Advertisement

ಶ್ರೀಕೃಷ್ಣಾಷ್ಟಮಿ ವಿಶೇಷ : ಉಡುಪಿ ಶ್ರೀಕೃಷ್ಣಮಠದಲ್ಲಿ ಬಾಲಕೃಷ್ಣಾಲಂಕಾರ

05:18 PM Aug 30, 2021 | Team Udayavani |

ಉಡುಪಿ : ಶ್ರೀಕೃಷ್ಣಮಠದಲ್ಲಿ ದಿನವೂ ಬಗೆಬಗೆಯ ಅಲಂಕಾರಗಳನ್ನು ಶ್ರೀಕೃಷ್ಣನಿಗೆ ಮಾಡಿ ಪೂಜಿಸುವ ಕ್ರಮವಿದೆ. ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ/ ಕೃಷ್ಣ ಜಯಂತಿ ಪ್ರಯುಕ್ತ ಸೋಮವಾರ ಬಾಲಕೃಷ್ಣನ ಅಲಂಕಾರ ಮಾಡಿ ಪೂಜಿಸಲಾಯಿತು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಅಲಂಕಾರ ಪೂಜೆ ನಡೆಸಿದರೆ, ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.

Advertisement

ಮಥುರಾ ಪಟ್ಟಣದ ಸೆರೆಮನೆಯಲ್ಲಿ ವಸುದೇವ – ದೇವಕಿಯರಿಗೆ ಶ್ರೀಕೃಷ್ಣ ಹುಟ್ಟಿದ್ದರೂ ಈತನನ್ನು ಮುದ್ದಿಸಿ ಬೆಳೆಸುವ ಅವಕಾಶ ಸಿಕ್ಕಿದ್ದು ಗೋಪಾಲಕರಾದ ನಂದಗೋಪ- ಯಶೋದೆಯರಿಗೆ. ಕಶ್ಯಪ – ಅದಿತಿ ಋಷಿ ದಂಪತಿಗಳು ಅವರು ತಪಸ್ಸು ಮಾಡಿ ಬೇಡಿಕೊಂಡಂತೆ ವಸುದೇವ ದೇವಕಿಯಾಗಿ ಜನಿಸಿ ಶ್ರೀಕೃಷ್ಣ ಪರಮಾತ್ಮನನ್ನು ಪಡೆದರು ಎಂದು ಪುರಾಣಗಳು ಸಾರುತ್ತವೆ. ಕೃಷ್ಣನ ಸೂಚನೆಯಂತೆ ಮಗುವನ್ನು ವಸುದೇವ ರಾತ್ರಿ ಯಮುನಾ ನದಿ ದಾಟಿ ನಂದಗೋಪ- ಯಶೋದೆಯರು ಇರುವ ವ್ರಜ ಭೂಮಿಗೆ (ಬೃಂದಾವನ) ಕರೆದೊಯ್ಯುತ್ತಾನೆ. ಅಲ್ಲಿ ಹುಟ್ಟಿದ ಹೆಣ್ಣು ಶಿಶುವನ್ನು ತಂದು ಸೆರೆಮನೆಯಲ್ಲಿ ಇರಿಸುತ್ತಾನೆ.

ಹೀಗೆ ಕೃಷ್ಣನನ್ನು ಸಾಕಿ ಆಡಿಸುವ ಭಾಗ್ಯ ದೊರಕಿದ್ದು ಯಶೋದೆಗೆ. ಬಾಲಕೃಷ್ಣನಾಗಿ ತೋರಿದ ಲೀಲೆಗಳು ಅನೇಕ. ಯಶೋದೆಗೆ ಅತಿ ಪ್ರೀತಿಪಾತ್ರನಾದ, ತುಂಟಾಟಗಳನ್ನು ನಡೆಸಿದ ಕೃಷ್ಣನನ್ನು ಆತನ ಜನ್ಮದಿನದಂದು ಬಾಲಕೃಷ್ಣನಾಗಿ ಅಲಂಕರಿಸಿ ಪೂಜಿಸಲಾಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next