Advertisement

Udupi Video Case: ಸಮಸ್ತ ಮಾನವ ಕುಲ ತಲೆ ತಗ್ಗಿಸುವಂತಹ ಕೃತ್ಯ: ಪ್ರಮೋದ್ ಮಧ್ವರಾಜ್

08:48 PM Jul 28, 2023 | Team Udayavani |

ಉಡುಪಿ: ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ರೆಕಾರ್ಡ್ ಮಾಡಿರುವುದು ಸಮಸ್ತ ಮಾನವ ಕುಲ ತಲೆ ತಗ್ಗಿಸುವಂತಹ ಕೃತ್ಯ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ತಿಳಿಸಿದರು.

Advertisement

ಉಡುಪಿಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಘಟನೆಯನ್ನು ಸಣ್ಣ ವಿಚಾರ ಎಂದು ಸರಕಾರ ಮತ್ತು ಪೊಲೀಸ್ ಇಲಾಖೆ ತಿರಸ್ಕರಿಸಿರುವುದು ಖಂಡನೀಯ, ಪೊಲೀಸ್ ತನಿಖೆಯ ಬಗ್ಗೆ ಸಂಶಯ ಇದೆ. ಘಟನೆ ಹೆಣ್ಣು ಮಕ್ಕಳ ಮಾನ, ಮರ್ಯಾದೆಗೆ ಧಕ್ಕೆ ತಂದಿದೆ ಎಂದರು.

ಗೃಹಮಂತ್ರಿಗಳು ಗಂಭೀರ ವಿಚಾರವನ್ನು ಕ್ಷುಲ್ಲಕವಾಗಿ ಪರಿಗಣಿಸಿದ್ದಾರೆ. ಇದಕ್ಕೆ ಅನೇಕ ಆಯಾಮ ಇದ್ದು, ಯಾರು,‌ ಎಷ್ಟು ಸಮಯದಿಂದ ವೀಡಿಯೋವನ್ನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಪ್ರಾರಂಭದಲ್ಲಿ ತನಿಖೆಯನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಯತ್ನಿಸಲಾಗಿದೆ ಎಂದರು.

ಕಾಲೇಜುಗಳಲ್ಲಿ ಯುವತಿಯರು ಶೌಚಾಲಯಕ್ಕೆ ಹೋಗಲು ಹೆದರುತ್ತಾರೆ, ಸಮಾಜದಲ್ಲಿ ಭಯ ಹುಟ್ಟಿಸುವ ವ್ಯವಸ್ಥೆ ನಡೆದಿದೆ. ಪ್ರಕರಣದ ಕುರಿತಾಗಿ ಇದುವರೆಗೆ ಯಾವುದೇ ವಿಚಾರಣೆ ಆಗಿಲ್ಲ, ಇದು ಸರಕಾರದ ವೈಫಲ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next