Advertisement

Udupi: ಸಂತೆಕಟ್ಟೆಯಲ್ಲಿ ಕಳ್ಳರ ಉಪಟಳ

10:57 PM Jun 26, 2024 | Team Udayavani |

ಉಡುಪಿ: ಸಂತೆಕಟ್ಟೆಯಲ್ಲಿ ಕಳ್ಳತನ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು, ಜೂ.26ರ ಮುಂಜಾನೆಯೂ ಎಟಿಎಂ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಸಂತೆಕಟ್ಟೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಯಾವುದೋ ಆಯುಧದಿಂದ ಎಟಿಎಂನ ಬಾಗಿಲು ಮುರಿದು ಒಳಗೆ ನುಗ್ಗಿ ಅದರಲ್ಲಿದ್ದ ಹಣ ದೋಚಲು ವಿಫ‌ಲ ಯತ್ನ ನಡೆಸಿದ್ದಾರೆ. ಅನಂತರ ಎಟಿಎಂನ ಒಟಿಸಿ ಲಾಕ್‌ ಹಾಗೂ ಸೆನ್ಸಾರ್‌ ಅನ್ನು ಹೊಡೆದು ನಷ್ಟ ಉಂಟು ಮಾಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರದ ಹಿಂದೆಯೂ ಕಳ್ಳತನಕ್ಕೆ ಯತ್ನ
ಸಂತೆಕಟ್ಟೆಯಲ್ಲಿರುವ ಬ್ಯಾಂಕ್‌ ಶಾಖೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಬರೆಯಲಾಗಿದ್ದ ಚೆಕ್‌ ಕಳವು ಮಾಡಿದ ಘಟನೆ ಜೂ.21ರಂದು ಬೆಳಕಿಗೆ ಬಂದಿತ್ತು. ಕಳ್ಳರು ಕಿಟಕಿಯ ಸರಳು ಕತ್ತರಿಸಿ ಒಳ ಪ್ರವೇಶಿಸಿ ಕಚೇರಿಯಲ್ಲಿದ್ದ ಚೆಕ್‌ಅನ್ನು ಕಳವು ಮಾಡಿದ್ದರು. ಸಂತೆಕಟ್ಟೆ ಭಾಗದಲ್ಲಿ ಹಲವಾರು ಅಂಗಡಿ, ಬ್ಯಾಂಕ್‌ಗಳು, ಎಟಿಎಂ, ಹೊಟೇಲ್‌ಗ‌ಳು ಸಹಿತ ವ್ಯವಹಾರ ಮಾಡಿಕೊಂಡಿದ್ದು, ಈ ಭಾಗದಲ್ಲಿ ರಾತ್ರಿ ವೇಳೆ ಪೊಲೀಸ್‌ ವಾಹನ ಇರುತ್ತವೆಯಾದರೂ ಕಳ್ಳತನಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕಿತರಾಗಿದ್ದಾರೆ.

ವರ್ಷದ ಹಿಂದೆಯೂ ಇಲ್ಲಿನ ಬೇಕರಿಯೊಂದರಲ್ಲಿ ಕಳ್ಳತನ ಯತ್ನ ನಡೆದಿದ್ದು, ಗ್ಯಾಂಗ್‌ವೊಂದರ ಕೃತ್ಯ ಎಂದು ಶಂಕಿಸಲಾಗಿತ್ತು. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕಳ್ಳರು ಯಾವ ಭಾಗದಿಂದ ಬಂದು ಎಲ್ಲಿಗೆ ಹೋಗುತ್ತಾರೆ ಎಂಬುದು ಕೂಡ ತಿಳಿಯುತ್ತಿಲ್ಲ. ಕೆಲವು ಅಂಗಡಿಗಳು ಸಿಸಿಟಿವಿ ಅಳವಡಿಕೆ ಮಾಡಿವೆಯಾದರೂ ಅದರ ಕಣ್ತಪ್ಪಿಸಿ ಈ ಕೃತ್ಯ ಎಸಗುತ್ತಿರುವುದು ಪೊಲೀಸರ ತನಿಖೆಗೆ ಹಿನ್ನಡೆಯಾಗುತ್ತಿದೆ. ಆದರೂ ಭಿನ್ನ-ಭಿನ್ನ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next