆ 5 ಟ್ಯಾಂಕರ್‌ ಮೂಲಕ ವಿವಿಧೆಡೆಗೆ
ನೀರು ಪೂರೈಸಲಾಗಿದ್ದು, ಶನಿವಾರ ಮತ್ತೆ 10 ಟ್ಯಾಂಕರ್‌ಗಳಿಂದ ಒದಗಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರಸಭೆ ಸದಸ್ಯರ ಮುತುವರ್ಜಿ
ಹಲವು ವಾರ್ಡ್‌ಗಳ ಸದಸ್ಯರು ತಮ್ಮದೇ ಖರ್ಚಿನಲ್ಲಿ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿದ್ದಾರೆ. ಶಾಸಕ ರಘುಪತಿ ಭಟ್ 8 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದ್ದಾರೆ. ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಮುಂದುವರಿದಿದೆ.

ಟ್ಯಾಂಕರ್‌ ವಶ
ಖಾಸಗಿ ಟ್ಯಾಂಕರ್‌ಗಳನ್ನು ಸ್ವಾಧೀನಪಡಿಸುವಂತೆ ಆರ್‌ಟಿಒಗೆ ನೀಡಿದ ಸೂಚನೆಯಂತೆ 15ರಷ್ಟು ಟ್ಯಾಂಕರ್‌ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ನಗರಸಭೆ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.

Advertisement

ರೇಷನಿಂಗ್‌ ಮುಂದುವರಿಕೆ
ರೇಷನಿಂಗ್‌ ಮುಂದುವರಿಯಲಿದೆ. ತೀವ್ರ ಸಮಸ್ಯೆ ಇರುವಲ್ಲಿಗೆ ಟ್ಯಾಂಕರ್‌ ನೀರು ಪೂರೈಸಲಾಗು ತ್ತಿದೆ. ನೀರು ಪೂರೈಕೆ -ನಿರ್ವಹಣೆ ಮೇಲೆ ನಿರಂತರ ನಿಗಾ ಇರಿಸಿದ್ದೇನೆ ಎಂದು ಡಿಸಿ ಹೆಪ್ಸಿಬಾ ಹೇಳಿದ್ದಾರೆ.

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ
ಶೀಘ್ರ ಮಳೆ ಬರಲಿ ಎಂದು ಶುಕ್ರವಾರ ಸಂಜೆ ಶ್ರೀಕೃಷ್ಣ ಮಠ, ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪರ್ಯಾಯ ಶ್ರೀ ಪಲಿಮಾರು ಶ್ರೀಗಳು, ಅದಮಾರು ಕಿರಿಯ ಯತಿ, ಶಾಸಕ ರಘುಪತಿ ಭಟ್ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next