Advertisement

ಉಡುಪಿ: ಪೊಲೀಸ್‌ ಸಹಿತ ಕೆಲವರಿಗೆ ಸೋಂಕು

07:20 AM Jun 22, 2020 | mahesh |

ಉಡುಪಿ: ಬೈಂದೂರಿನ ಪೊಲೀಸ್‌ ಸಿಬಂದಿ, ಬೈಂದೂರು ತಾಲೂಕಿನ ಆಸ್ಪತ್ರೆಯೊಂದರ ಸಿಬಂದಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಕೆಲವರಿಗೆ ಸೋಂಕು ತಗಲಿರುವುದು ರವಿವಾರ ದೃಢವಾಗಿದೆ. ಆದರೆ ರಾಜ್ಯ ಮಟ್ಟದಿಂದ ಅಧಿಕೃತವಾಗಿ ಸೋಮವಾರ ಪ್ರಕಟನೆ ಹೊರಬೀಳಲಿದೆ.

Advertisement

ರವಿವಾರ 112 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಉಸಿರಾಟದ ಸಮಸ್ಯೆಯವರು ಐವರು, ಕೋವಿಡ್ ಶಂಕಿತರು 17 ಮಂದಿ, ಕೊರೊನಾ ಸಂಪರ್ಕಿತರು 22, ಜ್ವರ ಬಾಧಿತರು 8, ಹಾಟ್‌ಸ್ಪಾಟ್‌ನವರು 60 ಮಂದಿ ಇದ್ದಾರೆ. ಒಟ್ಟು 1,063 ಸೋಂಕಿತರಲ್ಲಿ 965 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು 96 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 267 ಜನರ ಮಾದರಿಗಳ ವರದಿ ಬರಬೇಕಿದೆ. ಪ್ರಸ್ತುತ 741 ಮಂದಿ ಮನೆಗಳಲ್ಲಿ, 81 ಮಂದಿ ಐಸೊಲೇಶನ್‌ ವಾರ್ಡ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. 11 ಮಂದಿ ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದು ಇಬ್ಬರು ಬಿಡುಗಡೆಗೊಂಡಿದ್ದಾರೆ.

ಕೇರಳ ವೃದ್ಧೆಯ ವರದಿ ನೆಗೆಟಿವ್‌
ಬೆಳ್ಮಣ್‌: ಸಂಕಲಕರಿಯದಲ್ಲಿರುವ ಪುತ್ರನ ನಿವಾಸಕ್ಕೆ ಗುರುವಾರ ಕೇರಳದಿಂದ ಆಗಮಿಸಿ ಶುಕ್ರವಾರ ಮೃತಪಟ್ಟ 95 ವರ್ಷದ ವೃದ್ಧೆಯ ಗಂಟಲದ್ರವದ ವರದಿ ಬಂದಿದ್ದು, ಕೊರೊನಾ ಇಲ್ಲವೆಂದು ದೃಢಪಟ್ಟಿದೆ. ಸ್ಥಳೀಯರಲ್ಲಿ ನೆಲೆಸಿದ್ದ ಆತಂಕ ದೂರವಾಗಿದೆ. ರವಿವಾರ ಶವ ಸಂಸ್ಕಾರ‌ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next