Advertisement
ಎಪ್ರಿಲ್ 29ರಿಂದ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಬರಿದಾಗಿದ್ದು, ಶೀರೂರು, ಮಾಣೈ ಮಠದ ಗುಂಡಿ, ಭಂಡಾರಿಬೆಟ್ಟು, ಪುತ್ತಿಗೆ ಮಠದ ಪ್ರದೇಶದಲ್ಲಿ ಸಂಗ್ರಹವಿರುವ ನೀರನ್ನು ಬೋಟ್ ಪಂಪ್‌ಗ್ಳ ಮೂಲಕ ಪಂಪಿಂಗ್ ಮಾಡಿ ಜಲಾಶಯಕ್ಕೆ ನೀರು ಹಾಯಿಸಿ ಶುದ್ಧೀಕರಣಗೊಳಿಸಿ ದಿನ ಬಿಟ್ಟು ದಿನ ಮೇ 23ರ ತನಕ ನೀಡಲಾಗುತ್ತಿದೆ. ಆದರೆ ಈಗ ನೀರಿನ ಆ ಹೊಂಡಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆ ಇರುವುದರಿಂದ 4 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದು ಅನಿವಾರ್ಯವಾಗಿದೆ.
ಮಳೆಗಾಲ ಪ್ರಾರಂಭವಾದರೆ ಕುಡಿಯುವ ನೀರನ್ನು ಹಿಂದಿನಂತೆ ಪ್ರತಿದಿನ ಪೂರೈಸಲಾಗುವುದು. ನೀರು ಪೂರೈಸಲು ನಿಗದಿಪಡಿಸಿದ ದಿನ ಸಂಬಂಧಪಟ್ಟ ವಾರ್ಡಿನಲ್ಲಿ ನೀರು ಬಾರದ ಪ್ರದೇಶದಲ್ಲಿ ಆ ದಿನ ಮಾತ್ರ ಆ ಭಾಗದಲ್ಲಿ ಟ್ಯಾಂಕರ್ ನೀರನ್ನು ಪೂರೈಸಲಾಗುವುದು. ಕುಡಿಯುವ ನೀರಿಗಾಗಿ ಬಹುಮಹಡಿ ಕಟ್ಟಡಗಳನ್ನು ಹೊರತುಪಡಿಸಿ ಗೃಹಬಳಕೆಯವರು ಮಾತ್ರ ದೂರವಾಣಿ ಸಂಖ್ಯೆ 8496989248, 8496989166, 8496989184, 8496989122ನ್ನು ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್ (8496989759), ಪರಿಸರ ಅಭಿಯಂತರ ಬಿ. ರಾಘವೇಂದ್ರ (9448507244) ಅವರನ್ನು ಸಂಪರ್ಕಿಸಬಹುದು. ಬಜೆ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿರುವುದರಿಂದ ನಾಗರಿಕರು ನೀರನ್ನು ಮಿತಧಿವಾಗಿ ಬಳಸಿ ಸಹಕರಿಸಬೇಕಾಗಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಪೌರಾಯುಕ್ತ ಡಿ. ಮಂಜುಧಿನಾಥಯ್ಯ ಪ್ರಕಟನೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Related Articles
ಮೇ 24, ಮೇ 28, ಜೂ. 1 ಹಾಗೂ ಜೂ. 5ರಂದು ಕೊಳ, ವಡಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು, ಕಲ್ಮಾಡಿ, ಕಸ್ತೂರ್ಬಾನಗರ, ಸಗ್ರಿ, ಮೂಡುಪೆರಂಪಳ್ಳಿ, ಇಂದಿರಾನಗರ, ಬಡಗುಧಿಬೆಟ್ಟು, ಇಂದ್ರಾಳಿ, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಅಜ್ಜರಕಾಡು, ಕಿನ್ನಿಮೂಲ್ಕಿ, ಬೈಲೂರು, ಒಳಕಾಡು, ತೆಂಕಪೇಟೆ, ಕುಂಜಿಬೆಟ್ಟು ವಾರ್ಡುಗಳಿಗೆ ಮೊದಲ ಹಂತದಲ್ಲಿ ನೀರು ಪೂರೈಸಲಾಗುವುದು.
Advertisement
ಮೇ 24ರಂದು ಸಂಜೆ 4 ಗಂಟೆ ಅನಂತರ ನೀರು ಪೂರೈಸಲಿದ್ದು, ಬಾಕಿ ದಿನಗಳಲ್ಲಿ ನೀರಿನ ಸಂಗ್ರಹ ನೋಡಿ ಸಮಯ ನಿರ್ಧರಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಹಂತದಲ್ಲಿ ಮೇ 27, ಮೇ 31, ಜೂ. 4 ಹಾಗೂ ಜೂ. 8ರಂದು ಸರಳೇಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ ವಾರ್ಡುಗಳಿಗೆ ನೀರು ಪೂರೈಕೆಯಾಗಲಿದೆ.