Advertisement

ಉಡುಪಿ: ಸ್ಮತಿ ಶೆಣೈ ಭರತನಾಟ್ಯ ರಂಗಪ್ರವೇಶ

02:45 AM Jul 14, 2017 | Team Udayavani |

ಉಡುಪಿ: ಕ್ಲಾಸಿಕಲ್‌ ರಿಧಮ್ಸ್‌ ಆಶ್ರಯದಲ್ಲಿ ರವಿವಾರ ಕುಂಜಿಬೆಟ್ಟಿನ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿದ ಸ್ಮತಿ ಶೆಣೈ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಿತು. 

Advertisement

ದೀಪಾ ಹಾಗೂ ದಯಾನಂದ ಶೆಣೈ ದುಬೈ ಅವರ ಪುತ್ರಿ ಸ್ಮತಿ, ಕ್ಲಾಸಿಕಲ್‌ ರಿಧಮ್ಸ್‌ನ ಗುರು ವಿದುಷಿ ರೋಹಿಣಿ ಅನಂತ್‌ ಅವರ ಶಿಷ್ಯೆ. ಪುಷ್ಪಾಂಜಲಿ, ಗಣೇಶ ಸ್ತುತಿ, ಅಲ್ಲಾರಿಪು, ಜತೀಸ್ವರಂ, ಕೃತಿ, ವರ್ಣಂ, ಪದಂ, ದೇವರನಾಮ, ಜಾವಲಿ, ತಿಲ್ಲಾಣ, ಮಂಗಳಂ ನೃತ್ಯಗಳನ್ನು ಕನ್ನಡ, ಕೊಂಕಣಿ, ತೆಲುಗು, ತುಳು, ಸಂಸ್ಕೃತ ಬಾಷಾ ಹಾಡಿನ ಹಿಮ್ಮೇಳದಲ್ಲಿ ಸತತ 2.30 ಗಂಟೆಗಳ ಕಾಲ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. 

ಹಿಮ್ಮೇಳದಲ್ಲಿ ವಿದುಷಿ ಲಾವಣ್ಯ ಕೃಷ್ಣಮೂರ್ತಿ ಅವರ ಹಾಡುಗಾರಿಕೆ, ಮೃದಂಗಂನಲ್ಲಿ ವಿದ್ವಾನ್‌ ಬಾಲಚಂದ್ರ ಭಾಗವತ್‌ ಉಡುಪಿ, ವಯಲಿನ್‌ನಲ್ಲಿ ವಿದ್ವಾನ್‌ ಟಿ.ಎಸ್‌. ಕೃಷ್ಣಮೂರ್ತಿ, ಕೊಳಲು ವಾದನದಲ್ಲಿ ಕೆ. ಮುರಳೀಧರ್‌ ಅವರು ಸಾಥ್‌ ನೀಡಿದರು.     ಈಕೆ ಭಾರತ ಹಾಗೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಹಲವು ನೃತ್ಯ ಪ್ರದರ್ಶನಗಳನ್ನು ನೀಡಿದ್ದಲ್ಲದೆ, ಕರ್ನಾಟಕ ಕಲಾಶ್ರೀ ವಿದುಷಿ ರಂಗನಾಯಕಿ ರಾಜನ್‌ ಅವರ ಮಾರ್ಗದರ್ಶನದಲ್ಲಿ ಕರ್ನಾಟಿಕ್‌ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದು, ಮುಂದೆ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿಯೇ ಮುಂದುವರಿಯುವ ಆಶಯ ವ್ಯಕ್ತಪಡಿಸಿದರು. 

ಪ್ರಶಸ್ತಿ ವಿಜೇತ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮಾತನಾಡಿ, 10ನೇ ತರಗತಿ ಕಲಿಯುವ ವೇಳೆಗೆ ಹೆಚ್ಚಿನ ಮಕ್ಕಳು ನೃತ್ಯ ಹಾಗೂ ಕಲಾ ತರಗತಿಗಳಿಂದ ದೂರವಾಗುತ್ತಿರುವುದು ಖೇದಕರ. ಆದರೂ ಸ್ಮತಿ ಶೆಣೈ ಭರತನಾಟ್ಯವನ್ನು ಮುಂದೆಯೂ ಪ್ರವೃತ್ತಿಯಾಗಿ ಮುಂದುವರಿಸಿಕೊಂಡು ಹೋಗುವ ಆಶಯ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದರು. 

ನೃತ್ಯ ನಿಕೇತನ ಕೊಡವೂರು ಇದರ ಸ್ಥಾಪಕ ನಿರ್ದೇಶಕ ವಿದ್ವಾನ್‌ ಸುಧೀರ್‌ ರಾವ್‌, ವಿದುಷಿ ರೋಹಿಣಿ ಅನಂತ್‌ ಶುಭ ಹಾರೈಸಿದರು. ಇದೇ ಸಂದರ್ಭ ಸ್ಮತಿ ಅವರು ಅಲೆವೂರಿನ ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ 6 ಮಂದಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ ಅವರಿಗೆ ಹಸ್ತಾಂತರಿಸಿದರು. ಶ್ರುತಿ ಶೆಣೈ ಸ್ವಾಗತಿಸಿ, ನಮ್ಮ ಕುಡ್ಲ ವಾಹಿನಿಯ ಪ್ರಿಯಾ ಹರೀಶ್‌ ಕಾರ್ಯಕ್ರಮ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next