Advertisement
ಮಂಗಳೂರಿನಲ್ಲಿರುವಂತೆಯೇ ಉಡುಪಿ ಜಿಲ್ಲೆಯಲ್ಲೂ ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಒಟ್ಟು 759 ದೇವಸ್ಥಾನಗಳಿವೆ. ಇದಲ್ಲದೇ ವರ್ಗೀಕರಣಗೊಂಡ ದೇವಸ್ಥಾನಗಳೂ ಇವೆ. ಇಲಾಖೆ ದೇವಸ್ಥಾನಗಳಲ್ಲಿ ಗ್ರೂಪ್ ಎ ಯಲ್ಲಿ 25, ಬಿಯಲ್ಲಿ 19, ಸಿಯಲ್ಲಿ 759 ದೇವಸ್ಥಾನಗಳಿವೆ. ಆದರೆ ಎಲ್ಲ ದೇವಸ್ಥಾನಗಳಲ್ಲೂ ಭಾರೀಸಂಖ್ಯೆಯಲ್ಲಿ ಅನ್ನ ಸಂತರ್ಪಣೆ ನಡೆಯುವುದು ಕಡಿಮೆ. ಜತೆಗೆ ಎಲ್ಲ ದೇವಸ್ಥಾನಗಳಲ್ಲೂ ನಿತ್ಯ ಅನ್ನ ಸಂತರ್ಪಣೆ ಇಲ್ಲ. ಬಹಳ ಪ್ರಮುಖವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆಯಿದ್ದು, ಸಾವಿರಾರು ಜನರು ಭೋಜನ ಸ್ವೀಕರಿಸುತ್ತಾರೆ.ಜತೆಗೆ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರೀ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯಗಳಲ್ಲಿ ನಿತ್ಯ ಅನ್ನದಾನ ಇದೆ. ಎಲ್ಲೆಡೆಯೂ ಅಡುಗೆ ಕೋಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೊಲ್ಲೂರಿನಲ್ಲಿ ಅಡುಗೆ ಕೋಣೆ ಹಾಗೂ ಅನ್ನಛತ್ರದಲ್ಲಿ ಸಿಸಿಟಿವಿ ಇನ್ನೂ ಅಳವಡಿಸಿಲ್ಲ. ಈ ವಾರದಲ್ಲಿ ಅಳವಡಿಸಲಾಗುವುದು ಎಂದು ದೇಗುಲದ ಪ್ರಮುಖರು ಹೇಳಿದ್ದಾರೆ.
ಶ್ರೀಕೃಷ್ಣಮಠದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಯುವುದಾದರೂ ಇದು ಮುಜರಾಯಿ ಇಲಾಖೆಗೆ ಸೇರಿಲ್ಲ. ಇಲ್ಲಿ ಸಾಮಾನ್ಯ ದಿನಗಳಲ್ಲಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಸೇರಿ ಸುಮಾರು ಹತ್ತು ಸಾವಿರ ಮಂದಿ ಊಟ ಮಾಡುತ್ತಾರೆ. ಶಾಲೆಗಳಿಗೆ ರಜೆ ಇರುವಾಗ, ವಿಶೇಷ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಪ್ರಸ್ತುತ ಭೋಜನ ಶಾಲೆಯಲ್ಲಿ ಸಿಸಿಟಿವಿ ವ್ಯವಸ್ಥೆ ಇದೆ. ಆದರೆ ಅಡುಗೆ ಕೋಣೆಗೆ ಅಳವಡಿಸಬೇಕಿದೆ. ಆನೆಗುಡ್ಡೆ ದೇವಸ್ಥಾನದಲ್ಲಿ ನಿತ್ಯ ಭೋಜನವಿದೆ. ಇದಲ್ಲದೆ ಅಂಬಲಪಾಡಿ, ಕಾಪು ಮಾರಿಗುಡಿ, ಬನ್ನಂಜೆ ಮಹಾಲಿಂಗೇಶ್ವರ ಮೊದಲಾದ ಸುಮಾರು 20 ದೇವಸ್ಥಾನಗಳಲ್ಲಿ ಸೋಮವಾರ, ಮಂಗಳವಾರ, ಶುಕ್ರವಾರ ಹೀಗೆ ಒಂದೊಂದೆಡೆ ಒಂದೊಂದು ದಿನ ಭೋಜನ ಪ್ರಸಾದದ ವಿತರಣೆ ನಡೆಯುತ್ತಿದೆ.
Related Articles
ಸೇರಿ 18, ದೇವಸ್ಥಾನದ ವಠಾರದಲ್ಲಿ 18, ಬೀದಿಯಲ್ಲಿ ನಾಲ್ಕು ಒಟ್ಟು 40 ಸಿಸಿಟಿವಿ ಅಳವಡಿಸಲಾಗಿದೆ.
ಇದಲ್ಲದೇ ಪೆರ್ಡೂರು, ನೀಲಾವರ, ಮಾರಣಕಟ್ಟೆ, ಮುಂಡ್ಕೂರು ದೇವಸ್ಥಾನಗಳಲ್ಲಿ ನಿತ್ಯ ಅನ್ನಸಂತರ್ಪಣೆಯಿದ್ದು, ಸ್ವತ್ಛತೆಗೆ ಗಮನಕೊಡಲಾಗಿದೆ.
Advertisement
ಅಳವಡಿಕೆಗೆ ಕ್ರಮಜಿಲ್ಲೆಯ ಎ ಮತ್ತು ಬಿ ಶ್ರೇಣಿಯ ದೇವಸ್ಥಾನಗಳ ಪಾಕಶಾಲೆ, ಸಾಮಾನು ದಾಸ್ತಾನು ಕೋಣೆಗಳಿಗೆ ಸಿಸಿಟಿವಿ ಅಳವಡಿಸಿದ್ದು, ಉಳಿದವು ಜಾರಿಯಲ್ಲಿದೆ.
ಪ್ರಶಾಂತ ಶೆಟ್ಟಿ,ತಹಶೀಲ್ದಾರ್, ಮುಜರಾಯಿ ಇಲಾಖೆ, ಉಡುಪಿ. ಅಳವಡಿಸಲು ಸಮಸ್ಯೆ ಇಲ್ಲ. ಶ್ರೀಕೃಷ್ಣಮಠದ ಭೋಜನ ಶಾಲೆಯಲ್ಲಿ ಸಿಸಿಟಿವಿ ಈಗಾಗಲೇ ಇದೆ. ಮುಂದೆ ಅಡುಗೆ ಕೋಣೆಗೂ ಅಳವಡಿಸಬೇಕೆಂದರೆ ಅಳವಡಿಸಬಹುದು.
ಪ್ರಹ್ಲಾದ ಆಚಾರ್ಯ, ಆಡಳಿತಾಧಿಕಾರಿ, ಶ್ರೀಕೃಷ್ಣ ಮಠ ಪರ್ಯಾಯ ಶ್ರೀಪಲಿಮಾರು ಮಠ, ಉಡುಪಿ.