Advertisement

ಉಡುಪಿ ಸಬ್‌ರಿಜಿಸ್ಟ್ರಾರ್‌ ಕಚೇರಿ; ಭೂ ಕಡತ ನೋಂದಣಿ 6 ಪಟ್ಟು ಏರಿಕೆ

07:39 PM Jul 09, 2020 | Sriram |

ಉಡುಪಿ: ಉಡುಪಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಕುಸಿತಗೊಂಡಿದ್ದ ಭೂಮಿ ನೋಂದಣಿ ಇದೀಗ ಗರಿಗೆದರಿದೆ. ಆಸ್ತಿ ಖರೀದಿದಾರರು, ಮಾರಾಟಗಾರರು ನೋಂದಣಿಗಾಗಿ ಕಚೇರಿಗಳತ್ತ ಬರುತ್ತಿದ್ದಾರೆ.

Advertisement

2020-21ನೇ ಸಾಲಿನ ಎಪ್ರಿಲ್‌ನಲ್ಲಿ 51 ಹಾಗೂ ಮೇ ನಲ್ಲಿ 520, ಜೂನ್‌ನಲ್ಲಿ ಸುಮಾರು 600ಕ್ಕೂ ಅಧಿಕ ಭೂಮಿಗಳ ನೋಂದಣಿಯಾಗಿದ್ದು ಅದರಿಂದ ಕ್ರಮವಾಗಿ 24.13 ಲ.ರೂ., 1.93 ಕೋ.ರೂ., 2.30 ಕೋ.ರೂ. ರಾಜಸ್ವ ಸಂಗ್ರಹವಾಗಿದೆ.

ಇದೇ ಸಂದರ್ಭದಲ್ಲಿ 2018 ಹಾಗೂ 19ನೇ ಸಾಲಿನ ಎಪ್ರಿಲ್‌ನಲ್ಲಿ ಕ್ರಮ ವಾಗಿ 1,168 ಮತ್ತು 1,186 ಭೂಮಿ, ಮೇ ತಿಂಗಳಿನಲ್ಲಿ 1,036 ಮತ್ತು 1,500 ಭೂಮಿ ಕಡತಗಳು ನೊಂದಣಿಯಾ ಗಿದ್ದು, ಸುಮಾರು 13.50 ಕೋ.ರೂ. ರಾಜಸ್ವ ಸಂಗ್ರಹವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಭೂಮಿ ನೋಂದಣಿ ಸಂಖ್ಯೆ ಆರು ಪಟ್ಟು ಏರಿಕೆಯಾಗಿದ್ದು, ಆದಾಯ 26 ಲ.ರೂ.ನಿಂದ 66.18 ಕೋ.ರೂ.ಗೆ ಏರಿಕೆ ಯಾಗಿದೆ.

300-1000 ಕಡತ ನೊಂದಣಿ
1986-87ರಿಂದ 2009-10ರ ಅವಧಿ ಮಧ್ಯೆ ಉಡುಪಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಭೂಮಿ ಕಡತ ಗಳ ನೊಂದಣಿಯಾಗುವ ಭೂಮಿ ಕಡತ ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸರಾಸರಿ 300ರಿಂದ 900 ಕಡತಗಳು ನೋಂದಣಿಯಾಗುತ್ತಿತ್ತು. 2010-11 ಹಾಗೂ 2011-12ರಲ್ಲಿ ಭೂಮಿ ನೋಂದಣಿ ಸಂಖ್ಯೆ ಕ್ರಮವಾಗಿ 11,169 ಹಾಗೂ 13,096 ದಾಟಿತ್ತು. ಅನಂತರ ವರ್ಷದಲ್ಲಿ ಭೂಮಿ ನೋಂದಣಿಯಾಗುವ ಸಂಖ್ಯೆ ಹಿಂದಿನ ವರ್ಷಕ್ಕಿಂತ 300ರಿಂದ 900 ಕಡತಗಳು ಹೆಚ್ಚಿಗೆಯಾಗುತ್ತಿತ್ತು.

