Advertisement
ಮಂಗಳವಾರ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಐದು ದಿನಗಳ ಕಾಲ ಜರಗುವ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವರಾದ ಉಮಾಭಾರತಿ, ಅನಂತ ಕುಮಾರ್, ಸದಾನಂದ ಗೌಡ, ಕಾಂಗ್ರೆಸ್ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಸಂತೋಷ್ ಲಾಡ್, ಬಿಜೆಪಿಯ ಶಂಕರಮೂರ್ತಿ, ನಾಗಾಧಿಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ ಮತ್ತಿತರರು ಭಾಗವಹಿಸಲಿದ್ದಾರೆ.
ಪೇಜಾವರ ಪಂಚಮ ಪರ್ಯಾಯದಂತೆ ಉತ್ತಮ ರೀತಿಯಲ್ಲಿ ಹೊರೆಕಾಣಿಕೆಯನ್ನು ಅರ್ಪಿಸಲು ನಿರ್ಧರಿಸಲಾಗಿದ್ದು, ಮೇ 16ರಂದು ಹೊರೆಕಾಣಿಕೆ ಮೆರವಣಿಗೆ ಜರಗಲಿದೆ. ಬ್ರಹ್ಮಕಲಶಗಳನ್ನು ಹೊತ್ತು ತರುವ ವಿಶೇಷ ಟ್ಯಾಬ್ಲೋ ರಚಿಸಲಾಗಿದೆ. ಅಂದು ಬೆಳಗ್ಗೆ ವಿಪ್ರ ಬಾಂಧವರಿಂದ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ವಿವಿಧ ಭಜನ ಮಂಡಳಿಗಳಿಂದ ಕುಳಿತು ಭಜನೆ ಜರಗಲಿದೆ. ಸಂಜೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.
Related Articles
ಕ್ರಮದಲ್ಲಿ ಉತ್ಕೃಷ್ಟ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೇ 14ರಂದು ಯಕ್ಷಗಾನ, ಮೇ 15ರಂದು ಶೀಲಾ ಉಣ್ಣಿಕೃಷ್ಣನ್ ಅವರಿಂದ ಭರತನಾಟ್ಯ, ಮೇ 16ರಂದು ರಾಮಕೃಷ್ಣಮೂರ್ತಿ ಅವರಿಂದ ಕರ್ನಾಟಕ ಸಂಗೀತ, ಮೇ 17ರಂದು ಕೃಷ್ಣೇಂದ ವಾಡೆಕರ್ ಅವರಿಂದ ಹಿಂದೂಸ್ತಾನಿ ಹಾಗೂ ಮೇ 18ರಂದು ಮುಂಬಯಿಯ ಜಾಗೋ ಭಾರತ್ ತಂಡದವರಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
Advertisement
ಸಭೆಯಲ್ಲಿ ವಿವಿಧ ಧಾರ್ಮಿಕ ಮುಖಂಡರು, ಉದ್ಯಮಿಗಳು ವಿಶೇಷ ಸಲಹೆ ಸೂಚನೆಗಳನ್ನು ನೀಡಿದರು. ಶ್ರೀಮಠದ ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.