Advertisement
ಉಡುಪಿ ಗೀತಾಂಜಲಿ ರಸ್ತೆಯ ಗೀತಾಂಜಲಿ ಶೋಪರ್ ಸಿಟಿಗೆ ಸ್ಥಳಾಂತರಗೊಂಡಿರುವ “ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನ ವಿಶಾಲ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯುತ್ಕೃಷ್ಟ ಆಭರಣ ವಿನ್ಯಾಸಗಳ ಜತೆಗೆ ತನ್ನ ಲಾಭದ ಶೇ. 5ನ್ನು ಶಿಕ್ಷಣ, ಸಮಾಜ ಸೇವೆಗೆ ಮಲಬಾರ್ ಗೋಲ್ಡ್ ವಿನಿಯೋಗಿಸುತ್ತಿದೆ ಎಂದರು.
ವಿಶಾಲ ಮಳಿಗೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಮತ್ತು ವಧುವಿನ ಆಭರಣಗಳು, ಪಾರ್ಟಿವೇರ್ ಮತ್ತು ಕ್ಯಾಷುವಲ್ ವೇರ್ ವಿನ್ಯಾಸಗಳ ಜತೆಗೆ ಬ್ರ್ಯಾಂಡೆಡ್ ವಾಚ್‌ಗಳ ಅಪಾರ ಸಂಗ್ರಹವಿದೆ. ರಾಜ್ಯದ ಸಂಸ್ಕೃತಿ ಮತ್ತು ಆಚರಣೆಗೆ ತಕ್ಕುದಾದ ಚಿನ್ನ ಮತ್ತು ಡೈಮಂಡ್ಸ್‌ಗಳ ಪ್ರದರ್ಶನವಿದೆ. ವಿಶಾಲ ಕಾರು ಪಾರ್ಕಿಂಗ್ ವ್ಯವಸ್ಥೆ ಇದೆ. ಗ್ರಾಹಕರ ಅಭಿರುಚಿ ಮತ್ತು ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾದ ವಿನ್ಯಾಸವನ್ನು ರೂಪಿಸುವಲ್ಲಿ “ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್’ ಪ್ರಸಿದ್ಧವಾಗಿದೆ. ಮೈನ್, ಎರಾ, ಎಥಿ°ಕ್ಸ್, ಡಿವೈನ್, ಪ್ರಶಿಯ, ಸ್ಟಾರ್‌ಲೆಟ್ ಮೊದಲಾದ ಉಪಬ್ರ್ಯಾಂಡ್‌ಗಳ ಆಕರ್ಷಕ ಸಂಗ್ರಹವಿದೆ ಎಂದು ಉಡುಪಿ ಶೋರೂಂ ವ್ಯವಸ್ಥಾಪಕರು ತಿಳಿಸಿದರು.
Related Articles
ಉದ್ಘಾಟನಾ ಕೊಡುಗೆಯಾಗಿ ಜು. 7ರಿಂದ 15ರ ವರೆಗೆ ಎಲ್ಲ ವಜ್ರಗಳ ಮೇಲೆ ಶೇ. 10 ದರಕಡಿತ ಮತ್ತು ಪ್ರತಿ ಗ್ರಾಂ ಚಿನ್ನಾಭರಣಗಳಿಗೆ 100 ರೂ. ದರ ಕಡಿತ, ಪ್ರತೀ ಖರೀದಿಗೆ ಒಂದು ಉಚಿತ ಗಿಫ್ಟ್ ಇರುತ್ತದೆ. ಮೊದಲ ದಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
Advertisement
ಸ್ವಚ್ಛತೆ, ಸೇವಾ ಕಾರ್ಯಗಳಿಗೆ ಆದ್ಯತೆಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮಿಸ್‌ವರ್ಲ್ಡ್ ಮಾನುಷಿ ಚಿಲ್ಲರ್, ಇನ್ನೊಂದು ವರ್ಷ ಕಾಲ ಸಿನೆಮಾ ಬಗ್ಗೆ ಯೋಚಿಸುವುದಿಲ್ಲ. ಮಿಸ್‌ವರ್ಲ್ಡ್ ಪ್ರಾಜೆಕ್ಟ್ಗಳಲ್ಲಿ 180 ಕಾರ್ಯಕ್ರಮಗಳಿದ್ದು, ಸ್ವಚ್ಛತೆಗೆ ಒತ್ತು ನೀಡುತ್ತೇನೆ. ದ.ಆಫ್ರಿಕಾದಲ್ಲೂ ಸೇವಾ ಕಾರ್ಯ ನಡೆಸುತ್ತೇನೆ. ನಮ್ಮ ದೇಶದಲ್ಲಿ ಶೇ. 23 ಹೆಣ್ಮಕ್ಕಳು ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಭಾರತವು ಹೆಣ್ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದು ನನಗೇನೂ ಅನಿಸಿಲ್ಲ. ಭಾರತದ ಹೆಣ್ಮಗಳಾಗಿರುವುದಕ್ಕೆ ಹೆಮ್ಮೆಯಿದೆ ಎಂದರು. ಮಾನುಷಿ ಅವರನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಮತ್ತು ಆಟೋಗ್ರಾಫ್ ಪಡೆಯಲು ನೂರಾರು ಮಂದಿ ಸೇರಿದ್ದರು. ಮಾನುಷಿ ಸ್ವಲ್ಪ ಹೊತ್ತು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು.