Advertisement
ಜನವರಿಯಲ್ಲಿ ರಾಜ್ಯ ಸರಕಾರ ಬಿಡುಗಡೆಗೊಳಿಸಿದ ಕಂದಾಯ ಇಲಾಖೆ ಸೇವೆಗಳ ಅನುಷ್ಠಾನದ ಜಿಲ್ಲೆಗಳ ಸಾಧನೆ ಪಟ್ಟಿಯಲ್ಲಿ ಉಡುಪಿ 100ಕ್ಕೆ 69 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ. 56.5 ಅಂಕ ಪಡೆದಿರುವ ಚಿತ್ರದುರ್ಗ ದ್ವಿತೀಯ 50.9 ಅಂಕ ಪಡೆದಿರುವ ಉತ್ತರ ಕನ್ನಡ ತೃತೀಯ ಸ್ಥಾನದಲ್ಲಿದೆ. ಬಳ್ಳಾರಿ ಕೊನೆಯ ಸ್ಥಾನದಲ್ಲಿದೆ.
15ರಲ್ಲಿ ಜಿಲ್ಲೆಯ 7 ತಾಲೂಕು 238 ತಾಲೂಕುಗಳ ಪೈಕಿ ಟಾಪ್ 15ರ ಪಟ್ಟಿಯಲ್ಲಿ ಜಿಲ್ಲೆಯ 7 ತಾಲೂಕುಗಳು, ಟಾಪ್ 10ರಲ್ಲಿ 5 ತಾಲೂಕುಗಳು ಕಂದಾಯ ಸೇವೆಯಲ್ಲಿ ಉತ್ತಮ ನಿರ್ವಹಣೆ ತೊರಿವೆ. ಮೊದಲ ಸ್ಥಾನ ಉಡುಪಿ, ಎರಡನೇ ಸ್ಥಾನ ಕಾಪು ಮತ್ತು ಮೂರನೇ ಸ್ಥಾನ ಬ್ರಹ್ಮಾವರ ಪಡೆದುಕೊಂಡಿದೆ.
Related Articles
ರೈತರಿಗೆ ಭೂಮಿ ಮ್ಯುಟೇಷನ್, 30 ದಿನದೊಳಗೆ ಭೂಮಿ ಮ್ಯುಟೇಷನ್, ವಸತಿ ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆ, ಎಸಿ ಕೋರ್ಟ್‌ನಲ್ಲಿರುವ ಪ್ರಕರಣ ವಿಲೇವಾರಿ, ಪೈಕಿ ಆರ್‌ಟಿಸಿ, ಸರ್ವೆ, ಪೋಡಿ ಸೇವೆ ಸೇರಿದಂತೆ 10 ವಿವಿಧ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಿದರೆ ರ್‍ಯಾಂಕ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಬಹುದು. ಜಿಲ್ಲೆಯ ಇಲಾಖೆಯ ಈ ಸಾಧನೆಯಿಂದ ಸದ್ಯ ರಾಜ್ಯದ ಗಮನ ಸೆಳೆದಿದೆ. ಮನೆಬಾಗಿಲಿಗೆ ಪಿಂಚಣಿಯನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನ ಕೈಗೊಂಡ ಹಿರಿಮೆಯನ್ನು ಜಿಲ್ಲಾಡಳಿತ ಪಡೆದುಕೊಂಡಿದ್ದು ಬಡವರಿಗೆ ಕಂದಾಯ ಸೇವೆಯನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕೆಲಸದ ಕಡೆಗೂ ಕೂಡ ಜಿಲ್ಲಾಡಳಿತ ಶ್ರಮಿಸುತ್ತಿದೆ.
Advertisement
ಸ್ಥಾನ ಉಳಿಸಿಕೊಂಡು ಉತ್ತಮ ಸೇವೆ ನೀಡುವತ್ತ ಗಮನಜಿಲ್ಲಾಡಳಿತದ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಗೆ ಹೆಚ್ಚು ಗಮನ ಕೊಡವಲ್ಲಿ ಮುತುವರ್ಜಿ ವಹಿಸಲಾಗಿದೆ. ಆರಂಭದಿಂದಲೂ ಕಂದಾಯ ಇಲಾಖೆಯ ಲೋಪಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳಿದ್ದವು. ಆರ್‌ಟಿಸಿ ಸಹಿತ ಹೀಗೆ ಯಾವುದೇ ಕೆಲಸಕ್ಕೆ ಅಲೆಯಬೇಕಾದ ಪರಿಸ್ಥಿತಿ. ಇದನ್ನು ಅರಿತು ದೃಢ ನಿರ್ಧಾರ ಹಾಗೂ ಸ್ವಂತ ಆಸಕ್ತಿಯಿಂದ ಕೆಲಸ ಕೈಗೊಳ್ಳಲಾಯಿತು. ಪ್ರತಿದಿನ ಜಿಲ್ಲಾಡಳಿತದಲ್ಲಿ ಆಗುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಖುದ್ದಾಗಿ ಪ್ರಗತಿ ಪರಿಶೀಲಿಸಿ ಹಿಂದೆ ಬಿದ್ದಿರುವ ಕೆಲಸಗಳನ್ನು ಸಂಬಂಧ ಪಟ್ಟವರಿಗೆ ಕರೆ ಮಾಡಿ ಕೆಲಸದ ವೇಗ ಹೆಚ್ಚಿಸುವ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ತಿಂಗಳಲ್ಲಿ ಪ್ರತಿ 15 ದಿನಕ್ಕೆ ತಹಶೀಲ್ದಾರ್ ಪ್ರಗತಿ ಪರಿಶಿಲನ ಸಭೆ ಮಾಡಲಾಗುವುದು, ಪ್ರತಿ ತಿಂಗಳು ಕಂದಾಯ ಇಲಾಖೆಯ ಸಭೆ ಸೇರಿಸಿ ಚರ್ಚಿ ಕೈಗೊಳ್ಳಾಗುತ್ತದೆ. ಮುಂದಿನ ದಿನಗಳಲ್ಲೂ ನಂಬರ್ ವನ್ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದ್ದೇವೆ. ಎಡಿಸಿ, ಎಸಿ, ತಹಶೀಲ್ದಾರ್, ಪಿಡಿಒ ಎಲ್ಲರ ಸಹಕಾರ ಉತ್ತಮವಾಗಿದೆ.
– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