ಗುರಿ ತಲುಪಲು ಪರದಾಟ
ಪ್ರತಿ ವರ್ಷ ಇಲಾಖೆಯಿಂದ ನೀಡುವ ಗುರಿಯನ್ನು ಮುಟ್ಟುವಲ್ಲಿ ಉಡುಪಿ ಸಬ್‌ ರಿಜಿಸ್ಟ್ರಾರ್‌ ಕಚೇರಿ ಹರಸಾಹಸ ಪಡುತ್ತಿದೆ. 2019-20ರಲ್ಲಿ 70 ಕೋ.ರೂ. ರಾಜಸ್ವ ಸಂಗ್ರಹದ ಗುರಿಯನ್ನು ನೀಡಿದ್ದು, ಅದರಲ್ಲಿ ಉಡುಪಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯು 66.18 ಕೋ.ರೂ. ರಾಜಸ್ವ ಸಂಗ್ರಹಿಸಿತ್ತು. 9/11 ಬಂದ ಅನಂತರ ನೋಂದಣಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹೊಸ ಪ್ರಾಜೆಕ್ಟ್ಗಳು ಬರುತ್ತಿಲ್ಲ. ಲೋನ್‌ ಡಾಕ್ಯುಮೆಂಟ್‌ ಕ್ಲಿಯರ್‌ ಮಾಡಲಾಗುತ್ತಿದೆ. ನಿತ್ಯ 5ರಿಂದ 6 ಸೇಲ್‌ ಡೀಡ್‌ ನೋಂದಾಯಿಸಲಾಗುತ್ತಿದೆ. ಈ ಹಿಂದೆ ಸೇಲ್‌ ಡೀಡ್‌ ನೋಂದಣಿ ಸಂಖ್ಯೆ ದಿನವೊಂದಕ್ಕೆ 15ರಿಂದ 20 ಇತ್ತು.

Advertisement

6 ಪಟ್ಟು ಏರಿಕೆ!
1986-2019ರ ವರೆಗಿನ34 ವರ್ಷಗಳ ಸುಧೀರ್ಘ‌ ಅವಧಿಯಲ್ಲಿ ಉಡುಪಿ ಸಬ್‌ ರಿಜಿಸ್ಟ್ರಾರ್‌ಕಚೇರಿಯಲ್ಲಿ ಭೂಮಿ ಕಡತಗಳ ನೋಂದಣಿ 6 ಪಟ್ಟು ಏರಿಕೆ ಯಾಗಿದೆ. 1986-87ರಲ್ಲಿ 2,601 ಕಡತಗಳ ನೊಂದಣಿಯಾಗಿದ್ದು, 2019-20ರಲ್ಲಿ 12,245 ಭೂಮಿಯ ಕಡತಗಳು ನೋಂದಣಿ ಯಾಗಿವೆ. ಜತೆಗೆ ಮೂರು ದಶಕದಲ್ಲಿ ನಿವ್ವಳ ಆದಾಯ 26.15 ಲ.ರೂ.ನಿಂದ 66.18 ಕೋ.ರೂ.ಗೆ ಹಾಗೂ ಕಚೇರಿಯ ವಾರ್ಷಿಕ ವೆಚ್ಚ ಸಹ 9,000ದಿಂದ 29.32 ಲ.ರೂ.ಗೆ ಏರಿಕೆಯಾಗಿದೆ.

ಪ್ರತಿನಿತ್ಯ 5ರಿಂದ 6 ಭೂಕಡತ ನೋಂದಣಿ ಕೋವಿಡ್‌ದಿಂದ ಉಡುಪಿ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ಭೂಮಿ ನೊಂದಣಿ ಸಂಖ್ಯೆ ಕುಸಿತವಾಗಿದ್ದು , ಇದೀಗ ನಿತ್ಯ 5ರಿಂದ 6 ಭೂ ಕಡತಗಳು ನೋಂದಣಿಯಾಗುತ್ತಿದೆ.
-ಫ‌ಣೀಂದ್ರ, ಹಿರಿಯ ಉಪನೋಂದಣಾಧಿಕಾರಿ,
ಉಡುಪಿ ಸಬ್‌ರಿಜಿಸ್ಟ್ರಾರ್‌ ಕಚೇರಿ

Advertisement

Udayavani is now on Telegram. Click here to join our channel and stay updated with the latest news.

Next