Advertisement
ಉಡುಪಿಯಿಂದ ಕುಂದಾಪುರಕ್ಕೆ ಸಾಗುವಾಗ ಹೊಸ ರಸ್ತೆಗೆ ಸೇರುವ ಮೊದಲು, ಹೊಸ ರಸ್ತೆ ಕೊನೆಯಾಗುವಲ್ಲಿ ಎರಡು ಕಡೆ ಬೃಹತ್ ಗುಂಡಿಗಳು ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಆಪತ್ತು ಕಟ್ಟಿಟ್ಟ ಬುತ್ತಿ.
ಶಬ್ದದೊಂದಿಗೆ ಟಯರ್, ಡಿಸ್ಕ್ ಸಹಿತ ವಾಹನದ ಸಂಪೂರ್ಣ ಸಸ್‌ಪೆನ್ಶನ್ ವ್ಯವಸ್ಥೆ ಹಾನಿಗೀಡಾಗುತ್ತಿದೆ. ಅಲ್ಲದೆ ದ್ವಿಚಕ್ರ
ವಾಹನ ಸವಾರರು ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಕ್ರಮ ತೆಗೆದುಕೊಳ್ಳದ ರಾ. ಹೆ. ಪ್ರಾಧಿಕಾರ
ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಸವಾರರ ಸುರಕ್ಷತೆ ಬಗ್ಗೆ ಹೆದ್ದಾರಿ ಪ್ರಾಧಿಕಾರ ಮೊದಲು ಕ್ರಮವಹಿಸಬೇಕು. ಆದರೆ ರಸ್ತೆಗಳ ಗುಂಡಿಗಳನ್ನು ತಾತ್ಕಾಲಿಕ ನೆಲೆಯಲ್ಲಾದರೂ ವೆಟ್‌ಮಿಕ್ಸ್ ಹಾಕಿ ವ್ಯವಸ್ಥಿತಗೊಳಿಸಿದಲ್ಲಿ ಸುಗಮ ಸಂಚಾರಕ್ಕೆ
ಅನುಕೂಲವಾಗುತ್ತದೆ. ಇಲ್ಲದಿದ್ದರೆ ಇನ್ನಷ್ಟು ಅಪಘಾತ ಸಂಭವಿಸಿ, ಸುಗಮ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ
ಇದೆ. ಇಷ್ಟೆಲ್ಲಾ ಆದರೂ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು, ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related Articles
ಸಂತೆಕಟ್ಟೆ ಹೊಸ ರಸ್ತೆ ಆರಂಭದಲ್ಲಿ, ಕೊನೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ತಾತ್ಕಲಿಕ ತೇಪೆ ನಡೆಸಲಾಗಿದ್ದು, ಹೆಚ್ಚಿನ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಸವಾರರಿಗೆ ಸಮಸ್ಯೆಯಾಗದಂತೆ ಗುಂಡಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ವ್ಯವಸ್ಥಿತವಾಗಿ ತೇಪೆ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ರಾ. ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
Advertisement