Advertisement

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

12:57 PM Oct 06, 2024 | Team Udayavani |

ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಸರಸ್ವತಿ ಮಂದಿರ ಪ್ರೌಢ ಶಾಲೆಯ ಮೈದಾನದಲ್ಲಿ ಅ.6 ರಂದು ಪ್ರಥಮ ಬಾರಿಗೆ ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ ನಡೆಯಿತು.

Advertisement

ಕುಸ್ತಿ ಪಂದ್ಯಾಟವನ್ನು ಉದ್ಘಾಟಿಸಿದ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ಕುಸ್ತಿ ಅತ್ಯಂತ ಪುರಾತನ ಕ್ರೀಡೆಯಾಗಿದೆ. ರಾಜ, ಮಹಾರಾಜರುಗಳ ಕಾಲದಲ್ಲಿ ನಡೆಯುತ್ತಿದ್ದ ಕುಸ್ತಿಯನ್ನು ಭವಿಷ್ಯಕ್ಕೂ ಉಳಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಥಮ ಬಾರಿಗೆ‌ ಸ್ಪರ್ಧೆ ನಡೆಯುತ್ತಿದೆ. ಸರಕಾರದ ನೆರವಿನೊಂದಿಗೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ವಿಜ್ರಂಭಣೆಯಿಂದ ಅಯೋಜಿಸಲಾಗುವುದು ಎಂದರು.

ದ.ಕ. ನೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕುಸ್ತಿ ಫೆಡರೇಷನ್ ಅಧ್ಯಕ್ಷ ದಿಲ್ ರಾಜ್ ಆಳ್ವ, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಗೋವರ್ಧನ ಬಂಗೇರ, ಮೋಹನ್ ಬೇಂಗ್ರೆ, ವಾಸುದೇವ ಸಾಲ್ಯಾನ್, ಚೇತನ್ ಬೇಂಗ್ರೆ, ಶರಣ್ ಮಟ್ಟು, ದಿನೇಶ್ ಎರ್ಮಾಳು, ಉಷಾ ರಾಣಿ, ಸುಗುಣಾ ಕರ್ಕೇರ, ಪುಂಡಲೀಕ ಕರ್ಕೇರ ಹೊಸಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಬಾಲಕರು ಮತ್ತು ಪುರುಷರ ವಿಭಾಗದಲ್ಲಿ 30-35 ಕೆಜಿ, 42 ಕೆಜಿ, 46 ಕೆಜಿ, 50 ಕೆಜಿ, 57 ಕೆಜಿ, 61 ಕೆಜಿ, 65, ಕೆಜಿ 86 + ಕೆಜಿ ವಿಭಾಗದ ಸ್ವರ್ಧೆ ನಡೆಯಿತು. ಬಾಲಕಿಯರು ಮತ್ತು ಮಹಿಳೆಯರ ವಿಭಾಗದಲ್ಲಿ 40 ಕೆಜಿ, 43 ಕೆಜಿ, 46 ಕೆಜಿ, 49 ಕೆಜಿ, 53 ಕೆಜಿ, 57 ಕೆಜಿ, 62,   ಕೆಜಿ ಮತ್ತು 65-69 ಕೆಜಿ ವಿಭಾಗದ ಸ್ಪರ್ಧೆ ನಡೆಯಿತು.

Advertisement

ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುರುಷರ ವಿಭಾಗದಲ್ಲಿ ಉಡುಪಿ ಉಚ್ಚಿಲ ದಸರಾ ಕೇಸರಿ 2024,  ಉಡುಪಿ ಉಚ್ಚಿಲ ದಸರಾ ಕುಮಾರ್ 2024, ಮಹಿಳೆಯರ ವಿಭಾಗದಲ್ಲಿ ಉಚ್ಚಿಲ ದಸರಾ ಕುವರಿ 2024 ಬಿರುದಿನೊಂದಿಗೆ ಬೆಳ್ಳಿ ಗದೆ ಪ್ರಶಸ್ತಿ ಹಾಗೂ ವಿವಿಧ ತೂಕದ ವಿಭಾಗದ ಸ್ಪರ್ಧೆಯ ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು. 10 ಕೆಟಗರಿಯಲ್ಲಿ ನಡೆದ ಸ್ಪರ್ಧೆಯಲ್ಲಿ 242 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು‌.

ವೀರ ಮಾರುತಿ ವ್ಯಾಯಾಮ‌ ಶಾಲೆ ಮಂಗಳೂರು ಬೇಂಗ್ರೆ, ಬ್ರದರ್ಸ್ ಯುವಕ ಮಂಡಲ ಉಳ್ಳಾಲ, ಮೋಹನ್ ಬೇಂಗ್ರೆ ಮತ್ತು ಕುಟುಂಬದವರು ಕ್ರಮವಾಗಿ ದಸರಾ ಕೇಸರಿ, ದಸರಾ ಕುಮಾರ್ ಮತ್ತು ದಸರಾ ಕುವರಿ ಪರ್ಯಾಯ ಬೆಳ್ಳಿ ಗದೆಯನ್ನು ಪ್ರಾಯೋಜಿಸಿದ್ದಾರೆ.

ಶಂಕರಪ್ಪ, ಸತೀಶ್ ಬೇಂಗ್ರೆ, ಸಂದೀಪ್ ರಾವ್, ವಿನೋದ್ ಕುಮಾರ್, ಮೋಹನ್ ಬೇಂಗ್ರೆ, ರಾಜು ಪಲ್ಕೆ , ಪ್ರಮೋದ್, ಸ್ವಪ್ನ ತೀರ್ಪುಗಾರರಾಗಿ ಸಹಕರಿಸಿದ್ದರು.

ಕುಸ್ತಿ ಪಂದ್ಯಾಟದ ಸಂಘಟಕರಾದ ವಿಜಯ್ ಸುವರ್ಣ ಕುಳಾಯಿ ಸ್ವಾಗತಿಸಿ, ಪುಂಡಲೀಕ ಹೊಸಬೆಟ್ಟು ವಂದಿಸಿದರು. ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next